AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ

ಬಿಗ್​ ಬಾಸ್​ ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ಕಂಡು ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ
ಮಂಜು ಪಾವಗಡ
ರಾಜೇಶ್ ದುಗ್ಗುಮನೆ
| Edited By: |

Updated on: Mar 19, 2021 | 8:22 AM

Share

ಕಳೆದ ಬಾರಿಯ ಸೀಸನ್​ನಲ್ಲಿ ಶೈನ್​ ಶೆಟ್ಟಿ ಕೂದಲು-ಗಡ್ಡ ಬಿಟ್ಟಿದ್ದರು. ಇದರ ಮೇಲೆ ಬಿಗ್​ ಬಾಸ್​ ಕಣ್ಣು ಬಿದ್ದಿತ್ತು. ಅಷ್ಟೇ ಅಲ್ಲ, ಒಂದು ಸೀಕ್ರೆಟ್​ ಟಾಸ್ಕ್​ ನೀಡಿ ಅದನ್ನು ಕತ್ತರಿಸಿಬಿಟ್ಟಿದ್ದರು. ಈ ಬಾರಿ ಬಿಗ್​​ ಬಾಸ್​ ಮನೆ ಒಳಗೆ ಉದ್ದ ಕೂದಲ ಬಿಟ್ಟೋರು ರಾಜೀವ್​. ಇವರ ಕೂದಲ ಮೇಲೆ ಮನೆಯವರ ಕಣ್ಣು ಬಿದ್ದಿದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಮಂಜು ಪಾವಗಡ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಬಿಗ್​ ಬಾಸ್​ಮನೆಯಲ್ಲಿ ಗುರುವಾರ (ಮಾ.18) ಮನೆ ಮಂದಿಯೆಲ್ಲ ಕೂತು ಮಾತನಾಡುತ್ತಿದ್ದರು. ಈ ವೇಳೆ ರಾಜೀವ್​ ತಮ್ಮ ಉದ್ದ ಕೂದಲನ್ನು ಬಿಚ್ಚಿದ್ದಾರೆ. ಅವರ ನೀಳ ಕೂದಲನ್ನು ನೋಡಿ ಮನೆ ಮಂದಿಯೆಲ್ಲ ಅಚ್ಚರಿಗೊಂಡಿದ್ದಾರೆ.

ಈ ವೇಳೆ ಮಾತನಾಡಿದ್ದ ಮಂಜು, ರಾಜೀವ್​ ಬೇಸಿಗೆಯಲ್ಲಿ ಇಷ್ಟೊಂದು ಉದ್ದ ಕೂದಲ ಬಿಡಬಾರದು. ಬಿಗ್​ ಬಾಸ್​ ಮನೆಯಲ್ಲಿ ನಮಗೆ ಬೇಕಷ್ಟು ಆಹಾರ ಸಿಗಲ್ಲ. ಹೀಗಾಗಿ, ಈ ಆಹಾರವನ್ನೆಲ್ಲ ನಿಮ್ಮ ಕೂದಲೇ ತಿಂದು ಬಿಡುತ್ತದೆ. ಹೀಗಾಗಿ ಕೂದಲನ್ನು ಕತ್ತರಿಸಿ ಬಿಡಿ ಎಂದರು.

ಆಗ ರಾಜೀವ್​, ನನ್ನ ಕೂದಲ ಮೇಲೇಕೆ ಕಣ್ಣು ಎಂದು ಪ್ರಶ್ನೆ ಮಾಡಿದರು. ಆಗ ಮಂಜು, ನಾನು ಕೂದಲ ಮೇಲೆ ಕಣ್ಣನ್ನು ಹಾಕಿಲ್ಲ. ದಯವಿಟ್ಟು ಹಾಗೆ ತಿಳಿಬೇಡಿ ಎಂದು ಕೇಳಿದರು. ಈ ವೇಳೆ ಮಂಜು, ಅಯ್ಯೋ ಆಯ್ತಣ್ಣ ಇನ್ನು ಹಾಗೆ ಹೇಳುವುದಿಲ್ಲ ಎಂದರು. ಅಷ್ಟೇ ಅಲ್ಲ ಬಿಗ್​ ಬಾಸ್​ಗೆ ಒಂದು ಎಚ್ಚರಿಕೆಯನ್ನೂ ನೀಡಿದರು. ‘ರಾಜೀವ್​ ಅವರ ಕೂದಲಿಗೆ ಏನೂ ಆಗಬಾರದು. ಬಿಗ್​ ಬಾಸ್​… ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ’ ಎಂದು ಹೇಳಿದರು. ಇದನ್ನು ಕೇಳಿದ ರಾಜೀವ್​, ನೀವೆಲ್ಲರೂ ಸೇರಿ ನನ್ನ ಕೂದಲಿಗೆ ಒಂದು ಗತಿ ಕಾಣಿಸೋದು ಖಚಿತ ಎಂದು ನಕ್ಕರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?