- TV9 Kannada Kannada News Photos Nishad Kumar's Historic Double Gold: Asian Para Games High Jump and Long Jump
ಏಷ್ಯನ್ ಪ್ಯಾರಾ ಗೇಮ್ಸ್: ಒಂದೇ ಆವೃತ್ತಿಯಲ್ಲಿ 2 ಚಿನ್ನದ ಪದಕ ಗೆದ್ದ ನಿಷಾದ್ ಕುಮಾರ್..!
ನಿಷಾದ್ ಕುಮಾರ್ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹೈಜಂಪ್ T47 ಮತ್ತು ಲಾಂಗ್ ಜಂಪ್ T47 ವಿಭಾಗಗಳಲ್ಲಿ ಎರಡು ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಹೈಜಂಪ್‌ನಲ್ಲಿ ಹೊಸ ಗೇಮ್ಸ್ ದಾಖಲೆ ನಿರ್ಮಿಸಿದ ಅವರು, ಒಂದೇ ಆವೃತ್ತಿಯಲ್ಲಿ ಎರಡು ಚಿನ್ನ ಗೆದ್ದ ಭಾರತದ ಮೂರನೇ ಪ್ಯಾರಾ ಅಥ್ಲೀಟ್ ಆಗಿದ್ದಾರೆ. ಬಾಲ್ಯದಲ್ಲಿ ಕೈ ಕಳೆದುಕೊಂಡರೂ, ಕ್ರೀಡೆಯನ್ನು ತಮ್ಮ ಶಕ್ತಿಯನ್ನಾಗಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
Updated on: Oct 20, 2026 | 8:14 PM

ಭಾರತದ ಪ್ಯಾರಾ ಅಥ್ಲೀಟ್ ನಿಷಾದ್ ಕುಮಾರ್ ಅವರು 2026 ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಮಂಗಳವಾರ ನಡೆದ ಪುರುಷರ ಹೈಜಂಪ್ T47 ವಿಭಾಗದಲ್ಲಿ ನಿಷಾದ್ ಕುಮಾರ್ ಅವರು ಹೊಸ ಗೇಮ್ಸ್ ದಾಖಲೆಯೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ(PC-PTI).

ಇದಕ್ಕೂ ಮುನ್ನ ಸೋಮವಾರ ನಡೆದ ಪುರುಷರ ಲಾಂಗ್ ಜಂಪ್ T47 ವಿಭಾಗದಲ್ಲೂ ಅವರು ಚಿನ್ನದ ಪದಕ ಗೆದ್ದಿದ್ದರು. ಸತತ ಎರಡು ದಿನಗಳಲ್ಲಿ ಎರಡು ವಿಭಿನ್ನ ಜಂಪ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನಿಷಾದ್ ಕುಮಾರ್ ವಿಶೇಷ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಏಷ್ಯನ್ ಪ್ಯಾರಾ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಗೆದ್ದ ಭಾರತದ ಮೂರನೇ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ(PC-PTI).

T47 ವಿಭಾಗವು ಕೈ ಅಥವಾ ಮಣಿಕಟ್ಟಿನ ಭಾಗದಲ್ಲಿ ಅಂಗವೈಕಲ್ಯ ಹೊಂದಿರುವ ಪ್ಯಾರಾ ಅಥ್ಲೀಟ್‌ಗಳಿಗಾಗಿ ಇರುವ ವಿಭಾಗವಾಗಿದೆ. ಸತತ ಎರಡು ದಿನಗಳಲ್ಲಿ ಎರಡು ವಿಭಿನ್ನ ಜಂಪ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ನಿಷಾದ್ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ(PC-PTI).

ಚೀನಾದ ಹಾಂಗ್‌ಝೌನಲ್ಲಿ ನಡೆದ ಹಿಂದಿನ ಆವೃತ್ತಿಯಲ್ಲಿ ಭಾರತದ ಓಟಗಾರ ಅಂಕುರ್ ಧಾಮಾ ಅವರು ಪುರುಷರ 5000 ಮೀಟರ್ T11 ಹಾಗೂ 1500 ಮೀಟರ್ T11 ಸ್ಪರ್ಧೆಗಳಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದರು. ಅದೇ ಆವೃತ್ತಿಯಲ್ಲಿ ಎರಡೂ ಕೈಗಳಿಲ್ಲದಿದ್ದರೂ ಬಿಲ್ಲುಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿದ್ದ ಯುವ ಆಟಗಾರ್ತಿ ಶೀತಲ್ ದೇವಿ ಅವರು ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಓಪನ್ ಹಾಗೂ ಮಿಶ್ರ ತಂಡ ಕಾಂಪೌಂಡ್ ಓಪನ್ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು(PC-PTI).

ಇದೀಗ ನಿಷಾದ್ ಕುಮಾರ್ ಕೂಡ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕ ಗೆಲ್ಲುವ ಮೂಲಕ ಈ ವಿಶೇಷ ಸಾಧನೆ ಮಾಡಿದ ಭಾರತದ ಮೂರನೇ ಪ್ಯಾರಾ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನಿಷಾದ್ ಕುಮಾರ್ ಅವರ ಈ ಸಾಧನೆಯ ಹಿಂದಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಅಂಬ ಪ್ರದೇಶದವರಾದ ನಿಷಾದ್, ತಮ್ಮ ಆರನೇ ವಯಸ್ಸಿನಲ್ಲೇ ದೊಡ್ಡ ಆಘಾತವನ್ನು ಎದುರಿಸಿದ್ದರು(PC-PTI).

ತಮ್ಮ ಜಮೀನಿನಲ್ಲಿ ಹುಲ್ಲು ಕತ್ತರಿಸುವ ಯಂತ್ರಕ್ಕೆ ಸಿಲುಕಿದ ಪರಿಣಾಮ ಅವರು ಬಲಗೈಯನ್ನು ಕಳೆದುಕೊಂಡಿದ್ದರು. ಬಾಲ್ಯದಲ್ಲೇ ಇಂತಹ ಕಷ್ಟ ಎದುರಾದರೂ ನಿಷಾದ್ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಜೀವನದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತ ಅವರು ಕ್ರೀಡೆಯನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡರು. ಇಂದು ದೇಶದ ಹೆಮ್ಮೆಯ ಕ್ರೀಡಾಪಟುವಾಗಿದ್ದಾರೆ(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More