LIC Recruitment 2021 | ದೇಶದ ಜೀವ ವಿಮಾ ಕ್ಷೇತ್ರದಲ್ಲಿ ದಿಗ್ಗಜ ಸಂಸ್ಥೆಯಾದ ಭಾರತೀಯ ಜೀವ ವಿಮಾ ಸಂಸ್ಥೆಯು (Life Insurance Corporation of India -LIC) ಇಂಜಿನಿಯರ್ ಮತ್ತು ಆಡಳಿತಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಎಲ್ಐಸಿ ಸಂಸ್ಥೆಯಲ್ಲಿ ಇಂಜಿನಿಯರ್ ಮತ್ತು ಆಡಳಿತಾಧಿಕಾರಿ ಅಂತಹ ಆಯಕಟ್ಟಿನ ಹುದ್ದೆ ಗಳಿಸಲು ತಡಮಾಡದೇ ಈಗಲೇ ಅರ್ಜಿ ಹಾಕಿಕೊಳ್ಳೀ… ಆಯ್ಕೆ ಪರೀಕ್ಷೆ ಯಾವಾಗ? ಹೇಗೆ? ಎಂಬೆಲ್ಲಾ ವಿವರ ಇಲ್ಲಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಸಂಸ್ಥೆಯ ಕಾಯಂ ಉದ್ಯೋಗಿಗಳನ್ನಾಗಿ ತೆಗೆದುಕೊಳ್ಳಲಾಗುವುದು ಮತ್ತು ಅವರಿಗೆ ಆರಂಭಿಕ ಹಂತದಿಂದಲೇ ತಿಂಗಳಿಗೆ 57,000 ರೂಪಾಯಿ ಜೊತೆಗೆ ಇನ್ನಿತರೆ ಭತ್ಯೆಗಳುಳ್ಳ ಸಂಬಳವನ್ನು ಎಲ್ಐಸಿ ನೀಡುತ್ತದೆ. ತಡವೇಕೆ ಅರ್ಜಿ ಹಾಕಿಕೊಳ್ಳೀ…
ಎಕ್ಸಾಂ ಯಾವಾಗ?ಹೇಗೆ? ಇಲ್ಲಿದೆ ವಿವರ
ಎಲ್ಐಸಿ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಇಂಜಿನಿಯರ್ (Assistant Engineers) ಮತ್ತು ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟೀವ್ ಆಫೀಸರ್ (Assistant Administrative Officer) ಹುದ್ದೆಗಳಿಗಾಗಿ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಯ್ಕೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಾ (AE, AAO preliminary exam -LIC) ಪರೀಕ್ಷೆ ಯಾವಾಗ, ಎಲ್ಲಿ, ಹೇಗೆ ಎಂಬುದನ್ನು ಅರಿತುಕೊಳ್ಳಿ.
ಸುಮಾರು 218 ಸ್ಥಾನಗಳಿಗೆ ಭರ್ತಿಯಾಗಲಿದ್ದು, ಪ್ರಾರಂಭಿಕ ಪರೀಕ್ಷೆಗಳು ಬಹು ಆಯ್ಕೆ ಉತ್ತರಗಳ ಆಧಾರದಲ್ಲಿ ಇರುತ್ತದೆ. ಅಂದರೆ ಎಂಸಿಕ್ಯು ಮಾದರಿಯಲ್ಲಿರುತ್ತೆ (multiple-choice questions-based MCQs).
ವಾಸ್ತವವಾಗಿ ಈ ಎರಡೂ ಹುದ್ದೆಗಳಿಗೆ ಪರೀಕ್ಷೆಗಳು 2020ನೇ ಸಾಲಿನ ಏಪ್ರಿಲ್ 4 ಶನಿವಾರದಂದು ನಡೆಯಬೇಕಿತ್ತು. ಆದರೆ ಮಹಾಮಾರಿ ಕೊರೊನಾ ಸೋಂಕಿನಿಂದಾಗಿ (COVID-19 pandemic) ಪರೀಕ್ಷೆಗಳು ನಡೆಯದೇ ಹೋದವು. ಅದನ್ನು ಮುಂದಕ್ಕೆ ಹಾಕಲಾಗಿ ಈಗ 2021ನೇ ಸಾಲಿನ ಆಗಸ್ಟ್ 28 ಶನಿವಾರದಂದು (August 28, 2021) ಅಂದ್ರೆ ಇನ್ನು ಮೂರು ವಾರಗಳ ಬಳಿಕ ನಡೆಯಲಿದೆ. ಆಸಕ್ತರು ಮಾಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್ಸೈಟ್ (licindia.in) ನೋಡಬಹುದು.
MCQ ಪ್ರಾರಂಭಿಕ ಪರೀಕ್ಷೆಗಳು ತಲಾ 100 ಅಂಕಗಳಿಗೆ ನಡೆಯುತ್ತದೆ. ಅದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುತ್ತದೆ. ಪರೀಕ್ಷೆಯ ಕಾಲಾವಧಿ 1 ಗಂಟೆ ಇರುತ್ತದೆ. ಇನ್ನು ರೀಸನಿಂಗ್ ವಿಭಾಗದಲ್ಲಿ (reasoning) 18 ಅಂಕ, ಇಂಗ್ಲೀಷ್ ಭಾಷೆಯಲ್ಲಿ 10 ಅಂಕ ಮತ್ತು ಕ್ವಾಂಟಿಟೇಟೀವ್ ಆಪ್ಟಿಟ್ಯೂಡ್ (quantitative aptitude) ವಿಭಾಗದಲ್ಲಿ ಕನಿಷ್ಠ 18 ಅಂಕ ಗಳಿಸಬೇಕು. ಪ್ರತಿ ವಿಭಾಗಕ್ಕೂ 20 ನಿಮಿಷ ಅವಧಿ ನಿಗದಿ ಮಾಡಲಾಗಿದೆ.
ಹೀಗೆ ಕನಿಷ್ಠ ಅಂಕ ಗಳಿಕೆಯೊಂದಿಗೆ ಮುಂದಿನ ಹಂತದಲ್ಲಿ ಮುಖ್ಯ ಪರೀಕ್ಷೆಯನ್ನು (main exam) ಎದುರಿಸಬಹುದು. ಅದರ ವಿವರ ಸದ್ಯಕ್ಕೆ ಲಭ್ಯವಾಗಿಲ್ಲ. ಅದಕ್ಕಾಗಿ ಸಂಸ್ಥೆಯ ವೆಬ್ಸೈಟ್ ಅನ್ನು ಕಾಲಕಾಲಕ್ಕೆ ಗಮನಿಸುತ್ತಿರಬೇಕು. ಒಟ್ಟು 300 ಅಂಕಗಳ Main Exam ನಲ್ಲಿ MCQs ಮತ್ತು ವಿವರವಾದ ಪರೀಕ್ಷೆ (descriptive type) ಪರೀಕ್ಷೆ ನಡೆಯುತ್ತದೆ.
ಅದೂ ತೇರ್ಗಡೆಯಾದ ಮೇಲೆ ಸಂದರ್ಶನ (interview) ನಡೆಯಲಿದೆ. ಇದೆಲ್ಲಾ ಒಂದು ಹಂತದಲ್ಲಿ ನಡೆದ ಮೇಲೆ ಮುಂದೆ ದಾಖಲಾತಿಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಬಳಿಕ ಅಂತಿಮವಾಗಿ 218 ಅಭ್ಯರ್ಥಿಗಳನ್ನು ಭಾತತೀಯ ಜೀವ ವಿಮಾ ಆಯ್ಕೆ ಮಾಡಿಕೊಳ್ಳಲಿದೆ.
Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು
(LIC 2021 recruitment Apply for AE and AAO positions check exam date and other details)