ಈ ವರ್ಷ 500 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು; ಲಿಸ್ಟ್​ನಲ್ಲಿ ಇಲ್ಲ ತೆಲುಗು ಸಿನಿಮಾ

2025ರಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ಬಾಕ್ಸ್ ಆಫೀಸ್ ಹಿಟ್ ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಈ ವರ್ಷ 1000 ಕೋಟಿ ಕ್ಲಬ್‌ಗೆ ಯಾವುದೇ ಸಿನಿಮಾ ಸೇರಿಲ್ಲ. ಆದರೆ 'ಕಾಂತಾರ: ಚಾಪ್ಟರ್ 1' ಸೇರಿದಂತೆ 'ಛಾವಾ', 'ಕೂಲಿ', 'ಸೈಯಾರ' ಮತ್ತು 'ಧುರಂಧರ್' ಚಿತ್ರಗಳು ಭರ್ಜರಿ ಗಳಿಕೆ ಮಾಡಿವೆ. ಆಶ್ಚರ್ಯಕರವಾಗಿ, ಈ ಪಟ್ಟಿಯಲ್ಲಿ ಒಂದೂ ತೆಲುಗು ಸಿನಿಮಾ ಇಲ್ಲ.

ಈ ವರ್ಷ 500 ಕೋಟಿ ಕ್ಲಬ್ ಸೇರಿದ ಸಿನಿಮಾಗಳಿವು; ಲಿಸ್ಟ್​ನಲ್ಲಿ ಇಲ್ಲ ತೆಲುಗು ಸಿನಿಮಾ
ಇಯರ್ ಎಂಡರ್

Updated on: Dec 17, 2025 | 12:52 PM

2025 ಕೊನೆ ಆಗುತ್ತಾ ಬಂದಿದೆ ಈ ವರ್ಷ ಚಿತ್ರರಂಗದಲ್ಲಿ ಕೆಲ ನಿರ್ಮಾಪಕರು ಒಳ್ಳೆಯ ಬೆಳೆ ತೆಗೆದಿದ್ದಾರೆ. ಈ ವರ್ಷ ಯಾವ ಚಿತ್ರವೂ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿಲ್ಲ. ಆದರೆ, 500+ ಕೋಟಿ ರೂಪಾಯಿ ಕ್ಲಬ್ ಸೇರಿದ ಅನೇಕ ಚಿತ್ರಗಳಿವೆ. ಕನ್ನಡದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಈ ಸಾಲಿನಲ್ಲಿ ಇದೆ ಅನ್ನೋದು ವಿಶೇಷ. ಶಾಕಿಂಗ್ ವಿಷಯ ಎಂದರೆ ತೆಲುಗಿನ ಯಾವುದೇ ಸಿನಿಮಾಗಳು ಲಿಸ್ಟ್​ನಲ್ಲಿ ಇಲ್ಲ. ಈ ಬಾರಿ ತೆಲುಗಿನಲ್ಲಿ ಬ್ಲಾಕ್​ಬಸ್ಟರ್ ಸಿನಿಮಾ ಬಂದಿಲ್ಲ.

ಛಾವಾ

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮೊದಲಾದವರು ನಟಿಸಿರೋ ‘ಛಾವಾ’ ಸಿನಿಮಾ ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 807 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಛತ್ರಪತಿ ಶಿವಾಜಿ ಅವರ ಮಗ ಛತ್ರಪತಿ ಸಾಂಭಾಜಿ ಮಹರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕೂಲಿ

ರಜನಿಕಾಂತ್ ನಟನೆಯ ‘ಕೂಲಿ’ ಈ ವರ್ಷ ರಿಲೀಸ್ ಆಗಿ ಸಾಧಾರಾಣ ಯಶಸ್ಸು ಕಂಡಿದೆ. ವಿಮರ್ಶೆಯಲ್ಲಿ ಸೋತ ಹೊರತಾಗಿಯೂ ಸಿನಿಮಾ 500+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ.

ಸೈಯಾರ

ಬಾಲಿವುಡ್​ನಲ್ಲಿ ರಿಲೀಸ್ ಆಗಿ ಯಶಸ್ಸು ಕಂಡ ‘ಸೈಯಾರ’ ಸಿನಿಮಾ ಈ ಬಾರಿ 500 ಕೋಟಿ ರೂಪಾಯಿ ಕ್ಲಬ್ ಸೇರಿದ ಚಿತ್ರಗಳಲ್ಲಿ ಒಂದು. ಈ ಸಿನಿಮಾದಲ್ಲಿ ಅನಿತ್ ಪಡ್ಡಾ, ಅಹಾನ್ ಪಾಂಡೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಎರಡೂ ಹೊಸ ಮುಖಗಳಾದರೂ ಸಿನಿಮಾ ಸೂಪರ್ ಹಿಟ್ ಆಯಿತು.

‘ಕಾಂತಾರ: ಚಾಪ್ಟರ್ 1’

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ: ಚಾಪ್ಟರ್ 1’ ಸೂಪರ್ ಹಿಟ್ ಆಯಿತು. ಈ ಸಿನಿಮಾದ ಗಳಿಕೆ 900 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ರುಕ್ಮಿಣಿ ವಸಂತ್ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರಸಾರ ಕಂಡಿದ್ದು ಕೇವಲ ಒಂದೇ ತಿಂಗಳು ಅನ್ನೋದು ವಿಶೇಷ. ಈ ವರ್ಷ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ.

ಇದನ್ನೂ ಓದಿ: ರಣವೀರ್ ಅದೃಷ್ಟ ಬದಲಿಸಿದ ‘ಧುರಂಧರ್’; ದಕ್ಷಿಣದ ನಿರ್ಮಾಣ ಸಂಸ್ಥೆ ಜೊತೆ ಬಿಗ್ ಬಜೆಟ್ ಸಿನಿಮಾ

ಧುರಂಧರ್

ಧುರಂದರ್ ಸಿನಿಮಾದ ಗಳಿಕೆ ಎರಡು ವಾರಕ್ಕೆ 400 ಕೋಟಿ ರೂಪಾಯಿ ಆಗಿದೆ. ಈ ಚಿತ್ರದ ಲೈಫ್​ಟೈಮ್ ಕಲೆಕ್ಷನ್ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಈ ಸಿನಿಮಾದ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್ ಈಗಾಗಲೇ 500 ಕೋಟಿ ರೂಪಾಯಿ ದಾಟಿದೆ. ಇದರಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.