
ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಸಿದ ಬಾಲಿವುಡ್ ನಟ ಇಮ್ರಾನ್ ಖಾನ್ಗೆ ಭಾರತ ತೊರೆಯುವಂತೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಒ) ಸೂಚನೆ ನೀಡಿದೆ. ಅಮೆರಿಕದ ಪ್ರಜೆಯಾಗಿ ಅವರು ಸಿಜೆಪಿ ಬೆಂಬಲಿತ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ಹೀಗಾಗಿ, ಅವರು ಅಕ್ಟೋಬರ್ 28ರೊಳಗೆ ದೇಶ ಬಿಡಬೇಕಿದೆ. ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ನೀಡಿದ ದೂರಿನ ಮೇರೆಗೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಮುಂಬೈನ ‘ಆಗಸ್ಟ್ ಕ್ರಾಂತಿ ಮೈದಾನ’ದಲ್ಲಿ ಸಿಜೆಪಿ ಪ್ರತಿಭಟನೆ ನಡೆಸಿತು. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೋರಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಒಸಿಐ ಕಾರ್ಡ್ (ಭಾರತೀಯ ಸಾಗರೋತ್ತರ ನಾಗರಿಕರ ಕಾರ್ಡ್) ಹೊಂದಿರುವ ಇಮ್ರಾನ್ ಖಾನ್ ಈ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯಾವುದೇ ವಿದೇಶಿ ಪ್ರಜೆ ಅಥವಾ ಒಸಿಐ ಕಾರ್ಡ್ದಾರರು ಭಾರತದ ಆಂತರಿಕ ರಾಜಕೀಯ ಚಟುವಟಿಕೆಗಳು, ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಅಥವಾ ಧರಣಿಗಳಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ, ಅವರಿಂದ ನಿಯಮ ಉಲ್ಲಂಘನೆ ಆಗಿದೆ
ಇಮ್ರಾನ್ ಖಾನ್ ಅವರು ಆಮಿರ್ ಖಾನ್ ಅವರ ಸೋದರ ಸಂಬಂಧಿ. ಅವರು ಹುಟ್ಟಿದ್ದೇ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್ ನಗರದಲ್ಲಿ. ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆ. ಅವರು ಅಮೆರಿಕದ ನಾಗರಿಕರಾಗಿರುವುದರಿಂದಲೇ ಭಾರತದಲ್ಲಿ ವಾಸಿಸಲು ‘ಭಾರತೀಯ ಸಾಗರೋತ್ತರ ನಾಗರಿಕರ ಕಾರ್ಡ್’ಅನ್ನು ಹೊಂದಿದ್ದಾರೆ. ಅವರು ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ತಂದೆಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ: ಇಮ್ರಾನ್ ಖಾನ್ ಮಕ್ಕಳ ಗಂಭೀರ ಆರೋಪ
ಬಾಲಿವುಡ್ನಲ್ಲಿ 2011ರ ಜುಲೈ 1ರಂದು ತೆರೆಕಂಡ ಬೋಲ್ಡ್ ಹಾಗೂ ಭಿನ್ನ ಕಥೆಯುಳ್ಳ ‘ಡೆಲ್ಲಿ ಬೆಲ್ಲಿ’ ಸಿನಿಮಾ ಬಾಕ್ಸಾಫೀಸ್ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಚಿತ್ರದ ಯಶಸ್ಸಿನ ಬಳಿಕ ಇಮ್ರಾನ್ ಖಾನ್ ‘ಮೇರೆ ಬ್ರದರ್ ಕೀ ದುಲ್ಹನ್’ ಹಾಗೂ ‘ಏಕ್ ಮೇ ಔರ್ ಏಕ್ ತು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಕಾಲಕ್ರಮೇಣ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ ಮತ್ತು ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಸಲಹಾ ಚಿತ್ರಗಳು ಸಾಲಾಗಿ ಸೋತ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನಟನೆಗೆ ವಿದಾಯ ಹೇಳುವ ಗಂಭೀರ ನಿರ್ಧಾರ ಕೈಗೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.