Union Bank Recruitment 2025: ಯೂನಿಯನ್ ಬ್ಯಾಂಕಿನಲ್ಲಿ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 500ಕ್ಕೂ ಹೆಚ್ಚು ವಿಶೇಷಾಧಿಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಏಪ್ರಿಲ್ 30 ರಿಂದ ಮೇ 20 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹತಾ ಮಾನದಂಡಗಳು, ವಯೋಮಿತಿ ಮತ್ತು ಅರ್ಜಿ ಶುಲ್ಕದ ವಿವರಗಳನ್ನು unionbankofindia.co.in ನಲ್ಲಿ ಪರಿಶೀಲಿಸಿ. ಕ್ರೆಡಿಟ್ ಮತ್ತು ಐಟಿ ವಿಭಾಗಗಳಲ್ಲಿ ಹುದ್ದೆಗಳು ಲಭ್ಯವಿವೆ. ಆಸಕ್ತ ಮತ್ತುಅರ್ಹ ಅಭ್ಯರ್ಥಿಗಳು ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

ನೀವು ಸರ್ಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಯೂನಿಯನ್ ಬ್ಯಾಂಕ್ ಹಲವಾರು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು unionbankofindia.co.in ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಏಪ್ರಿಲ್ 30 ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನಾಂಕವನ್ನು ಮೇ 20 ಎಂದು ನಿಗದಿಪಡಿಸಲಾಗಿದೆ. ಈ ನೇಮಕಾತಿ ಅಭಿಯಾನದ ಅಡಿಯಲ್ಲಿ, ಯೂನಿಯನ್ ಬ್ಯಾಂಕ್‌ನಲ್ಲಿ ಒಟ್ಟು 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಯೂನಿಯನ್ ಬ್ಯಾಂಕ್ SO ನೇಮಕಾತಿ ಅರ್ಹತಾ ಮಾನದಂಡಗಳೇನು?
ಶೈಕ್ಷಣಿಕ ಅರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ/ ಸರ್ಕಾರಿ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದವರು ಮತ್ತು CA/CMA/CS ಅಭ್ಯರ್ಥಿಗಳು ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಸರ್ಕಾರದಿಂದ ಮಾನ್ಯತೆ ಪಡೆದ/ಸರ್ಕಾರಿ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕನಿಷ್ಠ ಶೇ. 60 ಅಂಕಗಳೊಂದಿಗೆ ಹಣಕಾಸು ವಿಷಯದಲ್ಲಿ ವಿಶೇಷತೆಯೊಂದಿಗೆ ಪೂರ್ಣ ಸಮಯದ ನಿಯಮಿತ MBA/MMS/PGDM/PGDBM ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.
ಅದೇ ಸಮಯದಲ್ಲಿ, ಸರ್ಕಾರಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್/ ಐಟಿ/ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ & ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಡೇಟಾ ಸೈನ್ಸ್/ಮೆಷಿನ್ ಲರ್ನಿಂಗ್ & ಎಐ/ಸೈಬರ್ ಸೆಕ್ಯುರಿಟಿಯಲ್ಲಿ ಪೂರ್ಣ ಸಮಯದ ಬಿ.ಇ./ಬಿ.ಟೆಕ್/ಎಂಸಿಎ/ಎಂ.ಎಸ್ಸಿ (ಐಟಿ)/ಎಂ.ಎಸ್./ಎಂ.ಟೆಕ್/5 ವರ್ಷಗಳ ಎಂ.ಟೆಕ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಸಹಾಯಕ ವ್ಯವಸ್ಥಾಪಕ (ಐಟಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಭಾರತೀಯ ಸೇನೆ ಸೇರಲು ಇಲ್ಲಿದೆ ಸುವರ್ಣವಕಾಶ; ಅರ್ಜಿ ಸಲ್ಲಿಸುವುದು ಹೇಗೆ?
ವಯೋಮಿತಿ:
ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಮತ್ತು ಸಹಾಯಕ ವ್ಯವಸ್ಥಾಪಕ (ಐಟಿ) ಎರಡೂ ಹುದ್ದೆಗಳಿಗೆ ಕನಿಷ್ಠ 22 ವರ್ಷ ಮತ್ತು ಗರಿಷ್ಠ 30 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಯೂನಿಯನ್ ಬ್ಯಾಂಕ್ SO ನೇಮಕಾತಿ ಅರ್ಜಿ ಶುಲ್ಕ ಎಷ್ಟು?
SC/ST/PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 177 ರೂ., ಇತರ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1180 ರೂ.. ಡೆಬಿಟ್ ಕಾರ್ಡ್‌ಗಳು (ರುಪೇ/ವೀಸಾ/ಮಾಸ್ಟರ್‌ಕಾರ್ಡ್/ಮೆಸ್ಟ್ರೋ), ಕ್ರೆಡಿಟ್ ಕಾರ್ಡ್‌ಗಳು, ಇಂಟರ್ನೆಟ್ ಬ್ಯಾಂಕಿಂಗ್, IMPS, ನಗದು ಕಾರ್ಡ್‌ಗಳು/ಮೊಬೈಲ್ ವ್ಯಾಲೆಟ್‌ಗಳು/UPI ಬಳಸಿ ಶುಲ್ಕವನ್ನು ಪಾವತಿಸಬಹುದು.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








