ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ

 ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು.

ಐಶ್ವರ್ಯಾ ರೈ-ಅಭಿಷೇಕ್​ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ
ಬಾಬಿ ಹಾಗೂ ಐಶ್ವರ್ಯಾ-ಅಭಿಷೇಕ್​

Updated on: Jul 02, 2021 | 8:20 PM

ಐಶ್ವರ್ಯಾ ರೈ ಹಾಗೂ ಅಭಿಷೆಕ್​ ಬಚ್ಚನ್​ ಬಾಲಿವುಡ್​ನ ಕ್ಯೂಟ್​ ಕಪಲ್​. ಇತ್ತೀಚೆಗಷ್ಟೇ ಈ ಜೋಡಿ 14ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು. ವಿಶೇಷ ಎಂದರೆ, ಇವರ ಪ್ರೀತಿಗೆ ಸೇತುವೆ ಆಗಿದ್ದು ನಟ ಬಾಬಿ ಡಿಯೋಲ್. ಸಾಕಷ್ಟು ವರ್ಷಗಳ ನಂತರದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

ಐಶ್ವರ್ಯಾ ಹಾಗೂ ಅಭಿಷೇಕ್​ ಮೊಟ್ಟ ಮೊದಲ ಬಾರಿಗೆ ಭೇಟಿ ಆಗಿದ್ದು ಸ್ವಿಜರ್ಲೆಂಡ್​ನಲ್ಲಿ. 1996 ಸಮಯದಲ್ಲಿ ಐಶ್ವರ್ಯಾ ರೈ ಔರ್​ ಪ್ಯಾರ್​ ಹೋಗಯಾ ಚಿತ್ರದ ಶೂಟಿಂಗ್​ನಲ್ಲಿ ತೊಡಗಿದ್ದರು. ಈ ಸಿನಿಮಾಗೆ ಬಾಬಿ ಡಿಯೋಲ್​ ಹೀರೋ. ಇದು ಅವರ ಮೊದಲ ಚಿತ್ರ. ಇದೇ ವೇಳೆ ಅಮಿತಾಭ್​ ಬಚ್ಚನ್​ ಮೃತ್ಯುದಾತ ಚಿತ್ರಕ್ಕಾಗಿ ಲೊಕೇಷನ್ ಹುಡುಕಲು ಸ್ವಿಜರ್ಲೆಂಡ್​ಗೆ ತೆರಳಿದ್ದರು. ತಂದೆಯ ಜತೆ ಅಭಿಷೇಕ್​ ಕೂಡ ಹೋಗಿದ್ದರು.

ಅಭಿಷೇಕ್​ ಹಾಗೂ ಬಾಬಿ ಬಾಲ್ಯದ ಗೆಳೆಯರು. ಹೀಗಾಗಿ, ಬಾಬಿ ನೋಡೋಕೆ ಅಭಿಷೇಕ್​ ಸೆಟ್​ಗೆ ತೆರಳಿದ್ದರು. ಆಗ, ಅಭಿಷೇಕ್​ ಅವರನ್ನು ಐಶ್ವರ್ಯಾಗೆ ಬಾಬಿ ಪರಿಚಯಿಸಿಕೊಟ್ಟಿದ್ದರು. ನಂತರ ಮೂವರು ಒಟ್ಟಾಗಿ ಊಟ ಕೂಡ ಮಾಡಿದ್ದರು.

ಐಶ್ವರ್ಯಾ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದಾಗ ನಾನು ಪ್ರೊಡಕ್ಷನ್​ ಬಾಯ್​ ಆಗಿದ್ದೆ. ನಾನು ಸ್ವಿಜರ್ಲೆಂಡ್​ನಲ್ಲಿ ಓದಿದ್ದೆ. ಹೀಗಾಗಿ ಮೃತ್ಯುದಾತ ಚಿತ್ರತಂಡದವರು ಲೊಕೇಷನ್​ ಆಯ್ಕೆ ಮಾಡಲು ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಆಗ ನಾನು ಬಾಬಿ ಸಹಾಯದಿಂದ ಐಶ್ವರ್ಯಾ ಅವರನ್ನು ಭೇಟಿ ಆದೆ ಎಂದು ಅಭಿಷೇಕ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2007ರ ಎಪ್ರಿಲ್​ 20ರಂದು ಐಶ್ವರ್ಯಾ ಹಾಗೂ ಅಭಿಷೇಕ್​ ಮದುವೆ ಆದರು. ಕುಚ್​ ನ ಕಹೋ, ಗುರು, ರಾವಣ್​ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದಾರೆ. ಇಬ್ಬರೂ ಅನುರಾಗ್​ ಕಶ್ಯಪ್​ ನಿರ್ಮಾಣದ ಗುಲಾಬ್​ ಜಾಮೂನ್​ ಸಿನಿಮಾದಲ್ಲಿ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನದ ಈ ಟಿಕ್​ಟಾಕ್​ ಸ್ಟಾರ್​ ಐಶ್ವರ್ಯಾ ರೈ ಪಡಿಯಚ್ಚು!

ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್​ ವಿಡಿಯೋ ವೈರಲ್ 

Published On - 7:42 pm, Sat, 24 April 21

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us