AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

71st National Film Awards 2025: 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಇಲ್ಲಿದೆ ಆಯ್ಕೆಯಾದ ಎಲ್ಲ ಸಿನಿಮಾಗಳ ಪಟ್ಟಿ

National Film Awards: 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಈ ಬಾರಿ ಯಾವುದೇ ಕನ್ನಡ ಸಿನಿಮಾಕ್ಕೆ ಯಾವ ವಿಭಾಗದಲ್ಲಿಯೂ ಪ್ರಶಸ್ತಿ ಲಭಿಸಿಲ್ಲ. ಹಿಂದಿ, ಮಲಯಾಳಂ ಚಿತ್ರರಂಗವೇ ಈ ಬಾರಿಯೂ ಹೆಚ್ಚಿನ ಪ್ರಶಸ್ತಿ ಬಾಚಿಕೊಂಡಿವೆ. ಅದರಲ್ಲಿಯೂ ಹಿಂದಿ ಸಿನಿಮಾಗಳು ಈ ಬಾರಿ ತುಸು ಹೆಚ್ಚಾಗಿಯೇ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಪೂರ್ಣ ಪ್ರಶಸ್ತಿ ಪಟ್ಟಿ ಇಲ್ಲಿದೆ ನೋಡಿ...

71st National Film Awards 2025: 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ: ಇಲ್ಲಿದೆ ಆಯ್ಕೆಯಾದ ಎಲ್ಲ ಸಿನಿಮಾಗಳ ಪಟ್ಟಿ
National Award 2025
ಮಂಜುನಾಥ ಸಿ.
|

Updated on: Aug 01, 2025 | 7:23 PM

Share

ಕೇಂದ್ರವು 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಇಂದು (ಆಗಸ್ಟ್ 01) ಘೋಷಣೆ ಮಾಡಿದೆ. ಖ್ಯಾತ ನಿರ್ದೇಶಕ ಅಶುತೋಷ್ ಗೋವರಿಕರ್ ಅವರು ಈ ಬಾರಿ ಫೀಚರ್ ಫಿಲಂ ವಿಭಾಗದ ಆಯ್ಕೆ ಸಮಿತಿಯ ಅಧ್ಯಕ್ಷರಾಗದ್ದರು. ಅವರ ಸಮಿತಿಯಲ್ಲಿ ಗೀತಾ ಗುರಪ್ಪಜಿ, ಅನೀಶ್ ಬಾಸು, ವಿಯನ್ ಆದಿತ್ಯ, ಎಂಎನ್ ಸ್ವಾಮಿ, ಪರೇಶ್ ವೋಹ್ರಾ, ಸುಶೀಲ್ ರಾಜ್​ಪಾಲ್, ಎಂ ಮಣಿರಾಮ್, ಪ್ರದೀಪ್ ನಾಯರ್, ವಿವೇಕ್ ಪ್ರತಾಪ್, ಪ್ರಕೃತಿ ಮಿಶ್ರಾ ಅವರುಗಳು 332 ಸಿನಿಮಾಗಳನ್ನು ವೀಕ್ಷಣೆ ಮಾಡಿ ಅವುಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿದೆ ಪಟ್ಟಿ…

ಪ್ರಶಸ್ತಿಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿ

ವಿಶೇಷ ಗೌರವ- ಅನಿಮಲ್ (ರೀ ರೆಕಾರ್ಡಿಂಗ್)

ಅತ್ಯುತ್ತಮ ಸ್ಟಂಟ್- ಹನುಮ್ಯಾನ್ (ತೆಲುಗು)

ಅತ್ಯುತ್ತಮ ಕೊರಿಯೋಗ್ರಫಿ-ದಿಂಢೋರಾ ಬಾಜೋರೆ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)

ಅತ್ಯುತ್ತಮ ಗೀತ ಸಾಹಿತ್ಯ – ಕಾಸರಾಲ ಶ್ಯಾಮ-ಬಲಗಂ (ತೆಲುಗು)

ಅತ್ಯುತ್ತಮ ಸಂಗೀತ- ಜಿವಿ ಪ್ರಕಾಶ್ ಕುಮಾರ್- ವಾತಿ (ತಮಿಳು)

ಹಿನ್ನೆಲೆ ಸಂಗೀತ- ಅನಿಮಲ್ (ಹಿಂದಿ) ಹರ್ಷವರ್ಧನ್ ರಾಮೇಶ್

ಅತ್ಯುತ್ತಮ ಪ್ರಸಾಧನ- ಶ್ರೀಕಾಂತ್ ದೇಸಾಯಿ (ಸ್ಯಾಮ್ ಬಹಾದ್ಧೂರ್)

ಅತ್ಯುತ್ತಮ ವಸ್ತ್ರವಿನ್ಯಾಸ- ಸ್ಯಾಮ್ ಬಹಾದ್ಧೂರ್

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಮೋಹನ್​ದಾಸ್-2018 (ಮಲಯಾಳಂ)

ಅತ್ಯುತ್ತಮ ಸಂಕಲನ- ಮಿಧುನ್ ಮುರಳಿ-ಪೂಕಾಲಂ, (ಮಲಯಾಳಂ)

ಅತ್ಯುತ್ತಮ ಧ್ವನಿ ವಿನ್ಯಾಸ- ಸಚಿನ್ ಸುಧಾಕರ್-ಹರಿಹರ, ಅನಿಮಲ್ (ಹಿಂದಿ)

ಅತ್ಯುತ್ತಮ ಚಿತ್ರಕತೆ- ಬೇಬಿ (ತೆಲುಗು), ಪಾರ್ಕಿಂಗ್ (ತಮಿಳು)

ಅತ್ಯುತ್ತಮ ಸಂಭಾಷಣೆ- ಸಿರ್ಫ್ ಎಕ್ ಬಂದಾ ಕಾಫಿ ಹೈ (ಹಿಂದಿ)

ಅತ್ಯುತ್ತಮ ಸಿನಿಮಾಟೊಗ್ರಫಿ- ಪ್ರಸಂತನು ಮೋಹಪಾತ್ರ- ದಿ ಕೇರಳ ಸ್ಟೋರಿ, (ಹಿಂದಿ)

ಅತ್ಯುತ್ತಮ ಗಾಯಕಿ- ಚಲಿಯಾ (ಜವಾನ್)

ಅತ್ಯುತ್ತಮ ಗಾಯಕ- ರೋಹಿತ್ಮ, ಪ್ರೇಮಿಸ್ತುನ್ನಾ-ಬೇಬಿ ಸಿನಿಮಾ (ತೆಲುಗು)

ಅತ್ಯುತ್ತಮ ಬಾಲ ಕಲಾವಿದರು- ಗಾಂಧಿ ತಾತ ಚೆಟ್ಟು (ಸುಕ್ರುತಿ), ಮರಾಠಿ (ಜಿಪ್ಸಿ) ಕಬೀರ್ ಖಂದಾರೆ, ನಾಲ್ 2 (ಜಿಮ್ಮಿ)

ಅತ್ಯುತ್ತಮ ಪೋಷಕ ನಟಿ- ಊರ್ವಶಿ-ಉಳುಲುಕ್ಕು(ಮಲಯಾಳಂ) , ಜಾನಕಿ ಬೋಡಿವಾಲ-ವಶ್ (ಗುಜರಾತಿ)

ಪೋಷಕ ನಟ- ವಿಜಯರಾಘವನ್-ಪೂಕಾಲಂ (ಮಲಯಾಳಂ), ಮುತ್ತುಪೇಟೆ ಸೋನು ಭಾಸ್ಕರ್-ಪಾರ್ಕಿಂಗ್ (ತಮಿಳು)

ಅತ್ಯುತ್ತಮ ನಟಿ- ರಾಣಿ ಮುಖರ್ಜಿ, ಮಿಸ್ಟರ್ ಚಾಟರ್ಜಿ ವರ್ಸಸ್ ನಾರ್ವೆ (ಹಿಂದಿ)

ಅತ್ಯುತ್ತಮ ನಟ- ಶಾರುಖ್ ಖಾನ್ ಜವಾನ್, ವಿಕ್ರಾಂತ್ ಮಾಸ್ಸಿ 12 ಫೇಲ್

ಅತ್ಯುತ್ತಮ ನಿರ್ದೇಶಕ- ಸುದಿಪ್ತೋ ಸೇನ್, ದಿ ಕೇರಳ ಸ್ಟೋರಿ

ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಹನುಮಾನ್ (ತೆಲುಗು)

ಅತ್ಯುತ್ತಮ ಮಕ್ಕಳ ಸಿನಿಮಾ-ನಾಲ್ 2 (ಮರಾಠಿ)

ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ-ಸ್ಯಾಮ್ ಬಹಾದ್ಧೂರ್ (ಹಿಂದಿ)

ಅತ್ಯುತ್ತಮ ಮನೊರಂಜನಾ ಸಿನಿಮಾ- ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ

ಅತ್ಯುತ್ತಮ ಡೆಬ್ಯೂ ಸಿನಿಮಾ-ಆತ್ಮಪಾಂಪಲೇಟ್ (ಮರಾಠಿ)

ಅತ್ಯುತ್ತಮ ಸಿನಿಮಾ- 12ತ್ ಫೇಲ್ (ಹಿಂದಿ)

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More