9.5 ರೇಟಿಂಗ್ ಪಡೆದ ‘ಆಡುಜೀವಿತಂ’; ಎರಡು ದಿನಕ್ಕೆ ಮಾಡಿದ ಕಲೆಕ್ಷನ್ ಎಷ್ಟು?

|

Updated on: Mar 30, 2024 | 11:05 AM

‘ಆಡುಜೀವಿತಂ’ ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಯಿತು. ಮೊದಲ ದಿನ ಸಿನಿಮಾ 7.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ ಚಿತ್ರದ ಗಳಿಕೆ 6.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 14.10 ಕೋಟಿ ರೂಪಾಯಿ ದಾಟಿದೆ.

9.5 ರೇಟಿಂಗ್ ಪಡೆದ ‘ಆಡುಜೀವಿತಂ’; ಎರಡು ದಿನಕ್ಕೆ ಮಾಡಿದ ಕಲೆಕ್ಷನ್ ಎಷ್ಟು?
ಪೃಥ್ವಿರಾಜ್
Follow us on

ಪೃಥ್ವಿರಾಜ್​ ಸುಕುಮಾರ್ ನಟನೆಯ ‘ಆಡುಜೀವಿತಂ’ ಸಿನಿಮಾ (Aadujeevitham Movie) ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಪೃಥ್ವಿರಾಜ್ ನಟನೆ ಹಾಗೂ ಅವರ ಮೇಕೋವರ್ ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾ ದೇಶದ್ಯಾಂತ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬುಕ್​ ಮೈ ಶೋನಲ್ಲಿ ಈವರೆಗೆ (ಮಾರ್ಚ್ 29 ಬೆಳಿಗ್ಗೆ 11 ಗಂಟೆ) 9.5 ರೇಟಿಂಗ್ ಪಡೆದಿದೆ. ಮಾರ್ಚ್ 28ರಂದು ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಆಡುಜೀವಿತಂ’ ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಯಿತು. ಮೊದಲ ದಿನ ಸಿನಿಮಾ 7.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ ಚಿತ್ರದ ಗಳಿಕೆ 6.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 14.10 ಕೋಟಿ ರೂಪಾಯಿ ದಾಟಿದೆ. ಮಲಯಾಳಂ ಚಿತ್ರರಂಗದಿಂದಲೇ 11.82 ಕೋಟಿ ರೂಪಾಯಿ ಗಳಿಕೆ ಆಗಿದೆ. ಕನ್ನಡದಿಂದ ಕೇವಲ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡಿದೆ. ಇಂದು (ಮಾರ್ಚ್ 30) ಹಾಗೂ ನಾಳೆ (ಮಾರ್ಚ್ 31) ಸಿನಿಮಾ ಕಲೆಕ್ಷನ್ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ.

‘ಆಡುಜೀವಿತಂ’ ಸಿನಿಮಾ ನೈಜ ಘಟನೆ ಆಧರಿಸಿದೆ. ಕೇರಳ ಮೂಲದ ವ್ಯಕ್ತಿ ಕೆಲಸಕ್ಕಾಗಿ ಸೌದಿ ಅರೇಬಿಯಾ ತೆರಳುತ್ತಾರೆ. ಸೂಪರ್ ಮಾರ್ಕೆಟ್​ನಲ್ಲಿ ಮಾಡೋ ಕೆಲಸ ಎಂದು ಆತನ ಕರೆದುಕೊಂಡು ಹೋಗುತ್ತಾರೆ. ಆ ಬಳಿಕ ಅದು ಮೋಸ ಅನ್ನೋದು ಗೊತ್ತಾಗುತ್ತದೆ. ಆತನಿಗೆ ಮರಳುಗಾಡಿನಲ್ಲಿ ಕುರಿ ಕಾಯುವ ಕೆಲಸ ಸಿಗುತ್ತದೆ. ಹಲವು ವರ್ಷ ಅಲ್ಲಿಯೇ ಟ್ರ್ಯಾಪ್ ಆಗೋ ಆ ವ್ಯಕ್ತಿ ನಂತರ ಮರಳಿ ಬರುತ್ತಾರೆ.

ಇದನ್ನೂ ಓದಿ: ‘ಆಡುಜೀವಿತಂ’ ಪ್ರಚಾರಕ್ಕೆ ಪ್ರಭಾಸ್​ ಅನ್ನು ಕರೆಯಲಿಲ್ಲವೇಕೆ? ಪೃಥ್ವಿರಾಜ್ ಕೊಟ್ಟರು ಮುತ್ತಿನಂಥಹಾ ಉತ್ತರ

‘ಆಡುಜೀವಿತಂ’ ಚಿತ್ರವನ್ನು ಬ್ಲೆಸ್ಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪೃಥ್ವಿರಾಜ್, ಅಮಲಾ ಪೌಲ್ ಮೊದಲಾದವರು ಸಿನಿಮಾದಲ್ಲಿ ಇದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ಈ ಸಿನಿಮಾಗಾಗಿ ಮಾತುಕತೆ ನಡೆದಿದ್ದು 2009ರಲ್ಲಿ. ಚಿತ್ರ ಸೆಟ್ಟೇರಿದ್ದು 2018ರಲ್ಲಿ. 2024ರಲ್ಲಿ ಸಿನಿಮಾ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ