NMPA Recruitment 2024 : ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಖಾಲಿಯಿರುವ 33 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ
ನೀವು ಮಂಗಳೂರಿನ ಆಸುಪಾಸಿನಲ್ಲಿದ್ದು, ಉದ್ಯೋಗದ ಹುಡುಕಾಟದಲ್ಲಿದ್ದರೆ ಅಂತಹವರಿಗೆ ಇಲ್ಲೊಂದು ಸುವರ್ಣವಕಾಶವಿದೆ. ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಖಾಲಿಯಿರುವ ಒಟ್ಟು 33 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನಶ್ರೇಣಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಮಾಹಿತಿ ತಿಳಿದು ಇಂದೇ ಅರ್ಜಿ ಸಲ್ಲಿಸಿ.
ನವಮಂಗಳೂರು ಬಂದರು ಪ್ರಾಧಿಕಾರವು ಖಾಲಿಯಿರುವ ಒಟ್ಟು 33 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಪ್ರಾಧಿಕಾರದಲ್ಲಿ ಸಿವಿಲ್ ಮತ್ತು ಎಲೆಕ್ಟಿಕಲ್ ವಿಭಾಗದಲ್ಲಿ ಅಸಿಸ್ಟೆಂಟ್ ಇಂಜಿನಿಯರ್, ಅಸಿಸ್ಟೆಂಟ್ ಡೈರೆಕ್ಟರ್, ಡೆಪ್ಯೂಟಿ ಡೈರೆಕ್ಟರ್ , ಸ್ಪೋರ್ಟ್ಸ್ ಆಫೀಸರ್, ಅಸಿಸ್ಟೆಂಟ್ ಟ್ರಾಫಿಕ್ ಮ್ಯಾನೇಜರ್ ಹಾಗೂ ಸೀನಿಯರ್ ಅಕೌಂಟ್ಸ್ ಆಫೀಸರ್ ಹುದ್ದೆಗಳು ಖಾಲಿಯಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಡಿಸೆಂಬರ್ 27 ರೊಳಗೆ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
* ಸಂಸ್ಥೆಯ ಹೆಸರು : ನವಮಂಗಳೂರು ಬಂದರು ಪ್ರಾಧಿಕಾರ
* ಹುದ್ದೆಗಳು : ಸಹಾಯಕ ನಿರ್ದೇಶಕರು, ಹಿರಿಯ ಲೆಕ್ಕಾಧಿಕಾರಿಗಳು, ಕಾನೂನು ಅಧಿಕಾರಿ, ವೈದ್ಯಕೀಯ ಅಧಿಕಾರಿ ಮತ್ತು ಸಹಾಯಕ ಇಂಜಿನಿಯರ್
* ಹುದ್ದೆಗಳ ಸಂಖ್ಯೆ : ಒಟ್ಟು 33 ಹುದ್ದೆಗಳು
* ಉದ್ಯೋಗ ಸ್ಥಳ : ಪಣಂಬೂರು, ಮಂಗಳೂರು
ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳು
* ಈ ಹುದ್ದೆಗಳ ನೇಮಕಾತಿ ಅನುಸಾರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮ, ಕಾನೂನು ಪದವಿ, ಮೆಡಿಕಲ್, ಸಿವಿಲ್ ಇಂಜಿನಿಯರ್ ಸೇರಿದಂತೆ ವಿವಿಧ ವಿಷಯದಲ್ಲಿ ಪದವಿ ಪಡೆದಿರಬೇಕು.
* ಅಭ್ಯರ್ಥಿಗಳ ಗರಿಷ್ಟ ವಯಸ್ಸು 45 ವರ್ಷದ ಒಳಗಿರಬೇಕು. ಮೀಸಲಾತಿ ವರ್ಗದವರಿಗೆ ಗರಿಷ್ಟ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ
* ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 475 ರೂ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಹುದ್ದೆಗಳ ನೇಮಕಾತಿ ಆಯ್ಕೆ ವಿಧಾನ
* ಆನ್ಲೈನ್ ಪರೀಕ್ಷೆ
* ವೈಯಕ್ತಿಕ ಸಂದರ್ಶನ
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಇಂಟರ್ನ್‌ಶಿಪ್ ಗೆ ಅರ್ಜಿ ಆಹ್ವಾನ , ಇಲ್ಲಿದೆ ಮಾಹಿತಿ
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ನವೆಂಬರ್ 15, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 27, 2024
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ