AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

ದಿವ್ಯಾ ಹಾಗೂ ಮಂಜು ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಿಗ್​ ಬಾಸ್​ ಮನೆಯಲ್ಲಿ ಇವರ ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ
ದಿವ್ಯಾ, ಮಂಜು- ವಿಶ್ವ
ರಾಜೇಶ್ ದುಗ್ಗುಮನೆ
|

Updated on:Mar 18, 2021 | 9:50 PM

Share

ಬಿಗ್​ ಬಾಸ್​ ಮನೆಯಲ್ಲಿ ಬಿಡುವಿದ್ದಾಗೆಲ್ಲ ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಆಪ್ತರಾಗಿರುತ್ತಾರೆ. ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೇನೋ ಎನ್ನುವಷ್ಟು ಆಪ್ತರಾಗಿ ನಡೆದುಕೊಳ್ಳುತ್ತಾರೆ. ದಿನ ಕಳೆದಂತೆ ದಿವ್ಯಾ-ಮಂಜು ಹತ್ತಿರವಾಗುತ್ತಿದ್ದಾರೆ ಎನ್ನುವುದು  ಪ್ರೇಕ್ಷಕರಿಗೆ ಸ್ಪಷ್ಟವಾಗುತ್ತಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ಈ ಜೋಡಿ ರೊಮ್ಯಾನ್ಸ್​ ಮಾಡುವುದನ್ನು ನೋಡಿ ಮನೆಯ ಅತಿ ಕಿರಿಯ ಸದಸ್ಯ ವಿಶ್ವ ನಾಚಿ ನೀರಾಗಿದ್ದಾರೆ. ದಿವ್ಯಾ ಹಾಗೂ ಮಂಜು ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಬ್ಬರಿಗೊಬ್ಬರು ಜಗಳ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಬಿಗ್​ ಬಾಸ್​ ಮನೆಯಲ್ಲಿ ಇವರ ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ.

ಸಾಮಾನ್ಯವಾಗಿ ಪ್ರೀತಿ ಪಾತ್ರರಾದವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಲಾಗುತ್ತದೆ. ಮನೆಯಲ್ಲೂ ಇಂದು ಅದೇ ಆಗಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್​ಪೆನ್​ ತೆಗೆದುಕೊಂಡು ಬರೆಯೋಕೆ ಸ್ಟಾರ್ಟ್​ ಮಾಡಿದ್ದಾರೆ. ಈ ವೇಳೆ ಅವರು ಬರೆದಿದ್ದು ‘ಮಂಜು ಲವ್ಸ್​ ದಿವ್ಯಾ’ ಎಂದು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದಿದ್ದಾರೆ.

ಹೀಗೆ ಬರೆದಿದ್ದನ್ನು ಮಂಜು, ವಿಶ್ವಾಗೆ ತೋರಿಸಿದ್ದಾರೆ. ಇದನ್ನು ನೋಡಿದ ವಿಶ್ವ ನಾಚಿ ನೀರಾಗಿದ್ದಾರೆ. ನಗುತ್ತಲೇ ಕಣ್ಣು ಮುಚ್ಚಿದ್ದಾರೆ. ಈ ವೇಳೆ ಅವರಿಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗಿಲ್ಲ. ಆಗ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಎಂದಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಫೈಟ್​..

ಬಿಗ್​ ಬಾಸ್​ ಮನೆಯಲ್ಲಿ ಇಂದು ಶಂಕರ್​-ಬ್ರೋ ಗೌಡ ನಡುವೆ ಫೈಟ್​ ನಡೆದಿದೆ. ಹಾಗಂತ ಇದು ಗಂಭೀರ ಫೈಟ್​ ಅಲ್ಲ. ಮನೆಯಲ್ಲಿ ಟೈಮ್​ಪಾಸ್​ಗೆ ಸ್ಪರ್ಧಿಗಳು ನಾಟಕವಾಡುತ್ತಾರೆ, ಹರಟೆ ಹೊಡೆಯುತ್ತಾರೆ, ತರಲೆ ಮಾಡುತ್ತಾರೆ. ಇಂದು ನಡೆದಿದ್ದು ಕೂಡ ಅದೇ. ಶಂಕರ್​ ಅಶ್ವತ್ಥ್​ ಹಾಗೂ ಶಮಂತ್​ ಫೈಟಿಂಗ್​ಗೆ ಇಳಿದಿದ್ದರು. ನಾಟಕೀಯವಾಗಿ ಕೈ ಕೈ ಮಿಲಾಯಿಸಿಕೊಂಡಿದ್ದರು. ಮೊದಲ ಬಾರಿ ಶಂಕರ್​ ಅಶ್ವತ್ಥ್​ ನೆಲಕ್ಕೆ ಬಿದ್ದಂತೆ ನಾಟಕ ಮಾಡಿದರೆ, ಎರಡನೇ ಬಾರಿಗೆ ಶಮಂತ್​ ನೆಲಕ್ಕೆ ಬಿದ್ದಿದ್ದಾರೆ.

ಇನ್ನು ಇವರ ಫೈಟ್​ ನಡೆಯುವಾಗ ಮನೆ ಮಂದಿಯೆಲ್ಲ ಕೂತು ಮನರಂಜನೆ ತೆಗೆದುಕೊಳ್ಳುತ್ತಿದ್ದರು. ಕೆಲವರು ಶಂಕರ್​ ಅಶ್ವತ್ಥ್​ ಅವರನ್ನು ಬೆಂಬಲಿಸಿದರೆ ಇನ್ನೂ ಕೆಲವರು ಶಮಂತ್​ ಅವರಿಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಬೇಕಂತಲೇ ಪ್ರಶಾಂತ್​ ಅವರು, ಶಮಂತ್​ ಮೂಗಲ್ಲಿ ರಕ್ತ ಎಂದು ಕೂಗಿದ್ದಾರೆ. ಕಲರ್ಸ್​ ಕನ್ನಡ ವಾಹಿನಿ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರೋಮೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಮನೆ ಮಂದಿ ಸಖತ್​ ಎಂಜಾಯ್​ ಮಾಡಿದಂತೆ ಕಂಡು ಬಂದಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಅಶ್ವತ್ಥ್​ ಶಂಕರ್​ ನಿಜವಾದ ಬಣ್ಣ ಬಯಲು..

Published On - 9:25 pm, Thu, 18 March 21

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More