ಥಿಯೇಟರ್​ನಲ್ಲಿ ಪ್ರಭಾಸ್ ಅಭಿಮಾನಿಗಳ ಪುಂಡಾಟ; ಕೋಪಗೊಂಡ ಫ್ಯಾನ್ಸ್ ಮಾಡಿದ ದಾಂಧಲೆ ನೋಡಿ

ಕನ್ನಡದಲ್ಲಿ ‘ಜೋಗಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹೀರೋ ಆಗಿ ನಟಿಸಿದರು. ಪ್ರೇಮ್ ನಿರ್ದೇಶನಕ್ಕೆ ಜನರು ಮರುಳಾದರು. ಇದೇ ಭರವಸೆ ಮೇಲೆ ತೆಲುಗಿಗೆ ಚಿತ್ರವನ್ನು ರಿಮೇಕ್ ಮಾಡಲಾಯಿತು. ಪ್ರಭಾಸ್ ಈ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಫ್ಲಾಪ್ ಆಯಿತು.

ಥಿಯೇಟರ್​ನಲ್ಲಿ ಪ್ರಭಾಸ್ ಅಭಿಮಾನಿಗಳ ಪುಂಡಾಟ; ಕೋಪಗೊಂಡ ಫ್ಯಾನ್ಸ್ ಮಾಡಿದ ದಾಂಧಲೆ ನೋಡಿ
ಪ್ರಭಾಸ್

Updated on: Aug 19, 2023 | 7:57 AM

ಪ್ರಭಾಸ್ ಅವರು ಸದ್ಯ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ‘ಬಾಹುಬಲಿ 2’ ಬಳಿಕ ರಿಲೀಸ್ ಆದ ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ (Adipurush Movie) ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲು ವಿಫಲವಾದವು. ಈಗ ಅವರು ಮೂರು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈ ಮಧ್ಯೆ ಅವರ ನಟನೆಯ ಅಟ್ಟರ್ ಫ್ಲಾಪ್ ಸಿನಿಮಾ ‘ಯೋಗಿ’ (Yogi Movie) ರೀ-ರಿಲೀಸ್ ಆಗಿದೆ. ಈ ಸಿನಿಮಾ ಪ್ರದರ್ಶನ ಅರ್ಧಕ್ಕೆ ನಿಂತಿದ್ದರಿಂದ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಥಿಯೇಟರ್​ನ ಪ್ರಾಪರ್ಟಿಗಳನ್ನು ಹಾಳು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಕನ್ನಡದಲ್ಲಿ ‘ಜೋಗಿ’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಹೀರೋ ಆಗಿ ನಟಿಸಿದರು. ಪ್ರೇಮ್ ನಿರ್ದೇಶನಕ್ಕೆ ಜನರು ಮರುಳಾದರು. ತಾಯಿ-ಮಗನ ಸೆಂಟಿಮೆಂಟ್ ಹೈಲೈಟ್ ಆಯಿತು. ಸಾಂಗ್​ಗಳು ಭರ್ಜರಿ ಹಿಟ್ ಆದವು. ಇದೇ ಭರವಸೆ ಮೇಲೆ ತೆಲುಗಿಗೆ ಚಿತ್ರವನ್ನು ರಿಮೇಕ್ ಮಾಡಲಾಯಿತು. ಪ್ರಭಾಸ್ ಈ ಚಿತ್ರದಲ್ಲಿ ನಟಿಸಿದ್ದರು. ಆದರೆ, ಸಿನಿಮಾ ಫ್ಲಾಪ್ ಆಯಿತು. ಅಚ್ಚರಿ ಎಂದರೆ ಈ ಚಿತ್ರವನ್ನು ಇತ್ತೀಚೆಗೆ ರೀ-ರಿಲೀಸ್ ಮಾಡಲಾಗಿದೆ.

ಹೈದರಾಬಾದ್​ನ ಸುದರ್ಶನ್ ಥಿಯೇಟರ್​​ನಲ್ಲಿ ‘ಯೋಗಿ’ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಆದರೆ, ಸಿನಿಮಾ ಪ್ರದರ್ಶನ ಏಕಾಏಕಿ ನಿಂತಿದೆ. ಇದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ಬ್ಲೇಡ್​ನಿಂದ ಥಿಯೇಟರ್​ ಸ್ಕ್ರಿನ್​ಗೆ ಹಾನಿ ಮಾಡಿದ್ದಾರೆ. ಅಷ್ಟೇ ಅಲ್ಲ ಥಿಯೇಟರ್ ಆವರಣದಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.


ಇದನ್ನೂ ಓದಿ: ಪ್ರಭಾಸ್​ ಎದುರು ನಾಯಕಿಯಾಗಿ ಬೆಂಗಳೂರಲ್ಲಿ ಬೆಳೆದ ಹುಡುಗಿ: ಯಾವ ಸಿನಿಮಾ?

ಈ ಘಟನೆಯನ್ನು ಕೆಲವರು ಬೇರೆ ರೀತಿಯಲ್ಲಿ ಅರ್ಥೈಸಿದ್ದಾರೆ. ‘ಯೋಗಿ ಸಿನಿಮಾ ನೋಡಿ ಫ್ರಸ್ಟ್ರೇಟ್ ಆದ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ. ಕಳೆದ ಬಾರಿ ರಿಲೀಸ್ ಆದಾಗ ಎಷ್ಟು ಪಾರ್ಕಿಂಗ್ ಕಲೆಕ್ಷನ್ ಆಗಿತ್ತೋ ಆ ಮೊತ್ತ ಕೂಡ ರೀ-ರಿಲೀಸ್​ನಿಂದ ಬಂದಿಲ್ಲ’ ಎಂದು ಅನೇಕರು ಟೀಕೆ ಮಾಡಿದ್ದಾರೆ.

ಪ್ರಭಾಸ್ ಸದ್ಯ ‘ಕಲ್ಕಿ 2898 ಎಡಿ’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಆಗಿದ್ದಾರೆ. ಸೆಪ್ಟೆಂಬರ್ 28ರಂದು ‘ಸಲಾರ್’ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ .

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:53 am, Sat, 19 August 23