ನಟ ಶಂಕರ್​ ಅಶ್ವತ್ಥ್​ಗೆ ಜೈಲು ಶಿಕ್ಷೆ! ಹಿರಿಯ ಜೀವಕ್ಕೂ ಕರುಣೆ ತೋರಿಸಲಿಲ್ಲ ಮನೆಯ ಸದಸ್ಯರು

ಬಿಗ್​ ಬಾಸ್​ನಲ್ಲಿ ಅತಿ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್. ಆದರೆ ಟಾಸ್ಕ್​ ವಿಚಾರ ಬಂದಾಗ ಇಲ್ಲಿ ವಯಸ್ಸಿನ ನೆಪ ಹೇಳುವಂತಿಲ್ಲ. ಆದರೂ ಶಂಕರ್​ಗೆ ಕೆಲವೊಂದು ಎಕ್ಸ್​ಕ್ಯೂಸ್​ಗಳು ಸಿಕ್ಕಿದ್ದವು.

ನಟ ಶಂಕರ್​ ಅಶ್ವತ್ಥ್​ಗೆ ಜೈಲು ಶಿಕ್ಷೆ! ಹಿರಿಯ ಜೀವಕ್ಕೂ ಕರುಣೆ ತೋರಿಸಲಿಲ್ಲ ಮನೆಯ ಸದಸ್ಯರು
ಬಿಗ್​ ಬಾಸ್​ನಲ್ಲಿ ಶಂಕರ್​ ಅಶ್ವತ್ಥ್
Follow us
ಮದನ್​ ಕುಮಾರ್​
|

Updated on: Mar 19, 2021 | 10:29 AM

ತಮ್ಮ ವಿಶೇಷ ವ್ಯಕ್ತಿತ್ವದ ಕಾರಣಕ್ಕಾಗಿ ನಟ ಶಂಕರ್​ ಅಶ್ವತ್ಥ್​ ಅವರು ಬಿಗ್​ ಬಾಸ್​ ಕನ್ನಡ ಸೀಸನ್ 8ರಲ್ಲಿ ಗಮನ ಸೆಳೆಯುತ್ತಿದ್ದಾರೆ. ತಮ್ಮ ಜೀವನದ ಹಲವು ಅನುಭವಗಳನ್ನು ಇತರೆ ಸ್ಪರ್ಧಿಗಳ ಜೊತೆ ಹಂಚಿಕೊಳ್ಳುತ್ತ ಕಾಲ ಕಳೆಯುತ್ತಿದ್ದಾರೆ. ಆದರೆ ಮೂರನೇ ವಾರದಲ್ಲಿ ಅವರಿಗೆ ಜೈಲು ಶಿಕ್ಷೆ ನೀಡಲಾಗಿದೆ. ಖೈದಿಯ ಬಟ್ಟೆ ಧರಿಸಿ ಅವರು ಜೈಲುಪಾಲಾಗಿದ್ದಾರೆ!

ಪ್ರತಿ ವಾರದಲ್ಲಿ ಅತಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯ ಜೈಲಿಗೆ ಕಳಿಸಲಾಗುತ್ತದೆ. ಅತಿ ಕಳಪೆ ಯಾರು ಎಂಬುದನ್ನು ಮನೆಯ ಎಲ್ಲ ಸದಸ್ಯರು ಒಟ್ಟಾಗಿ ಸೇರಿ ನಿರ್ಧರಿಸಬೇಕು. ಈ ವಾರ ಎಲ್ಲರೂ ಸೇರಿ ಶಂಕರ್​ ಅಶ್ವತ್ಥ್​ ಅವರ ಹೆಸರನ್ನು ಸೂಚಿಸಿದ್ದಾರೆ. ಅದರ ಅನುಸಾರ ಅವರಿಗೆ ಬಿಗ್​ ಬಾಸ್​ ಜೈಲು ಶಿಕ್ಷೆ ನೀಡಿದ್ದಾರೆ. ಜೈಲಿಗೆ ಹೋಗುವ ಸ್ಪರ್ಧಿಯು ಮನೆಯ ಯಾವುದೇ ಸೌಲಭ್ಯಗಳನ್ನು ಬಳಸುವಂತಿಲ್ಲ. ಅಡುಗೆಗೆ ಬೇಕಾಗುವ ತರಕಾರಿಯನ್ನು ಅವರೇ ಹೆಚ್ಚಿಕೊಡಬೇಕು. ಮೊದಲ ವಾರ ಧನುಶ್ರೀ, ಎರಡನೇ ವಾರ ಶಮಂತ್​ಗೆ ಈ ಶಿಕ್ಷೆ ನೀಡಲಾಗಿತ್ತು. ಈಗ ಶಂಕರ್​ ಅಶ್ವತ್ಥ್​ ಅನುಭವಿಸಬೇಕಾಗಿದೆ.

ಬಿಗ್​ ಬಾಸ್​ನಲ್ಲಿ ಎಲ್ಲ ವಯೋಮಾನದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಅತಿ ಹಿರಿಯ ಸ್ಪರ್ಧಿ ಶಂಕರ್​ ಅಶ್ವತ್ಥ್. ಆದರೆ ಟಾಸ್ಕ್​ ವಿಚಾರ ಬಂದಾಗ ಇಲ್ಲಿ ವಯಸ್ಸಿನ ನೆಪ ಹೇಳುವಂತಿಲ್ಲ. ಇಷ್ಟು ದಿನಗಳ ಕಾಲ ಶಂಕರ್​ ಅಶ್ವತ್ಥ್​ ಅವರಿಗೆ ವಯಸ್ಸಿನ ಕಾರಣದಿಂದ ಕೆಲವೊಂದು ಎಕ್ಸ್​ಕ್ಯೂಸ್​ಗಳು ಸಿಕ್ಕಿವೆ. ಆದರೆ ಕಳಪೆ ಯಾರು ಎಂಬುದನ್ನು ತಿಳಿಸುವ ಸಂದರ್ಭದಲ್ಲಿ ಅವರ ವಯಸ್ಸನ್ನೂ ಲೆಕ್ಕಿಸದೇ ಎಲ್ಲರೂ ಗಟ್ಟಿ ನಿರ್ಧಾರ ತಿಳಿಸಿದ್ದಾರೆ.

ಶಂಕರ್​ ಜೈಲುಪಾಲಾಗುವ ಎಪಿಸೋಡ್ ಶುಕ್ರವಾರ (ಮಾ.19) ಪ್ರಸಾರ ಆಗಲಿದೆ. ಅದಕ್ಕೂ ಮುನ್ನ, ಅಂದರೆ ಮಾ.18ರ ಎಪಿಸೋಡ್​ನಲ್ಲಿ ತಮ್ಮ ಬದುಕಿನ ಕಷ್ಟಗಳ ಬಗ್ಗೆ ಶಂಕರ್​ ಮಾತನಾಡಿದ್ದರು. ‘ನನ್ನ ಮೊದಲ ಸೀರಿಯಲ್​ಗೆ ನನ್ನ ತಂದೆ ಇರಬೇಕು ಎಂದುಕೊಂಡಿದ್ದೆ. ಆದರೆ, ನನ್ನ ದುರಾದೃಷ್ಟ. ನನ್ನ ಧಾರಾವಾಹಿಯ ಮೊದಲ ದಿನ ಫಸ್ಟ್​​ ಶಾಟ್ ತೆಗೆಯೋಕೆ ಅವರನ್ನು​ ಕರಿಯಬೇಕು ಎಂದು ಹೋದೆ. ಆದರೆ, ಅವರು ಎಡಗೈ, ಎಡಗಾಲಿಗೆ ಪ್ಯಾರಾಲಿಸಿಸ್​ ಆಗಿತ್ತು. ಆದರೂ ಅವರನ್ನು ದನವನ್ನು ಎಳೆದುಕೊಂಡು ಹೋದಂತೆ ಎಳೆದುಕೊಂಡು ಬಂದಿದ್ದೆ. ನನ್ನ ತಂದೆ ವಾಂತಿ ಮಾಡಿಕೊಂಡರು. ಆದರೂ ಫಸ್ಟ್​ ಶಾಟ್​ ಅವರದ್ದೇ ತೆಗೆಸಿದ್ದೆವು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರನ್ನು ಐಸಿಯುಗೆ ಅಡ್ಮಿಟ್​ ಮಾಡಿದ್ದರು’ ಎಂದು ಆ ನೋವಿನ ಘಟನೆಯನ್ನು ಶಂಕರ್​ ನೆನಪು ಮಾಡಿಕೊಂಡರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

ನಮ್ಮಣ್ಣನ ಕೂದಲ ಸುದ್ದಿಗೆ ಬಂದ್ರೆ ಸರಿ ಇರಲ್ಲ; ಬಿಗ್​ ಬಾಸ್​ಗೆ ಮಂಜು ಎಚ್ಚರಿಕೆ