ITBP SI recruitment 2022: ಪಿಯುಸಿ ಪಾಸಾದವರಿಗೆ ಬಾರ್ಡರ್ ಪೊಲೀಸ್​ನಲ್ಲಿದೆ ಉದ್ಯೋಗಾವಕಾಶ

| Updated By: ಝಾಹಿರ್ ಯೂಸುಫ್

Updated on: Aug 17, 2022 | 3:12 PM

ITBP SI recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ITBP ಯ ಅಧಿಕೃತ ವೆಬ್‌ಸೈಟ್ recruitment.itbpolice.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

ITBP SI recruitment 2022: ಪಿಯುಸಿ ಪಾಸಾದವರಿಗೆ ಬಾರ್ಡರ್ ಪೊಲೀಸ್​ನಲ್ಲಿದೆ ಉದ್ಯೋಗಾವಕಾಶ
ITBP SI Recruitment 2022
Follow us on

ITBP SI recruitment 2022: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP) ಸಬ್-ಇನ್ಸ್‌ಪೆಕ್ಟರ್ (ಸ್ಟಾಫ್ ನರ್ಸ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ITBP ಯ ಅಧಿಕೃತ ವೆಬ್‌ಸೈಟ್ recruitment.itbpolice.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

 ಹುದ್ದೆಗಳ ವಿವರಗಳು:
ಈ ನೇಮಕಾತಿಯ ಮೂಲಕ ಒಟ್ಟು 18 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಹುದ್ದೆಗಳ ವರ್ಗೀಕರಣ:

ಇದನ್ನೂ ಓದಿ
BECIL Recruitment 2022: ಬಿಇಸಿಐಎಲ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
SSC Recruitment 2022: ಎಸ್​​ಎಸ್​ಸಿ ಜೆಇ ಹುದ್ದೆಗಳ ನೇಮಕಾತಿ: ವೇತನ 1 ಲಕ್ಷ ರೂ.
NHAI Recruitment 2022: ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ: ವೇತನ 60 ಸಾವಿರ ರೂ.
BSNL Recruitment 2022: BSNL ಕರ್ನಾಟಕದಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ನೇಮಕಾತಿ ಮೂಲಕ 11 ಸಾಮಾನ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಗೆಯೇ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಇಂತಿಷ್ಟು ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ಇದರ ಮಾಹಿತಿ ಈ ಕೆಳಗಿನಂತಿದೆ.

  • UR- 11 ಹುದ್ದೆಗಳು
  • SC- 1 ಹುದ್ದೆ
  • ST- 2 ಹುದ್ದೆಗಳು
  • OBC- 2 ಹುದ್ದೆಗಳು
  • EWS- 2 ಹುದ್ದೆಗಳು

 

ಅರ್ಹತಾ ಮಾನದಂಡಗಳು:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಿಯುಸಿ/10+2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 21 ವರ್ಷದಿಂದ 30 ವರ್ಷಗಳ ನಡುವೆ ಇರಬೇಕು.

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ₹ 200 ಪಾವತಿಸಬೇಕಾಗುತ್ತದೆ. ಆದಾಗ್ಯೂ, ಮಾಜಿ ಸೈನಿಕರು, ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 15, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.