AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈದ್​ಗೆ ಬಾಲಿವುಡ್​ನಲ್ಲಿ ಬಿಗ್​ ಕ್ಲ್ಯಾಶ್​; ಜಾನ್​-ಸಲ್ಲು ಚಿತ್ರಗಳು ಮುಖಾಮುಖಿ

ಸಲ್ಮಾನ್​ ಖಾನ್​ ನಟನೆಯ 'ರಾಧೆ' ಈದ್​ ಪ್ರಯುಕ್ತ ಮೇ 13ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕಾಂಪಿಟೇಷನ್​ ಕೊಡೋಕೆ ಜಾನ್​ ಅಬ್ರಹಾಂ ರೆಡಿ ಆಗಿದ್ದಾರೆ.

ಈದ್​ಗೆ ಬಾಲಿವುಡ್​ನಲ್ಲಿ ಬಿಗ್​ ಕ್ಲ್ಯಾಶ್​; ಜಾನ್​-ಸಲ್ಲು ಚಿತ್ರಗಳು ಮುಖಾಮುಖಿ
ಸಲ್ಮಾನ್​ ಖಾನ್​-ಜಾನ್​ ಅಬ್ರಹಾಂ
ರಾಜೇಶ್ ದುಗ್ಗುಮನೆ
|

Updated on: Mar 18, 2021 | 7:09 PM

Share

ಬಾಲಿವುಡ್​ನಲ್ಲಿ ಸಿನಿಮಾಗಳು ಕ್ಲ್ಯಾಶ್​ ಆಗೋದು ಹೊಸ ವಿಚಾರ ಅಲ್ಲವೇ ಅಲ್ಲ. ಹಬ್ಬದ ಸಮಯದಲ್ಲಿ ಅಥವಾ ವಿಶೇಷ ದಿನಗಳಲ್ಲಿ ಸ್ಟಾರ್​ ನಟರ ಚಿತ್ರಗಳು ರಿಲೀಸ್​ ಆಗುತ್ತವೆ. ಕೊರೊನಾದಿಂದ ತಣ್ಣಗಾಗಿದ್ದ ಬಾಲಿವುಡ್​ ಪುಟಿದೆದ್ದಿದ್ದು, ಸಾಲು ಸಾಲು ಚಿತ್ರಗಳು ರಿಲೀಸ್​ಗೆ ರೆಡಿ ಆಗಿವೆ. ಈಗ ಈದ್​ ಹಬ್ಬಕ್ಕೆ ಬಾಲಿವುಡ್​ನಲ್ಲಿ ದೊಡ್ಡ ಕ್ಲ್ಯಾಶ್​ ಏರ್ಪಡುತ್ತಿದೆ. ಸಲ್ಮಾನ್​ ಖಾನ್​ ನಟನೆಯ ‘ರಾಧೆ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಈದ್​ ಪ್ರಯುಕ್ತ ಮೇ 13ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಕಾಂಪಿಟೇಷನ್​ ಕೊಡೋಕೆ ಜಾನ್​ ಅಬ್ರಹಾಂ ರೆಡಿ ಆಗಿದ್ದಾರೆ. ಅವರ ನಟನೆಯ ‘ಸತ್ಯಮೇವ ಜಯತೆ 2’ ಚಿತ್ರ ಕೂಡ ಈದ್​ಗೆ ಬಿಡುಗಡೆ ಆಗುತ್ತಿದೆ.

ಸತ್ಯಮೇವ ಜಯತೆ ಸಿನಿಮಾದಲ್ಲಿ ಜಾನ್​ ಅಬ್ರಹಾಂ ಮೂರು ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೊಸ ಲುಕ್​ಗಳನ್ನು ಚಿತ್ರತಂಡ ಶೀಘ್ರವೇ ರಿಲೀಸ್​ ಮಾಡಲಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಸತ್ಯಮೇವ ಜಯತೆ-2 ಸಿನಿಮಾದಲ್ಲಿ ಜಾನ್​ ಅಬ್ರಹಾಂ ಲುಕ್​ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಆದರೆ, ಇದನ್ನು ಚಿತ್ರತಂಡ ತಳ್ಳಿ ಹಾಕಿತ್ತು.

2009ರ ನಂತರ ಸಲ್ಮಾನ್​ ಖಾನ್​ ನಟನೆಯ ಚಿತ್ರಗಳು ಬಹುತೇಕವಾಗಿ ಈದ್​ ಅಂದೇ ತೆರೆಗೆ ಬರುತ್ತಿದೆ. ಈ ವರ್ಷವೂ ಸಲ್ಮಾನ್​ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ಆಲೋಚನೆಯಲ್ಲಿದ್ದಾರೆ. ಈಗ ಜಾನ್​ ಅಬ್ರಹಾಂ ಸಿನಿಮಾ ಕೂಡ ಇದೇ ದಿನ ಬರುತ್ತಿರುವುದು ಸಿನಿಮಾ ಪ್ರೇಕ್ಷಕರ ಖುಷಿ ಹೆಚ್ಚಿಸಿದೆ.

ಅಂದಹಾಗೆ, ಈ ಎರಡೂ ಸಿನಿಮಾಗಳು ಸಾಕಷ್ಟು ಆ್ಯಕ್ಷನ್​ನಿಂದ ಕೂಡಿರಲಿವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಧೆ ಚಿತ್ರಕ್ಕೆ ಪ್ರಭುದೇವ ಅವರ ನಿರ್ದೇಶನ ಇದೆ. ನಾಯಕಿಯಾಗಿ ದಿಶಾ ಪಟಾಣಿ ನಟಿಸಿದ್ದಾರೆ. ಜಾಕಿ ಶ್ರಾಫ್​, ರಣದೀಪ್​ ಹೂಡ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2019ರ ಅಕ್ಟೋಬರ್​ 18ರಂದು ಚಿತ್ರ ಅಧಿಕೃತವಾಗಿ ಘೋಷಣೆ ಆಗಿತ್ತು. ಎಲ್ಲ ಅಂದುಕೊಂಡಿದ್ದರೆ ಕಳೆದ ಮೇ ತಿಂಗಳಲ್ಲೇ ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು.

ಇನ್ನು ಸತ್ಯಮೇವ ಜಯತೆ 2ಗೆ ಮಿಲಪ್​ ಜಾವೇರಿ ನಿರ್ದೇಶನವಿದೆ. ಜಾನ್​ ಅಬ್ರಹಾಂಗೆ ಜತೆಯಾಗಿ ದಿವ್ಯಾ ಖೋಸ್ಲಾ ಕುಮಾರ್ ನಟಿಸಿದ್ದಾರೆ. 2018ರಲ್ಲಿ ತೆರೆಕಂಡ ಸತ್ಯಮೇವ ಜಯತೆ ಚಿತ್ರದ ಮುಂದಿನ ಭಾಗ ಇದಾಗಿದೆ.

ಇದನ್ನೂ ಓದಿ: ಈದ್​ ವೇಳೆಗೆ ತೆರೆಕಾಣಲಿದೆ ಸಲ್ಮಾನ್​ ಖಾನ್ ಅಭಿನಯದ​ ರಾಧೆ; ಪ್ರಭುದೇವ ನಿರ್ದೇಶನದ ಮೇಲೆ ಭಾರೀ ನಿರೀಕ್ಷೆ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ