SSLR Karnataka Recruitment 2023: 2000 ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
SSLR Karnataka Recruitment 2023: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಡಿಪ್ಲೊಮಾ , ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
SSLR Karnataka Recruitment 2023: ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 2 ಸಾವಿರ ಹುದ್ದೆಗಳಿಗೆ ಪರವಾನಗಿ ನೀಡಲಾಗುತ್ತದೆ. ಅಂದರೆ ಭೂಮಾಪಕನ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಸರ್ವೆ ಸೆಟ್ಲ್‌ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ (SSLR)
- ಹುದ್ದೆಗಳ ಸಂಖ್ಯೆ: 2000
- ಉದ್ಯೋಗ ಸ್ಥಳ: ಕರ್ನಾಟಕ
ಶೈಕ್ಷಣಿಕ ಅರ್ಹತೆ:
ಎಸ್‌ಎಸ್‌ಎಲ್‌ಆರ್ ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಡಿಪ್ಲೊಮಾ , ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಹತೆ ಬಗ್ಗೆಗಿನ ಮತ್ತಷ್ಟು ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.
ಶುಲ್ಕಗಳ ವಿವರಗಳು:
- ತರಬೇತಿ ಶುಲ್ಕ: ರೂ.5000/-
- ಪರವಾನಗಿ ಶುಲ್ಕ: ರೂ.3000/-
ವಯೋಮಿತಿ:
ಈ ಹುದ್ದೆಗಳಿಗೆ 18 ವರ್ಷದಿಂದ 65 ವರ್ಷಗಳವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: Karnataka High Court Recruitment 2023: ಕರ್ನಾಟಕ ಹೈಕೋರ್ಟ್ನಲ್ಲಿನ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 20, 2023
ಪ್ರಮುಖ ಲಿಂಕ್‌ಗಳು:
- ವಿಸ್ತೃತ ಅಧಿಸೂಚನೆ ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ಅಧಿಸೂಚನೆ ಪರಿಶೀಲಿಸಲು: ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: landrecords.karnataka.gov.in
ಈ ಬಗ್ಗೆಗಿನ ಮತ್ತಷ್ಟು ಮಾಹಿತಿಗಾಗಿ ಅಥವಾ ಇನ್ನಿತ್ತರ ಪ್ರಶ್ನೆಗಳಿಗೆ ದೂರವಾಣಿ ಸಂಖ್ಯೆ: 080-22221038 ಗೆ ಕರೆ ಮಾಡಬಹುದು.
Published On - 2:59 pm, Tue, 14 March 23