AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MNS Personnel Now Ex-Servicemen: ಮಿಲಿಟರಿ ನರ್ಸಿಂಗ್ ಸೇವಾ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಗುಡ್​ ನ್ಯೂಸ್​; ಮಾಜಿ ಸೈನಿಕ ಮಾನ್ಯತೆ, ಸರ್ಕಾರಿ ಸೌಲಭ್ಯಗಳು

ಮಿಲಿಟರಿ ನರ್ಸಿಂಗ್ ಸೇವೆ (MNS) ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಇನ್ನು ಮುಂದೆ ಅವರನ್ನು ಅಧಿಕೃತವಾಗಿ "ಮಾಜಿ ಸೈನಿಕರು" ಎಂದು ಪರಿಗಣಿಸಲಾಗುವುದು. ಈ ನಿರ್ಧಾರದಿಂದ MNS ಸಿಬ್ಬಂದಿಗೆ ಮರು ಉದ್ಯೋಗ, ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ, ವಯೋಮಿತಿ ಸಡಿಲಿಕೆ ಸೇರಿದಂತೆ ಹಲವು ಸೌಲಭ್ಯಗಳು ದೊರೆಯಲಿವೆ. ಇದು ದೇಶಸೇವೆ ಸಲ್ಲಿಸಿದ ನರ್ಸಿಂಗ್ ಸಿಬ್ಬಂದಿಯ ಭವಿಷ್ಯಕ್ಕೆ ಭದ್ರತೆಯನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.

MNS Personnel Now Ex-Servicemen: ಮಿಲಿಟರಿ ನರ್ಸಿಂಗ್ ಸೇವಾ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಗುಡ್​ ನ್ಯೂಸ್​; ಮಾಜಿ ಸೈನಿಕ ಮಾನ್ಯತೆ, ಸರ್ಕಾರಿ ಸೌಲಭ್ಯಗಳು
ಮಿಲಿಟರಿ ನರ್ಸಿಂಗ್ ಸೇವೆ
ಅಕ್ಷತಾ ವರ್ಕಾಡಿ
|

Updated on:Feb 11, 2026 | 4:39 PM

Share

ಮಿಲಿಟರಿ ನರ್ಸಿಂಗ್ ಸೇವೆ (Military Nursing Service – MNS) ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ರಕ್ಷಣಾ ಸಚಿವಾಲಯದಿಂದ ಮಹತ್ವದ ಮತ್ತು ಸಂತಸದ ಸುದ್ದಿ ದೊರೆತಿದೆ. ಇನ್ಮುಂದೆ MNS ಉದ್ಯೋಗಿಗಳನ್ನು ಅಧಿಕೃತವಾಗಿ “ಮಾಜಿ ಸೈನಿಕರು” (Ex-Servicemen) ಎಂದು ಪರಿಗಣಿಸಲಾಗುತ್ತದೆ. ಈ ನಿರ್ಧಾರದಿಂದ ಅವರಿಗೆ ಮರು ಉದ್ಯೋಗ (Re-employment) ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ಲಭ್ಯವಾಗಲಿವೆ. ಈ ಸಂಬಂಧ ರಕ್ಷಣಾ ಸಚಿವಾಲಯ ನಿಯಮಗಳಲ್ಲಿ ತಿದ್ದುಪಡಿ ಮಾಡಿ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ್ದು, ಅವು ಫೆಬ್ರವರಿ 9, 2026ರಿಂದಲೇ ಅನ್ವಯವಾಗುತ್ತಿವೆ.

ಕೇಂದ್ರ ಸರ್ಕಾರದ ಸಂವಿಧಾನದ ವಿಧಿ 309ರ ಅಡಿಯಲ್ಲಿ “ಮಾಜಿ ಸೈನಿಕರ (ಕೇಂದ್ರ ನಾಗರಿಕ ಸೇವೆಗಳು ಮತ್ತು ಹುದ್ದೆಗಳಲ್ಲಿ ಮರು ಉದ್ಯೋಗ) ತಿದ್ದುಪಡಿ ನಿಯಮಗಳು, 2026” ಅನ್ನು ಪ್ರಕಟಿಸಲಾಗಿದೆ. ಈ ತಿದ್ದುಪಡಿಯ ಮೂಲಕ ಮಾಜಿ ಸೈನಿಕರ ವ್ಯಾಖ್ಯಾನವನ್ನು ವಿಸ್ತರಿಸಿ, ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿನ MNS ಸಿಬ್ಬಂದಿಯನ್ನು ಕೂಡ ಅದರೊಳಗೆ ಸೇರಿಸಲಾಗಿದೆ. ಹುದ್ದೆ ಅಥವಾ ಶ್ರೇಣಿಯ ಭೇದವಿಲ್ಲದೆ, ಎಲ್ಲ MNS ಉದ್ಯೋಗಿಗಳಿಗೂ ಈ ಮಾನ್ಯತೆ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಈ ನಿರ್ಧಾರದಿಂದಾಗಿ MNS ಸಿಬ್ಬಂದಿಗೆ ಸೇವಾ ನಿವೃತ್ತಿಯ ನಂತರ ಮತ್ತೆ ಉದ್ಯೋಗ ಪಡೆಯುವುದು ಸುಲಭವಾಗಲಿದೆ. ಇನ್ನು ಮುಂದೆ ಅವರು ಇತರ ಮಾಜಿ ಸೈನಿಕರಂತೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹಾಗೂ ಆದ್ಯತೆಯ ಪ್ರಯೋಜನಗಳನ್ನು ಪಡೆಯಬಹುದು. ಗ್ರೂಪ್ C ನೇಮಕಾತಿಯಲ್ಲಿ ಶೇ.10 ಮೀಸಲಾತಿ ಮತ್ತು ಗ್ರೂಪ್ D ನೇಮಕಾತಿಯಲ್ಲಿ ಶೇ.20 ಮೀಸಲಾತಿ ಸಿಗಲಿದೆ. ಜೊತೆಗೆ, ಮಿಲಿಟರಿ ಸೇವೆಯ ಅವಧಿಗೆ ಹೆಚ್ಚುವರಿಯಾಗಿ 3 ವರ್ಷಗಳ ವಯೋಮಿತಿ ಸಡಿಲಿಕೆ ಲಭ್ಯವಾಗುತ್ತದೆ. UPSC ಮತ್ತು SSC ನೇಮಕಾತಿಗಳಲ್ಲಿಯೂ ಸಮಾನ ಆದ್ಯತೆ ದೊರೆಯಲಿದೆ.

ಒಟ್ಟಿನಲ್ಲಿ, MNS ಸಿಬ್ಬಂದಿಯ ಸೇವೆಯನ್ನು ಗೌರವಿಸಿ ಅವರಿಗೆ ಸಮಾನ ಹಕ್ಕುಗಳು ಮತ್ತು ಭದ್ರ ಭವಿಷ್ಯ ಒದಗಿಸಲು ಸರ್ಕಾರ ತೆಗೆದುಕೊಂಡಿರುವ ಈ ಕ್ರಮ ಬಹಳ ಮಹತ್ವದ್ದಾಗಿದೆ. ದೇಶಸೇವೆಯಲ್ಲಿ ತೊಡಗಿರುವ ನರ್ಸಿಂಗ್ ಸಿಬ್ಬಂದಿಗೆ ಇದು ನಿಜಕ್ಕೂ ದೊಡ್ಡ ಉತ್ತೇಜನವಾಗಿದ್ದು, ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಲಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Wed, 11 February 26

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಜಿಬಿಎಗೆ 2.77 ಕೋಟಿ ರೂ. ದಂಡ ವಿಧಿಸಿದ ಹೈಕೋರ್ಟ್!
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆ ಕೊನೆಗೂ ಕಾಡಿಗೆ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಧಾರಾಕಾರ ಮಳೆಗೆ ವೈಟ್​ಫಿಲ್ಡ್, ಮಾರತ್ತಹಳ್ಳಿ, ಔಟರ್ ರಿಂಗ್ ರಸ್ತೆ ಜಲಾವೃತ
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ಅಸಹ್ಯದಲ್ಲೇ ಅಸಹ್ಯ, ಅದಕ್ಕೆ ನಾಮಿನೇಟ್ ಮಾಡಿದೆ; ಕಿರಣ್​​ ನಾಮಿನೇಟ್
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ರಾತ್ರಿಯಿಡೀ ಮಳೆ ಅಬ್ಬರ: ಮಲ್ಲೇಶ್ವರಂನಲ್ಲಿ ಮರಬಿದ್ದು 2 ಕಾರುಗಳು ಜಖಂ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ಇಂದು ಸಂಕಷ್ಟ ಚತುರ್ಥಿ; ಗಜಗೌರಿ ವ್ರತ ಮಾಡುವವರಿಗೆ ಮಹತ್ವದ ದಿನ
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ವಿದ್ಯಾರ್ಥಿಗಳಿಗೆ ಟಂಟಂಗಳೇ ಆಸರೆ: ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೇ ಕುತ್ತು
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಸ್ಪೀಕರ್​ನಲ್ಲಿ ಭಜನೆ ಹಾಕಿದ್ದಕ್ಕೆ ಪಕ್ಕದ ಮನೆಯವರಿಂದ ಅರ್ಚಕನ ಮೇಲೆ ಹಲ್ಲೆ
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಈ ಬಾರಿ ಮೈಸೂರು ದಸರಾದಲ್ಲಿ ಏರ್ ಶೋ, ಸೇನಾ ಪರೇಡ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್