NHAI Recruitment 2022: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಾವಕಾಶ
NHAI RECRUITMENT 2022: ಜನರಲ್ ಮ್ಯಾನೇಜರ್ ಟೆಕ್ನಿಕಲ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಅಲ್ಲದೆ ಗ್ರೂಪ್ ಎ ಸೇವೆಯಲ್ಲಿ 14 ವರ್ಷಗಳ ಅನುಭವ ಹೊಂದಿರಬೇಕು.
NHAI Recruitment 2022: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದಲ್ಲಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಮತ್ತು ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಡೆಪ್ಯುಟೇಶನ್ ಮೇಲೆ ಮಾಡಲಾಗುತ್ತಿದೆ. ಡೆಪ್ಯುಟೇಶನ್ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಏಪ್ರಿಲ್ 18 ಕೊನೆಯ ದಿನಾಂಕ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಸಂಜೆ 6 ಗಂಟೆಯವರೆಗೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇಮಕಾತಿಗಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ಕಳುಹಿಸಲು ಕೊನೆಯ ದಿನಾಂಕ ಮೇ 23, 2022. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
NHAI Recruitment 2022: ಹುದ್ದೆಯ ವಿವರಗಳು ಜನರಲ್ ಮ್ಯಾನೇಜರ್ ಟೆಕ್ನಿಕಲ್ – 23 ಹುದ್ದೆಗಳು ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್ – 26 ಹುದ್ದೆಗಳು ಮ್ಯಾನೇಜರ್ ಟೆಕ್ನಿಕಲ್ – 31 ಹುದ್ದೆಗಳು
NHAI Recruitment 2022: ವೇತನ ಜನರಲ್ ಮ್ಯಾನೇಜರ್ ಟೆಕ್ನಿಕಲ್- 1 ಲಕ್ಷದಿಂದ 2 ಲಕ್ಷ 15 ಸಾವಿರವದವರೆಗೆ ವೇತನ ನೀಡಲಾಗುತ್ತದೆ. ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್- 78 ಸಾವಿರದಿಂದ 2.20 ಲಕ್ಷದವರೆಗೆ ವೇತನ ನೀಡಲಾಗುತ್ತದೆ. ಮ್ಯಾನೇಜರ್ ಟೆಕ್ನಿಕಲ್- 67 ಸಾವಿರದಿಂದ 2 ಲಕ್ಷದವರೆಗೆ ವೇತನ ನೀಡಲಾಗುತ್ತದೆ.
NHAI Recruitment 2022: ಶೈಕ್ಷಣಿಕ ಅರ್ಹತೆ: ಜನರಲ್ ಮ್ಯಾನೇಜರ್ ಟೆಕ್ನಿಕಲ್- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಅಲ್ಲದೆ ಗ್ರೂಪ್ ಎ ಸೇವೆಯಲ್ಲಿ 14 ವರ್ಷಗಳ ಅನುಭವ ಹೊಂದಿರಬೇಕು. ಡೆಪ್ಯುಟಿ ಜನರಲ್ ಮ್ಯಾನೇಜರ್ ಟೆಕ್ನಿಕಲ್- ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಹೆದ್ದಾರಿಗಳು, ರಸ್ತೆಗಳು ಮತ್ತು ಸೇತುವೆಗಳಿಗೆ ಸಂಬಂಧಿಸಿದ ಮೂಲಸೌಕರ್ಯ ವಲಯದ ಯೋಜನೆಯ ಅನುಷ್ಠಾನದಲ್ಲಿ ಆರು ವರ್ಷಗಳ ಅನುಭವವನ್ನು ಹೊಂದಿರಬೇಕು.
ಅರ್ಜಿಯ ಪ್ರಿಂಟ್ ಔಟ್ ಕಳುಹಿಸಬೇಕಾದ ವಿಳಾಸ: “DGM (HR & Admn)-IA/ IB, National Highways Authority of India Plot No.G5-&6, Sector-10, Dwarka, New Delhi-110075.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ