ನಾಳೆ ಚನ್ನಪಟ್ಟಣದಲ್ಲಿ ಉದ್ಯೊಗ ಮೇಳ: SSLC ಫೇಲ್ ಆಗಿದ್ರೂ ಜಾಬ್ ಸಿಗುತ್ತೆ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ಫುಲ್ ಆ್ಯಕ್ಟಿವ್ ಆಗಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೂ ಮುನ್ನ ಸರಣಿ ಕಾರ್ಯಕ್ರಮ ಮಾಡಲಾಗುತ್ತಿದೆ. ಜನಸಂಪರ್ಕ ಸಭೆ ಬಳಿಕ ಇದೀಗ ಉದ್ಯೋಗ ಮೇಳವನ್ನು ಸರ್ಕಾರ ಆಯೋಜಿಸಿದೆ.
ರಾಮನಗರ, ಆಗಸ್ಟ್ 29: ಜಿಲ್ಲೆಯ ಚನ್ನಪಟ್ಟಣದಲ್ಲಿ ಸರ್ಕಾರದ ವತಿಯಿಂದ ಸರಣಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಜನಸಂಪರ್ಕ ಸಭೆ ಬಳಿಕ ಇದೀಗ ನಾಳೆ (ಆ. 30) ಉದ್ಯೊಗ ಮೇಳ (job fair) ಆಯೋಜನೆ ಮಾಡಲಾಗಿದೆ. ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಯೊಗ ಮೇಳವನ್ನು ಉದ್ಘಾಟಿಸಲಿದ್ದಾರೆ.
ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ಭಾಗಿಯಾಗಲಿದ್ದು, ಎಲ್ಲಾ ಕಂಪನಿಗಳನ್ನು ಸರ್ಕಾರ ಚನ್ನಪಟ್ಟಣಕ್ಕೆ ಕರೆತರುತ್ತಿದೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ಫುಲ್ ಆ್ಯಕ್ಟಿವ್ ಆಗಿದ್ದಾರೆ.
ಇದನ್ನೂ ಓದಿ: job fair: ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳ: ಸಹಾಯವಾಣಿ ಬಿಡುಗಡೆ
ಹಾಗಾಗಿ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೂ ಮುನ್ನ ಸರಣಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಉದ್ಯೋಗ ಮೇಳಕ್ಕೆ ಬಿಜೆಪಿ ಎಂಎಲ್ಸಿ ಸಿ.ಪಿ.ಯೋಗೇಶ್ವರ್ಗೂ ರಾಮನಗರ ಜಿಲ್ಲಾಡಳಿತದಿಂದ ಆಹ್ವಾನ ನೀಡಲಾಗಿದೆ.
ವಿದ್ಯಾರ್ಹತೆ ಏನು?
ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿರುವ ಉದ್ಯೋಗ ಮೇಳಕ್ಕೆ ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಎಲ್ಲಾ ಪದವೀಧರರು ಪಾಲ್ಗೊಳ್ಳಬಹುದಾಗಿದೆ.
ಇದನ್ನೂ ಓದಿ: ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್; ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಜಾಬ್ ಫೇರ್
ಉದ್ಯೋಗ ಮೇಳ ಬಗ್ಗೆ ರಾಮನಗರ ಡಿ ಸಿ ಯಶವಂತ್ ವಿ ಗುರುಕಾರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, 25 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶ ಇದೆ. 200 ಕ್ಕೂ ಹೆಚ್ಚು ಕಂಪನಿಗಳಿಂದ ಉದ್ಯೋಗ ಅವಕಾಶವಿದೆ. ಉದ್ಯೋಗ ಬಯಸಿ 8 ಸಾವಿರ ಜನ ನೊಂದಾಣಿ ಮಾಡಿದ್ದಾರೆ. ಹತ್ತನೇ ತರಗತಿ ಫೇಲ್ ಆದ ಯುವಕರಿಗೂ ಉದ್ಯೋಗ ಸಿಗಲಿದೆ. ಡಬಲ್ ಡಿಗ್ರಿ ಮಾಡಿದವರಿಗೂ ಅವಕಾಶ ಇದೆ ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.