ಕಾಲಿಗೆ ಬಿದ್ದ ಧೋನಿ ಪತ್ನಿ, ಗಾಬರಿಯಾದ ನಟ, ನಿಜಕ್ಕೂ ಆಗಿದ್ದೇನು?

Actor Jayaram: ಈ ವೇಳೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರ ನಡುವೆ ಮಾತುಕತೆ, ಭೇಟಿ, ಪರಿಚಯಗಳು ಆಗುತ್ತವೆ. ಹಾಗೆಯೇ ಇತ್ತೀಚೆಗೆ ಒಬ್ಬ ದಕ್ಷಿಣ ಭಾರತದ ಹಿರಿಯ ನಟ ಹೇಳಿಕೊಂಡಿರುವಂತೆ, ಅವರು ಐಪಿಎಲ್ ನೋಡಲು ಹೋಗಿದ್ದಾಗ ಇದ್ದಕ್ಕಿದ್ದಂತೆ ಧೋನಿಯ ಪತ್ನಿ ಸಾಕ್ಷಿ ಬಂದು ಅವರ ಕಾಲಿಗೆ ನಮಸ್ಕರಿಸಿದರಂತೆ. ಇದು ನೋಡಿ ಖುದ್ದು ಆ ನಟನೇ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ. ಏನದು ಕತೆ? ಇಲ್ಲಿದೆ ಮಾಹಿತಿ...

ಕಾಲಿಗೆ ಬಿದ್ದ ಧೋನಿ ಪತ್ನಿ, ಗಾಬರಿಯಾದ ನಟ, ನಿಜಕ್ಕೂ ಆಗಿದ್ದೇನು?
Jayaram Sakshi

Updated on: May 30, 2026 | 9:41 PM

ಎಂಎಸ್ ಧೋನಿ (MS Dhoni), ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗ. ಐಪಿಎಲ್ ಸಮಯದಲ್ಲಿ ಧೋನಿಯ ಪತ್ನಿ ಮತ್ತು ಮಗಳು ಸಹ ಕ್ರೀಡಾಂಗಣಕ್ಕೆ ಬಂದು ಧೋನಿಯ ಬೆಂಬಲಿಸುತ್ತಾರೆ. ಐಪಿಎಲ್ ವೇಳೆ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಸಹ ಕ್ರೀಡಾಂಗಣಕ್ಕೆ ಬಂದಿರುತ್ತಾರೆ. ಈ ವೇಳೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರ ನಡುವೆ ಮಾತುಕತೆ, ಭೇಟಿ, ಪರಿಚಯಗಳು ಆಗುತ್ತವೆ. ಹಾಗೆಯೇ ಇತ್ತೀಚೆಗೆ ಒಬ್ಬ ದಕ್ಷಿಣ ಭಾರತದ ಹಿರಿಯ ನಟ ಹೇಳಿಕೊಂಡಿರುವಂತೆ, ಅವರು ಐಪಿಎಲ್ ನೋಡಲು ಹೋಗಿದ್ದಾಗ ಇದ್ದಕ್ಕಿದ್ದಂತೆ ಧೋನಿಯ ಪತ್ನಿ ಸಾಕ್ಷಿ ಬಂದು ಅವರ ಕಾಲಿಗೆ ನಮಸ್ಕರಿಸಿದರಂತೆ. ಇದು ನೋಡಿ ಖುದ್ದು ಆ ನಟನೇ ಗಾಬರಿಯಾಗಿ ಗೊಂದಲಕ್ಕೆ ಒಳಗಾಗಿದ್ದರಂತೆ. ಏನದು ಕತೆ? ಇಲ್ಲಿದೆ ಮಾಹಿತಿ…

‘ಕಾಂತಾರ 2’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಮಲಯಾಳಂ ನಟ ಜಯರಾಂ ಇತ್ತೀಚೆಗೆ ತಮ್ಮ ಹೊಸ ಸಿನಿಮಾ ‘ಪರಿಮಳ ಆಂಡ್ ಕೋ’ ಸಿನಿಮಾದ ಪ್ರಚಾರದಲ್ಲಿರುವಾಗ, ಅಭಿಮಾನಿಯೊಬ್ಬರು ಜಯರಾಮ್ ಅವರಿಗೆ ಯಾವ ಅಭಿಮಾನಿಗಳ ಭೇಟಿ ನಿಮಗೆ ಅತ್ಯಂತ ಸಂತೋಷ ನೀಡಿತು ಎಂದು ಕೇಳಿದರು. ಅದಕ್ಕೆ ಅವರು, ಸಾಕ್ಷಿ ಧೋನಿಯ ಕತೆ ವಿವರಿಸಿದರು. ‘ಕೇವಲ ಒಂದು ವಾರದ ಹಿಂದೆ, ನಾನು ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನೋಡಲು ಹೋಗಿದ್ದೆ. ಅಲ್ಲಿ ಧೋನಿಯ ಪತ್ನಿ ಸಾಕ್ಷಿ ಸಹ ಇದ್ದರು. ಆದರೆ ಹಠಾತ್ತನೆ, ಸಾಕ್ಷಿ ಧೋನಿ ನನ್ನ ಬಳಿ ಬಂದು, ನನ್ನ ಪಾದ ಮುಟ್ಟಿ ತಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದರು. ನಾನು ದಿಗ್ಭ್ರಮೆಗೊಂಡೆ, ಗೊಂದಲಕ್ಕೂ ಒಳಗಾದೆ. ಅವರು ನನ್ನನ್ನು ಬೇರೆಯವರೆಂದು ತಪ್ಪಾಗಿ ಭಾವಿಸಿದ್ದಾರೆಯೇ ಎಂದು ಅನಿಸಿತು’ ಎಂದರು.

ಖುದ್ದು ಜಯರಾಮ್ ಅವರು ಸಾಕ್ಷಿಯನ್ನುದ್ದೇಶಿಸಿ, ‘ನೀವು ತಪ್ಪಾಗಿ ತಿಳಿದಂತಿದ್ದೀರಿ, ನೀವು ಖಂಡಿತವಾಗಿಯೂ ನನ್ನ ಅಭಿಮಾನಿಯೇನಾ?’ ಎಂದು ಕೇಳಿದರಂತೆ. ಅದಕ್ಕೆ ಸಾಕ್ಷಿ, ‘ನನಗೆ ನೀವು ಯಾರೆಂದು ಚೆನ್ನಾಗಿ ಗೊತ್ತು’ ಎಂದರಂತೆ. ಸಾಕ್ಷಿ ಮತ್ತು ಧೋನಿಯ ಮಗಳು ಜೀವಾಳ ಕೇರ್‌ಟೇಕರ್ (ನಾನ್ನಿ) ಮಲಯಾಳಿಯಾಗಿದ್ದರಂತೆ. ಜೀವಾ ಚಿಕ್ಕವಳಿದ್ದಾಗ, ಅವಳಿಗೆ ನಿದ್ದೆ ಬರಿಸಲು ಜಯರಾಮ್ ಅವರ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಹಾಡನ್ನು ಹಾಡುತ್ತಿದ್ದರಂತೆ ಎಂದು ಜಯರಾಮ್ ವಿವರಿಸಿದ್ದಾರೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಧೋನಿ

2017 ರಲ್ಲಿ, ಜೀವಾಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗ, ತನ್ನ ಕೇರ್‌ಟೇಕರ್ ‘ಶೀಲಾ ಆಂಟಿ’ಯಿಂದ ಕಲಿತ ಮಲಯಾಳಿ ಹಾಡನ್ನು ಹಾಡುವ ಮೂಲಕ ಅವಳು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದಳು. ಅವಳು ಹಾಡಿದ್ದ ಹಾಡು ಪ್ರಿಯದರ್ಶನ್ ಅವರ ‘ಅದ್ವೈತಂ’ ಚಿತ್ರದ ‘ಅಂಬಲಪ್ಪುಳ ಉಣ್ಣಿಕಣ್ಣನೋಡು’ ಆಗಿತ್ತು. 1991 ರ ಈ ಚಿತ್ರದಲ್ಲಿ ಮೋಹನ್‌ಲಾಲ್, ಜಯರಾಮ್ ಮತ್ತು ರೇವತಿ ನಟಿಸಿದ್ದರು. ಜೀವಾ ಹಾಡುತ್ತಿರುವ ಆ ವಿಡಿಯೋ ಆಗ ವೈರಲ್ ಆಗಿತ್ತು. ಅದೇ ಕಾರಣಕ್ಕೆ ಸಾಕ್ಷಿ ಅವರು ಜಯರಾಂ ಅವರ ಬಗ್ಗೆ ತಿಳಿದುಕೊಂಡು ಅವರ ಅಭಿಮಾನಿ ಆಗಿದ್ದಾರೆ.

ಜಯರಾಮ್ ಅವರು ಮಲಯಾಳಂ ಚಿತ್ರರಂಗದ ಹಿರಿಯ ನಟ. ಅವರು ಮಲಯಾಳಂ ಮಾತ್ರವೇ ಅಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ. 1988 ರ ‘ಅಪರನ್‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, 1993 ರ ‘ಮೇಲೆಪರಂಬಿಲ್ ಆಣ್ವೀಡು’ ಚಿತ್ರದ ಮೂಲಕ ಪ್ರಸಿದ್ಧಿ ಪಡೆದರು. ಅವರು ನುರಿತ ಚೆಂಡೆ (Chenda) ಕಲಾವಿದರೂ ಆಗಿದ್ದು, ಕೇರಳದ ದೇವಸ್ಥಾನಗಳ ಹಬ್ಬಗಳಲ್ಲಿ ಹೆಚ್ಚಾಗಿ ಪ್ರದರ್ಶನ ನೀಡುತ್ತಾರೆ. ಕೆಲ ವರ್ಷದ ಹಿಂದೆ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್​​ಕುಮಾರ್ ಅವರ ನೆನೆದು ಕನ್ನಡ ಹಾಡು ಹಾಡಿದ್ದರು. ಆ ವಿಡಿಯೋ ಸಖತ್ ವೈರಲ್ ಆಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us