‘ಅವರು ಭಾರತದ ಹೀರೋಗಳು’; ಹಾರ್ದಿಕ್ನ ಟ್ರೋಲ್ ಮಾಡಿದ್ದನ್ನು ಖಂಡಿಸಿದ ಸೋನು ಸೂದ್
ಕ್ರೀಡಾ ಸ್ಫೂರ್ತಿ ಅನ್ನೋದು ತುಂಬಾನೇ ಮುಖ್ಯ. ಆಟಗಾರ ಹೇಗೆ ಆಡಿದರೂ ಅವರನ್ನು ಸ್ವೀಕರಿಸಿಬೇಕು. ಆದರೆ, ಪಾಂಡ್ಯ ವಿಚಾರದಲ್ಲಿ ಹಾಗಾಗುತ್ತಿಲ್ಲ. ಅವರು ಮುಂಬೈ ಇಂಡಿಯನ್ಸ್ಗೆ ಆಗಮಿಸಿ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯನ್ನು ಕಿತ್ತುಕೊಂಡಿದ್ದಾರೆ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇದೆ.
ಮುಂಬೈ ಇಂಡಿಯನ್ಸ್‌ನ (Mumbai Indians) ಹೊಸ ನಾಯಕ ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಗುಜರಾತ್ನ ಟೈಟನ್ಸ್ ಕ್ಯಾಪ್ಟನ್ ಆಗಿ ಆಡಿದ ಎರಡು ಸೀಸನ್ನಲ್ಲಿ ಅವರು ತಂಡವನ್ನು ಎರಡು ಬಾರಿ ಫಿನಾಲೆಗೆ ಕರೆದುಕೊಂಡು ಹೋಗಿದ್ದರು ಮತ್ತು ಒಮ್ಮೆ ಕಪ್ ಗೆದ್ದಿದ್ದರು. ಈ ಬಾರಿ ಅವರು ಮುಂಬೈ ಕ್ಯಾಪ್ಟನ್ ಆಗಿದ್ದು, ಆಡಿದ ಎರಡೂ ಪಂದ್ಯದಲ್ಲಿ ಅವರು ಸೋತಿದ್ದಾರೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಭಾರೀ ಟ್ರೋಲ್ ಆಗುತ್ತಿದೆ. ಅಹಮದಾಬಾದ್ ಮತ್ತು ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರು ಅವರನ್ನು ಟೀಕೆ ಮಾಡಿದ್ದಾರೆ. ಹಾರ್ದಿಕ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದರೆ ಅಥವಾ ಔಟಾದ ನಂತರ ಪೆವಿಲಿಯನ್‌ಗೆ ಹಿಂತಿರುಗಿದರೆ ರೋಹಿತ್ ಶರ್ಮಾ ಹೆಸರನ್ನು ಪ್ರೇಕ್ಷಕರು ಉದ್ದೇಶಪೂರ್ವಕವಾಗಿ ಕೂಗುತ್ತಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸೋನು ಸೂದ್ಗೆ ಇಷ್ಟವಾಗಲಿಲ್ಲ. ಈ ಬಗ್ಗೆ ಅವರು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರೀಡಾ ಸ್ಫೂರ್ತಿ ಅನ್ನೋದು ತುಂಬಾನೇ ಮುಖ್ಯ. ಆಟಗಾರ ಹೇಗೆ ಆಡಿದರೂ ಅವರನ್ನು ಸ್ವೀಕರಿಸಿಬೇಕು. ಆದರೆ, ಪಾಂಡ್ಯ ವಿಚಾರದಲ್ಲಿ ಹಾಗಾಗುತ್ತಿಲ್ಲ. ಅವರು ಮುಂಬೈ ಇಂಡಿಯನ್ಸ್ಗೆ ಆಗಮಿಸಿ ರೋಹಿತ್ ಶರ್ಮಾ ಅವರ ಕ್ಯಾಪ್ಟನ್ಸಿಯನ್ನು ಕಿತ್ತುಕೊಂಡಿದ್ದಾರೆ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇದೆ. ಇತ್ತೀಚೆಗೆ ರೋಹಿತ್ ಶರ್ಮಾ ಅವರನ್ನು ಬೌಂಡರಿ ಗಡಿಗೆ ಪಾಂಡ್ಯ ಓಡಿಸಿದ್ದು ಅನೇಕರಿಗೆ ಬೇಸರ ತರಿಸಿದೆ. ಈ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಟೀಕೆ ಎದುರಿಸುತ್ತಿದ್ದಾರೆ.
ಈಗ ಸೋನು ಸೂದ್ ಅವರು ಪೋಸ್ಟ್ ಒಂದನ್ನು ಮಾಡಿದ್ದಾರೆ. ಇದರಲ್ಲಿ ಅವರು ಹಾರ್ದಿಕ್ ಪಾಂಡ್ಯ ಬಗ್ಗೆ ನೇರವಾಗಿ ಪ್ರಸ್ತಾಪಿಸಿಲ್ಲ. ಆದರೆ ಅವರ ಈ ಪೋಸ್ಟ್ ಹಾರ್ದಿಕ್ ಬಗ್ಗೆ ಮಾಡಿದ ಟ್ರೋಲ್ ಕುರಿತಾಗಿಯೇ ಇದೆ. ನಮ್ಮ ದೇಶದ ಕ್ರೀಡಾಪಟುಗಳು ನಮ್ಮ ಹೀರೋಗಳು ಎಂದು ಅವರು ಬರೆದಿದ್ದಾರೆ. ‘ನಾವು ನಮ್ಮ ಆಟಗಾರರನ್ನು ಗೌರವಿಸಬೇಕು. ಅವರು ನಮ್ಮ ಹಾಗೂ ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದ ಆಟಗಾರರು. ಒಂದು ದಿನ ಅವರನ್ನು ಚಿಯರ್ ಮಾಡುತ್ತೀರಿ, ಮತ್ತೊಂದು ದಿನ ಬಯ್ಯುತ್ತೀರಿ. ಇಲ್ಲಿ ಅವರಲ್ಲ ವಿಫಲರಾಗುತ್ತಿರುವುದು, ನಾವು’ ಎಂದು ಪೋಸ್ಟ್ ಆರಂಭಿಸಿದ್ದಾರೆ ಅವರು.
‘ನನಗೆ ಕ್ರಿಕೆಟ್ ಮೇಲೆ ಪ್ರೀತಿ ಇದೆ. ನನ್ನ ದೇಶವನ್ನು ಪ್ರತಿನಿಧಿಸುವ ಎಲ್ಲಾ ಆಟಗರಾರ ಮೇಲೆ ನನಗೆ ಪ್ರೀತಿ ಇದೆ. ಅವರು ಯಾವ ಫ್ರಾಂಚೈಸಿಗೆ ಆಟ ಆಡುತ್ತಾರೆ ಅನ್ನೋದು ನನಗೆ ಮುಖ್ಯವಲ್ಲ. ಅವರು ಕ್ಯಾಪ್ಟನ್ ಅಥವಾ 15ನೇ ಆಟಗಾರನೋ ಅನ್ನೋದು ನನಗೆ ಮುಖ್ಯವಲ್ಲ. ಅವರು ಭಾರತದ ಹೀರೋಗಳು’ ಎಂದು ಹೇಳಿದ್ದಾರೆ. ಇದು ಹಾರ್ದಿಕ್ ಪಾಂಡ್ಯಾ ಬಗ್ಗೆಯೇ ಹಾಕಲಾದ ಪೋಸ್ಟ್ ಅನ್ನೋದು ಎಲ್ಲರಿಗೂ ಗೊತ್ತಾಗಿದೆ.
ಹಾರ್ದಿಕ್ ಪಾಂಡ್ಯಾ ಬಗ್ಗೆ ಸೋನು ಟ್ವೀಟ್
We should respect our players. Players who made us proud, players who made our country proud. One day you cheer for them, next day you boo them. It’s not they, it’s us who fail. I love cricket. I love every cricketer who represents my country. Doesn’t matter which franchise…
— sonu sood (@SonuSood) March 29, 2024
ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ನ ಹೊಸ ನಾಯಕನನ್ನಾಗಿ ಮಾಡಲಾಯಿತು. ರೋಹಿತ್ ಶರ್ಮಾ ಅವರನ್ನು ಈ ರೀತಿ ನಾಯಕತ್ವದಿಂದ ತೆಗೆದುಹಾಕಿರುವುದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಮುಂಬೈ ಇಂಡಿಯನ್ಸ್ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕೆ ಹಾರ್ದಿಕ್ ಅವರೇ ಕಾರಣ ಅನ್ನೋದು ಅನೇಕರ ಅಭಿಪ್ರಾಯ. ಈ ಎರಡೂ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಕ್ರೀಡಾಂಗಣದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿದೆ.
ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಜೊತೆ ಆಕಾಶ್ ಅಂಬಾನಿ ಸುದೀರ್ಘ ಚರ್ಚೆ..!
ಸೋನು ಸೂದ್ ಅವರು ಕೊವಿಡ್ ಬಳಿಕ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುತ್ತಿಲ್ಲ. ಸಾಮಾಜಿಕವಾಗಿ ಅವರು ಎಲ್ಲರಿಗೂ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಸಾಮಾಜಿಕ ಕೆಲಸದ ಮೇಲೆ ಅವರ ಗಮನ ಇದೆ. ಈ ಬಾರಿ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ