ಸ್ಟಾರ್​ ನಟಿಯರಿಗೆ ಕಿಸ್​ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್​ ಹಷ್ಮಿ! ತಪ್ಪು ಒಪ್ಪಿಕೊಂಡ ನಟ

| Updated By: ರಾಜೇಶ್ ದುಗ್ಗುಮನೆ

Updated on: Mar 22, 2021 | 5:56 PM

ಬೋಲ್ಡ್​​ ಪಾತ್ರಗಳಿಂದ ನನಗೆ ಒಂದೇ ರೀತಿಯ ಅವಕಾಶಗಳು ಹರಿದುಬಂದವು. ಆವರೆಗೂ ಕೇಳಿರದ ಬೋಲ್ಡ್​ ಕಥೆಗಳನ್ನು ತೆರೆಗೆ ತರಲು ಸಾಧ್ಯವಾಯಿತು. ಅದರ ಜೊತೆಗೆ ತೊಂದರೆ ಕೂಡ ಆಯಿತು ಎಂದು ಇಮ್ರಾನ್​ ಹಷ್ಮಿ ಈಗ ಬಾಯಿ ಬಿಟ್ಟಿದ್ದಾರೆ.

ಸ್ಟಾರ್​ ನಟಿಯರಿಗೆ ಕಿಸ್​ ಮಾಡಿ ತೊಂದರೆಗೆ ಸಿಲುಕಿದ್ದ ಇಮ್ರಾನ್​ ಹಷ್ಮಿ! ತಪ್ಪು ಒಪ್ಪಿಕೊಂಡ ನಟ
ಇಮ್ರಾನ್​ ಹಷ್ಮಿ
Follow us on

ಬಾಲಿವುಡ್​ ಸಿನಿಮಾಗಳಲ್ಲಿ ನಟ ಇಮ್ರಾನ್​ ಹಷ್ಮಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬೋಲ್ಡ್​ ಪಾತ್ರಗಳ ಮೂಲಕ ಗುರುತಿಸಿಕೊಂಡ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಲಕ್ಷಾಂತರ ಮಹಿಳಾ ಅಭಿಮಾನಿಗಳಿಗೂ ಇಮ್ರಾನ್​ ಹಷ್ಮಿ ಫೇವರಿಟ್​. ಆದರೆ ತಾವು ಬದುಕಿನಲ್ಲಿ ಮಾಡಿದ ಚುಂಬನದ ತಪ್ಪಿನ ಬಗ್ಗೆ ಈಗ ಅವರು ಬಾಯಿ ಬಿಟ್ಟಿದ್ದಾರೆ.

ಮರ್ಡರ್​ ಸಿನಿಮಾ ಮೂಲಕ ಇಮ್ರಾನ್​ ಹಷ್ಮಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತು. ಅದರಲ್ಲಿ ಅವರು ನಟಿ ಮಲ್ಲಿಕಾ ಶೆರಾವತ್​ ಜೊತೆ ತುಂಬಾ ಆಪ್ತವಾಗಿ ಕಾಣಿಸಿಕೊಂಡಿದ್ದರು. ಕಿಸ್ಸಿಂಗ್​ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದರು. ನಂತರ ಬಂದ ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದಲ್ಲಿಯೂ ಅವರು ತನುಶ್ರೀ ದತ್ತ ಜೊತೆ ಸಿಕ್ಕಾಪಟ್ಟೆ ಬೋಲ್ಡ್​ ಆಗಿ ರೊಮ್ಯಾನ್ಸ್​ ಮಾಡಿದರು.

ಬಳಿಕ ಬಿಡುಗಡೆ ಆದ ‘ಅಕ್ಸರ್​’ ಸಿನಿಮಾದಲ್ಲಿ ಉದಿತಾ ಗೋಸ್ವಾಮಿ ಜೊತೆ ಕೂಡ ಇಮ್ರಾನ್​ ಹಷ್ಮಿ ಬಹಳ ಇಂಟಿಮೇಟ್​ ಆಗಿ ಕಾಣಿಸಿಕೊಂಡರು. ಈ ಎಲ್ಲ ಕಾರಣಗಳಿಗಾಗಿ ಇಮ್ರಾನ್​ ಹಷ್ಮಿಗೆ ಸೀರಿಯಲ್​ ಕಿಸ್ಸರ್​ ಎಂಬ ಬಿರುದು ಬಂತು. ಆದರೆ ಅದರಿಂದ ತಮ್ಮ ವೃತ್ತಿಜೀವನದ ಮೇಲೆ ಆದ ಪರಿಣಾಮ ಏನು ಎಂಬುದನ್ನು ಈಗ ಇಮ್ರಾನ್​ ಹಷ್ಮಿ ಒಪ್ಪಿಕೊಂಡಿದ್ದಾರೆ.

‘ಅಂಥ ಪಾತ್ರಗಳಿಂದ ನನಗೆ ಸೀರಿಯಲ್​ ಕಿಸ್ಸರ್​ ಇಮೇಜ್​ ಬಂತು. ಅದರಿಂದ ನನಗೆ ಇದೇ ರೀತಿಯ ಅವಕಾಶಗಳು ಹರಿದುಬಂದವು. ಆವರೆಗೂ ಕೇಳಿರದ ಬೋಲ್ಡ್​ ಕಥೆಗಳನ್ನು ತೆರೆಗೆ ತರಲು ಸಾಧ್ಯವಾಯಿತು. ಅದರ ಜೊತೆಗೆ ತೊಂದರೆ ಕೂಡ ಆಯಿತು’ ಎಂದು ಇಮ್ರಾನ್​ ಹಷ್ಮಿ ಈಗ ಬಾಯಿ ಬಿಟ್ಟಿದ್ದಾರೆ. ಯಾಕೆಂದರೆ ಒಂದೇ ರೀತಿಯ ಪಾತ್ರಗಳಿಗೆ ಅವರನ್ನು ಬ್ರ್ಯಾಂಡ್​ ಮಾಡಲಾಯಿತು. ಅವರಿಗೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಸಾಮರ್ಥ್ಯ ಇದ್ದರೂ ಕೂಡ ಅವಕಾಶಗಳು ಸಿಗಲಿಲ್ಲ.

ಆ ಬಳಿಕ ತಮ್ಮ ಇಮೇಜ್​ ಬದಲಾಯಿಸಿಕೊಳ್ಳಲು ಇಮ್ರಾನ್​ ಹಷ್ಮಿ ಹಲವು ಬಗೆಯಲ್ಲಿ ಪ್ರಯತ್ನಿಸಿದರು. ಸೀರಿಯಲ್​ ಕಿಸ್ಸರ್​, ಲವರ್​ ಬಾಯ್​ ಇಮೇಜ್​ ಬದಿಗಿಟ್ಟು ಬೇರೆ ಬೇರೆ ಪಾತ್ರಗಳನ್ನು ಮಾಡಲು ಪ್ರಯತ್ನಿಸಿದರು. 2019ರಲ್ಲಿ ರಿಲೀಸ್​ ಆದ ಬಾರ್ಡ್​ ಆಫ್​ ಬ್ಲಡ್​ ವೆಬ್​ ಸೀರಿಸ್​ ಮೂಲಕ ತಮ್ಮ ಇಮೇಜ್​ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ಸದ್ಯ ಇಮ್ರಾನ್​ ಹಷ್ಮಿ ನಟನೆಯ ‘ಮುಂಬೈ ಸಾಗಾ’ ಸಿನಿಮಾ ಬಿಡುಗಡೆ ಆಗಿದ್ದು, ಈ ಚಿತ್ರದ ಪ್ರಚಾರದ ಸಲುವಾಗಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಮರಳಿದ ರಿಯಾ ಚಕ್ರವರ್ತಿ; ರಿಲೀಸ್ ಆಯ್ತು ಹೊಸ ಸಿನಿಮಾದ ಟ್ರೇಲರ್

ಈದ್​ಗೆ ಬಾಲಿವುಡ್​ನಲ್ಲಿ ಬಿಗ್​ ಕ್ಲ್ಯಾಶ್​; ಜಾನ್​-ಸಲ್ಲು ಚಿತ್ರಗಳು ಮುಖಾಮುಖಿ