ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025: ಇದು ಸಂಶೋಧನೆ, ಚರ್ಚೆ, ಪ್ರಶಸ್ತಿಗಳ ವೇದಿಕೆ
ಬೆಂಗಳೂರಿನಲ್ಲಿ ನಡೆದ ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025 ರ ಭಾರತೀಯ ವೃತ್ತಿಜೀವನದ ಭವಿಷ್ಯದ ಕುರಿತ ಸಂಭಾಷಣೆ ಮತ್ತು ಸಂಶೋಧನೆಗಳ ಕುರಿತಾದ ಚರ್ಚೆಗೆ ಪ್ರಮುಖ ವೇದಿಕೆಯಾಯಿತು. ಈ ಕಾರ್ಯಕ್ರಮದಲ್ಲಿ ಅವತಾರ್ ಗ್ರೂಪ್ ಹಾಗೂ EY GDS ‘ವೈ ವೀ ವರ್ಕ್’ ಅಧ್ಯಯನದ ಫಲಿತಾಂಶಗಳನ್ನು ಅನಾವರಣಗೊಳಿಸಲಾಯಿತು. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 05: ಅವತಾರ್ ಗ್ರೂಪ್ ಆಯೋಜಿಸಿದ ಮೈಅವತಾರ್ ಕರಿಯರ್ ಕಾನ್ಫರೆನ್ಸ್ 2025 (My Avatar Career Conference 2025) ಬೆಂಗಳೂರಿನ ನಿಂಹಾನ್ಸ್ ಕಾನ್ವೆನ್ಷನ್ ಸೆಂಟರ್‌ನಲ್ಲಿ (Nimhans Convention Center of Bangalore) ಭಾನುವಾರ ನಡೆಯಿತು. ಭಾರತೀಯ ವೃತ್ತಿಜೀವನದ ಭವಿಷ್ಯದ ಕುರಿತ ಸಂಭಾಷಣೆ ಮತ್ತು ಸಂಶೋಧನೆಗಳ ಪ್ರಮುಖ ವೇದಿಕೆಯಾದ ಈ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಉದ್ಯಮ ನಾಯಕರೂ, ಅಕಾಡೆಮಿಕ್ ತಜ್ಞರೂ,ಹೆಚ್‌ಆರ್ ವೃತ್ತಿಪರರೂ ಭಾಗವಹಿಸಿ, ಒಳಗೊಳ್ಳುವಿಕೆ, ನಾಯಕತ್ವ ಹಾಗೂ ಉದ್ಯೋಗದ ಭವಿಷ್ಯದ ಕುರಿತು ಚರ್ಚಿಸಿದರು.
ಬ್ರಿಗೇಡ್ ಎಂಟರ್‌ಪ್ರೈಸಸ್‌ನ ಪವಿತ್ರಾ ಶಂಕರ್, ಸ್ಟೇಟ್ ಸ್ಟ್ರೀಟ್ ಇಂಡಿಯಾದ ಮಂಜುಶ್ರೀ ದತ್ತ, IBMನ ಗೀತಾ ಅಡಿನಾರಾಯಣ, ಟ್ಯಾಲಿ ಸಿಸ್ಟಮ್ಸ್‌ನ ಜಯತಿ ಸಿಂಗ್ ಸೇರಿದಂತೆ ಹಲವು ಗಣ್ಯರು ವೇದಿಕೆ ಹಂಚಿಕೊಂಡು ಡಿಜಿಟಲ್ ಯುಗದ ವೃತ್ತಿಪರರ ಸವಾಲು, ಅವಕಾಶಗಳು ಹಾಗೂ ವೈವಿಧ್ಯಮಯ ಉದ್ಯೋಗ ಪರಿಸರವನ್ನು ರೂಪಿಸುವ ಬಗೆ ಹೀಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ವೀ ವರ್ಕ್’ ಅಧ್ಯಯನದ ಪ್ರಾಥಮಿಕ ಫಲಿತಾಂಶ ಅನಾವರಣ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅವತಾರ್ ಗ್ರೂಪ್ ಹಾಗೂ EY ಗ್ಲೋಬಲ್ ಡೆಲಿವರಿ ಸರ್ವೀಸಸ್ (EY GDS) ಜಂಟಿಯಾಗಿ ನಡೆಸಿದ ‘ವೈ ವೀ ವರ್ಕ್’ ಅಧ್ಯಯನದ ಪ್ರಾಥಮಿಕ ಫಲಿತಾಂಶಗಳನ್ನು ಅನಾವರಣಗೊಳಿಸಲಾಯಿತು. ಕಳೆದ ಏಪ್ರಿಲ್–ಜುಲೈ 2025ರ ನಡುವೆ ನಡೆದ ಈ ಸಂಶೋಧನೆಯಲ್ಲಿ 10,255 ವೃತ್ತಿಪರರು ಭಾಗವಹಿಸಿದ್ದರು. ಈ ಅಧ್ಯಯನವು ಭಾರತೀಯ ವೃತ್ತಿಪರರನ್ನು ಕೆಲಸ ಮಾಡಲು ಪ್ರೇರೇಪಿಸುವ ಗುರುತಿಸುವಿಕೆ, ಭದ್ರತೆ ಮತ್ತು ಸೇರಿಕೊಳ್ಳುವಿಕೆಯನ್ನು ಮೂರು ಅಂಶಗಳನ್ನು ಒಳಗೊಂಡಿತ್ತು. ಈ ಫಲಿತಾಂಶದಲ್ಲಿ 92% ಜನರು “ಉತ್ತಮ ಕೆಲಸ ಮಾಡಿದರೆ ಗೌರವಿಸಬೇಕು” ಎಂದರೆ 90% ಜನರು ಕುಟುಂಬದ ಭವಿಷ್ಯಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. 81% ಜನರು ವೃತ್ತಿಜೀವನವನ್ನು ತಮ್ಮ ಸಾಮರ್ಥ್ಯವನ್ನು ಅರಿಯುವ ಸಾಧನವೆಂದು ಪರಿಗಣಿಸಿದ್ದಾರೆಂಬುದು ಈ ಅಧ್ಯಯನದಿಂದ ಬಹಿರಂಗವಾಗಿದೆ.
ಈ ಕಾರ್ಯಕ್ರಮದಲ್ಲಿ ಅವತಾರ್ ಗ್ರೂಪ್ ಸ್ಥಾಪಕಿ–ಅಧ್ಯಕ್ಷೆ ಡಾ. ಸೌಂದರ್ಯ ರಾಜೇಶ್ ಮಾತನಾಡಿ, ಭಾರತೀಯರು ಈಗ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ತಮ್ಮನ್ನು ಗುರುತಿಸಲು, ಗೌರವಿಸಲ್ಪಡಲು ಹಾಗೂ ಅರ್ಥಪೂರ್ಣ ಜೀವನಕ್ಕಾಗಿ ಕೆಲಸ ಮಾಡುತ್ತಾರೆ. ಕೆಲಸದ ಸ್ಥಳಗಳು ಜನರಿಗೆ ಸುರಕ್ಷತೆ ಮತ್ತು ಸ್ಫೂರ್ತಿ ನೀಡಬೇಕು ಎಂದು ಹೇಳಿದ್ದಾರೆ.
ಈ ಅಧ್ಯಯನವು ಉದ್ಯೋಗಿಗಳ ನಿಜವಾದ ಪ್ರೇರಣೆಗಳನ್ನು ಬಿಚ್ಚಿಡುತ್ತದೆ. ಗುರುತಿಸುವಿಕೆ ಮತ್ತು ಸೇರಿಕೊಳ್ಳುವಿಕೆಯೇ ಭವಿಷ್ಯದ ಕೆಲಸದ ಸ್ಥಳಗಳ ಆಧಾರವಾಗಲಿದೆ ಎಂದು EY GDS ಮುಖ್ಯ ಯೋಗಕ್ಷೇಮ ಅಧಿಕಾರಿ ಜಯಾ ವಿರ್ವಾನಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಶಸ್ತಿಯನ್ನು ಕೆಬಿಆರ್ ಎನರ್ಜಿಯ ಗೀತಾ ರಾಮಮೂರ್ತಿ ಸ್ವೀಕರಿಸಿದರೆ, ಶಿಲ್ಪಿ ಮಿತ್ರ (ಮೈಕ್ರೋಸಾಫ್ಟ್ ಇಂಡಿಯಾ ) ಮತ್ತು ಸೋಭಿತಾ ನೀಲನಾಥ್ (ಸೇಲ್ಸ್ ಫೋರ್ಸ್ ಇಂಡಿಯಾ ) ಕ್ಯಾರಿಯರ್ ಐಕಾನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು, ಪ್ರೇರಣಾದಾಯಕ ದ್ವಿತೀಯ ವೃತ್ತಿ ಪ್ರಶಸ್ತಿಯೂ ಪ್ರೀತಿ ಸೆಂಥಿಲ್ ಕುಮಾರ್ (ಜುಸಿ ಸಿಸ್ಟಮ್ಸ್ ) ಅವರ ಕೈ ಸೇರಿದೆ.
ಇನ್ನಷ್ಟು ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








