Spices Board Recruitment 2023: ಸ್ಪೈಸಸ್ ಬೋರ್ಡ್ನಲ್ಲಿದೆ ಉದ್ಯೋಗಾವಕಾಶ
Spices Board Recruitment 2023: ಸ್ಪೈಸಸ್ ಬೋರ್ಡ್ನ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು .
Spices Board Recruitment 2023: ಸ್ಪೈಸಸ್ ಬೋರ್ಡ್ ಆಫ್ ಇಂಡಿಯಾದ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 7 ಕನ್ಸಲ್ಟೆಂಟ್ಸ್ (ಮಾರ್ಕೆಟಿಂಗ್ ಅ್ಯಂಡ್ ಎಕ್ಸ್ಪೋರ್ಟ್ ಪ್ರಮೋಷನ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ನೇಮಕಾತಿ ವಿವರಗಳು:
- ಸಂಸ್ಥೆಯ ಹೆಸರು : ಸ್ಪೈಸಸ್ ಬೋರ್ಡ್ ಆಫ್ ಇಂಡಿಯಾ
- ಹುದ್ದೆಗಳ ಸಂಖ್ಯೆ: 7
- ಉದ್ಯೋಗ ಸ್ಥಳ: ಮುಂಬೈ – ಜೋಧ್‌ಪುರ – ಬಾರಾಬಂಕಿ – ಬೆಂಗಳೂರು
- ಹುದ್ದೆಯ ಹೆಸರು: ಸಲಹೆಗಾರರು (ಮಾರ್ಕೆಟಿಂಗ್ ಅ್ಯಂಡ್ ಎಕ್ಸ್ಪೋರ್ಟ್ ಪ್ರಮೋಷನ್)
ಶೈಕ್ಷಣಿಕ ಅರ್ಹತೆ:
ಸ್ಪೈಸಸ್ ಬೋರ್ಡ್ನ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು .
ವಯೋಮಿತಿ:
ಈ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 14-07-2023 ರಂತೆ 63 ವರ್ಷವನ್ನು ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಅನುಭವ, ಅರ್ಹತೆ ಹಾಗೂ ಸಂದರ್ಶನದ ಮೂಲಕದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 40 ಸಾವಿರದಿಂದ 60 ಸಾವಿರವರೆಗೆ ಮಾಸಿಕ ವೇತನ ನೀಡಲಾಗುತ್ತದೆ.
ಅರ್ಜಿ ಕಳುಹಿಸಬೇಕಾದ ವಿಳಾಸ?
Secretary, Spices Board, Sugandha Bhavan, N H By Pass, Palarivattom.P.O., Kochi-682025
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-07-2023
ಇದನ್ನೂ ಓದಿ: IBPS Clerk Recruitment 2023: ಐಬಿಪಿಎಸ್ ನೇಮಕಾತಿ: ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ನಮೂನೆ ಡೌನ್ಲೋಡ್ ಮಾಡುವುದು ಹೇಗೆ?
ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: indianspices.com
Published On - 10:25 pm, Sat, 1 July 23