ONGC Recruitment 2022: ONGCಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 98 ಸಾವಿರ ರೂ.
ONGC Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ONGC ಯ ಅಧಿಕೃತ ವೆಬ್‌ಸೈಟ್ ongcindia.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ONGC Recruitment 2022: ಭಾರತೀಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ತನ್ನ ವಿಭಾಗದಲ್ಲಿನ ಜೂನಿಯರ್ ಇಂಜಿನಿಯರಿಂಗ್ ಸಹಾಯಕ (JEA), ಜೂನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ (JSA), ಜೂನಿಯರ್ ಅಸಿಸ್ಟೆಂಟ್ (JA), ಜೂನಿಯರ್ ಅಗ್ನಿಶಾಮಕ ಮೇಲ್ವಿಚಾರಕ (JFS), ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ (JTA), ಜೂನಿಯರ್ ಟೆಕ್ನಿಷಿಯನ್, ಜೂನಿಯರ್ ಫೈರ್‌ಮ್ಯಾನ್ , ಸಾಗರ ರೇಡಿಯೋ ಸಹಾಯಕ (JMRA), ಜೂನಿಯರ್ ಡೀಲಿಂಗ್ ಸಹಾಯಕ (JDA), ಜೂನಿಯರ್ ಮೋಟಾರ್ ವೆಹಿಕಲ್ ಡ್ರೈವರ್ (JMVD), ಜೂನಿಯರ್ ಅಸಿಸ್ಟೆಂಟ್ ಆಪರೇಟರ್ (JAO), ಜೂನಿಯರ್ ಸ್ಲಿಂಗರ್ ಕಮ್ ರಿಗ್ಗರ್ (JSCR) ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ONGC ಯ ಅಧಿಕೃತ ವೆಬ್‌ಸೈಟ್ ongcindia.com ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
ONGC Recruitment 2022: ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ – 922
ಅರ್ಹತಾ ಮಾನದಂಡಗಳು:
JEA – ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. JMRA- ಎಲೆಕ್ಟ್ರಾನಿಕ್ಸ್/ಟೆಲಿಕಾಂನಲ್ಲಿ ಡಿಪ್ಲೊಮಾ ಹೊಂದಿರಬೇಕು. JDA ಸಾರಿಗೆ – ಆಟೋ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ/ ಬಿಸಿನೆಸ್ ಮ್ಯಾನೇಜ್‌ಮೆಂಟ್/ ಅಡ್ಮಿನಿಸ್ಟ್ರೇಷನ್‌ನಲ್ಲಿ ಪಿಜಿ ಡಿಪ್ಲೊಮಾ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. JSA – ಸ್ನಾತಕೋತ್ತರ ಪದವಿ ಹೊಂದಿರಬೇಕು. JDA ಸಿಬ್ಬಂದಿ ಮತ್ತು ಆಡಳಿತ – ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಿಬ್ಬಂದಿ ಮತ್ತು 2 ವರ್ಷಗಳ ಡಿಪ್ಲೊಮಾದೊಂದಿಗೆ ಪದವಿ ಮಾಡಿರಬೇಕು. JDS MM – 3 ವರ್ಷಗಳ ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್‌ಮೆಂಟ್ / ಇನ್ವೆಂಟರಿ / ಸ್ಟಾಕ್ ಕಂಟ್ರೋಲ್ / ಮೆಟೀರಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಒಂದು ವರ್ಷದ ಪಿಜಿ ಡಿಪ್ಲೋಮಾ ಮಾಡಿರಬೇಕು. JTA ಸಮೀಕ್ಷೆ – 12 ನೇ ತೇರ್ಗಡೆ ಅಥವಾ 10 ನೇ ತೇರ್ಗಡೆಯ ಜೊತೆಗೆ ಸಮೀಕ್ಷೆಯಲ್ಲಿ ವಿಜ್ಞಾನ ಮತ್ತು ವ್ಯಾಪಾರ ಪ್ರಮಾಣಪತ್ರ ಹೊಂದಿರಬೇಕು. JMVD – ಚಾಲನಾ ಪರವಾನಗಿಯೊಂದಿಗೆ 12 ನೇ ಅಥವಾ 10 ನೇ ತರಗತಿ ತೇರ್ಗಡೆ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು. ಜೂನಿಯರ್ ತಂತ್ರಜ್ಞ – ಟ್ರೇಡ್ ಪ್ರಮಾಣಪತ್ರದೊಂದಿಗೆ 12 ನೇ ತರಗತಿ ಪಾಸ್ ಆಗಿರಬೇಕು. JAO – 12 ನೇ ತರಗತಿ ಪಾಸ್ ಅಥವಾ 10 ನೇ ತರಗತಿ ಪಾಸ್ ಆಗಿರಬೇಕು. ಜೊತೆಗೆ ಡ್ರೈವಿಂಗ್ ಲೈಸೆನ್ಸ್ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು. JA ಖಾತೆಗಳು – B.Com ಟೈಪಿಂಗ್ ವೇಗ 30 wpm ಮತ್ತು 6 ತಿಂಗಳ ಪ್ರಮಾಣಪತ್ರ / ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. JA MM – B.Sc. ಭೌತಶಾಸ್ತ್ರ ಅಥವಾ ಗಣಿತ ವಿಷಯದ ಟೈಪಿಂಗ್ ವೇಗ 30 wpm ಮತ್ತು 6 ತಿಂಗಳ ಪ್ರಮಾಣಪತ್ರ / ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. JFS – ಅಗ್ನಿಶಾಮಕ ಸೇವೆಯಲ್ಲಿ 6 ತಿಂಗಳ ಅನುಭವ ಹೊಂದಿರಬೇಕು. JTA – B.Sc ಜೊತೆಗೆ ರಸಾಯನಶಾಸ್ತ್ರ/ಭೂವಿಜ್ಞಾನವನ್ನು ಮುಖ್ಯ ವಿಷಯವಾಗಿ ಅಧ್ಯಯನ ಮಾಡಿರಬೇಕು. ಜೂನಿಯರ್ ಫೈರ್‌ಮ್ಯಾನ್ – 6 ತಿಂಗಳ ಫೈರ್‌ಮ್ಯಾನ್ ತರಬೇತಿ ಪ್ರಮಾಣಪತ್ರದೊಂದಿಗೆ 12 ನೇ ತರಗತಿ ಅಥವಾ 10ನೇ ತರಗತಿ ಪಾಸ್ ಆಗಿರಬೇಕು.
ವಯೋಮಿತಿ: W1 ಪೋಸ್ಟ್‌ಗಳಿಗೆ – 18 ರಿಂದ 27 ವರ್ಷಗಳ ಒಳಗಿರಬೇಕು. JAO ಗಾಗಿ – 18 ರಿಂದ 35 ವರ್ಷಗಳ ಒಳಗಿರಬೇಕು. ಡ್ರಿಲ್ಲಿಂಗ್/ಸಿಮೆಂಟಿಂಗ್/ಉತ್ಪಾದನೆ-ಡ್ರಿಲ್ಲಿಂಗ್ F1 ಮತ್ತು A1 ಹೊರತುಪಡಿಸಿ – 18 ರಿಂದ 30 ವರ್ಷಗಳ ಒಳಗಿರಬೇಕು.
ಅರ್ಜಿ ಶುಲ್ಕ: ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ – ರೂ.300/- SC/ST/PWBD/Ex-Servicemen ಅಭ್ಯರ್ಥಿಗಳಿಗೆ – ಶುಲ್ಕವಿಲ್ಲ
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 28, 2022
ವೇತನ: F1 – ರೂ. 29000 ರಿಂದ ರೂ. 98000 A1 – ರೂ. 26600 ರಿಂದ ರೂ. 87000 W1 – ರೂ. 24000 ರಿಂದ ರೂ. 57500
ಅರ್ಜಿ ಸಲ್ಲಿಸುವುದು ಹೇಗೆ? ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.