AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್​ ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​; ಸದಸ್ಯರ ಎದುರೇ ಅವರು ಅಳೋಕೂ ಇದೆ ಕಾರಣ

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್ ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

ಅರವಿಂದ್​ ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​; ಸದಸ್ಯರ ಎದುರೇ ಅವರು ಅಳೋಕೂ ಇದೆ ಕಾರಣ
ಅರವಿಂದ್​
Follow us
ರಾಜೇಶ್ ದುಗ್ಗುಮನೆ
|

Updated on: Mar 18, 2021 | 10:35 PM

ಮೂರನೇ ವಾರಕ್ಕೆ ಅರವಿಂದ್​ ಕೆಪಿ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಮೂರನೇ ವಾರ ಅವರು ಮನೆಯನ್ನು ಮುನ್ನಡೆಸಲಿದ್ದಾರೆ. ಅವರು ಕ್ಯಾಪ್ಟನ್​ ಆಗುತ್ತಿದ್ದಂತೆ ಗಳಗಳನೆ ಅತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಜೋಡಿ ಟಾಸ್ಕ್​ನಲ್ಲಿ ರಾಜೀವ್​ ಹಾಗೂ ದಿವ್ಯಾ ಉರುಡಗ ಅದ್ಭುತವಾಗಿ ಆಟವಾಡಿದ್ದರು. ಗೇಮ್​ ಗೆದ್ದಿದ್ದಕ್ಕೆ ಸಿಕ್ಕಿದ್ದ ವಿಶೇಷ ಚಾರ್ಜರ್​ ಅನ್ನು ಹಿಂದಿರುಗಿಸಿದರೆ ಬೆಡ್​ ರೂಂ ಬಿಟ್ಟುಕೊಡುವುದಾಗಿ ಬಿಗ್​ ಬಾಸ್​ ಹೇಳಿದ್ದರು. ಆದರೆ, ಇದಕ್ಕೆ ಅರವಿಂದ್​​ ನಿರಾಕರಿಸಿದ್ದರು. ಇದು ಪರೋಕ್ಷವಾಗಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಬರೋಕೆ ಅವರಿಗೆ ಸಹಾಯ ಮಾಡಿದೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ದಿವ್ಯಾ ಸುರೇಶ್​, ವಿಶ್ವ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಟಾಸ್ಕ್​ಗೆ ಆಯ್ಕೆ ಆಗಿದ್ದರು. ಯು ಆಕಾರದ ಆಯಾಸ್ಕಾಂತವನ್ನು ಎರಡು ಕಬ್ಬಿಣದ ಹಿಡಿಕೆಯಲ್ಲಿ ಹಿಡಿದುಕೊಳ್ಳಬೇಕು. ಈ ಟಾಸ್ಕ್​ನಲ್ಲಿ ಕೊನೆಯವರೆಗೆ ಇದ್ದಿದ್ದು ಅರವಿಂದ್ ಈ ಮೂಲಕ ಅವರು ಟಾಸ್ಕ್​ ಗೆದ್ದು ಕ್ಯಾಪ್ಟನ್​ ಆಗಿದ್ದಾರೆ.

ಇನ್ನು, ಬಿಗ್​ ಬಾಸ್​ ಮನೆ ಸ್ಪರ್ಧಿಗಳಿಗೆ ಜೀವನದಲ್ಲಿ ತಿರುವು ನೀಡಿದವರ ಬಗ್ಗೆ ಹೇಳಿಕೊಳ್ಳೋಕೆ ಅವಕಾಶ ನೀಡಲಾಗಿತ್ತು. ಈ ವೇಳೆ ಮಾತನಾಡಿದ್ದ ಅರವಿಂದ್​, ಬೆಂಗಳೂರಿಗೆ ಬಂದಿದ್ದೆ. ಹಾಸ್ಟೇಲ್​ ​ ಪಕ್ಕದಲ್ಲಿ ಒಂದು ಆಟೋ ಮೊಬೈಲ್​ ಸ್ಪೇರ್​​ ಶಾಪ್​ ಇತ್ತು. ನನ್ನ ರೈಡ್​ಗೆ 2005-06 ಅವರೇ ಸ್ಪಾನ್ಸರ್​ ಮಾಡಿದ್ದರು. ಇದು ನನ್ನ ಜೀವನದ ದೊಡ್ಡ ತಿರುವು. ಅವರು ಇಲ್ಲ ಎಂದರೆ ನಾನು ಇಲ್ಲಿಗೆ ಬರುತ್ತಲೇ ಇರುತ್ತಿರಲಿಲ್ಲ ಎಂದು ಕಣ್ಣಲ್ಲಿ ನೀರು ಹಾಕಿದರು.

ದಿವ್ಯಾ-ಮಂಜು ರೊಮ್ಯಾನ್ಸ್​..

ದಿವ್ಯಾ ಹಾಗೂ ಮಂಜು ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಬ್ಬರಿಗೊಬ್ಬರು ಜಗಳ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಬಿಗ್​ ಬಾಸ್​ ಮನೆಯಲ್ಲಿ ಇವರ ರೊಮ್ಯಾನ್ಸ್​ ಮೂರನೇ ವಾರವೂ ಮುಂದುವರಿದೆ. ಸಾಮಾನ್ಯವಾಗಿ ಪ್ರೀತಿ ಪಾತ್ರರಾದವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಲಾಗುತ್ತದೆ. ಮನೆಯಲ್ಲೂ ಇಂದು ಅದೇ ಆಗಿದೆ. ಮಂಜು ಕೈ ಮೇಲೆ ದಿವ್ಯಾ ಸ್ಕೆಚ್​ಪೆನ್​ ತೆಗೆದುಕೊಂಡು ಬರೆಯೋಕೆ ಸ್ಟಾರ್ಟ್​ ಮಾಡಿದ್ದಾರೆ. ಈ ವೇಳೆ ಅವರು ಬರೆದಿದ್ದು ‘ಮಂಜು ಲವ್ಸ್​ ದಿವ್ಯಾ’ ಎಂದು. ಇದನ್ನು ನೋಡಿದ ಮಂಜು, ಅಬ್ಬಾ ಎಷ್ಟೊಂದು ಪ್ರೀತಿಯಿಂದ ಬರೆಯುತ್ತಿದ್ದಾರೆ ಎಂದಿದ್ದಾರೆ. ಹೀಗೆ ಬರೆದಿದ್ದನ್ನು ಮಂಜು, ವಿಶ್ವಾಗೆ ತೋರಿಸಿದ್ದಾರೆ. ಇದನ್ನು ನೋಡಿದ ವಿಶ್ವ ನಾಚಿ ನೀರಾಗಿದ್ದಾರೆ. ನಗುತ್ತಲೇ ಕಣ್ಣು ಮುಚ್ಚಿದ್ದಾರೆ. ಈ ವೇಳೆ ಅವರಿಗೆ ಏನು ಹೇಳಬೇಕು ಎನ್ನುವುದೇ ಗೊತ್ತಾಗಿಲ್ಲ. ಆಗ ನೋಡೋಕೆ ಎರಡು ಕಣ್ಣು ಸಾಲುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ-ಮಂಜು ರೊಮ್ಯಾನ್ಸ್​ ಕಂಡು ನಾಚಿ ನೀರಾದ ಪುಟಾಣಿ ವಿಶ್ವ

ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಹತ್ಯೆಯಾದ ಯುವಕನ ತಾಯಿಯಿಂದ ಅಸ್ಪಷ್ಟ ಮಾಹಿತಿ!
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಪಾಕಿಸ್ತಾನಕ್ಕೆ ಭಾರತದಿಂದ ಚೆನಾಬ್ ನದಿ ನೀರು ಬಂದ್; ಒಣಗಿದ ಸಲಾಲ್ ಡ್ಯಾಂ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ