AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಹೋ ಸೋಲಿನ ಬಳಿಕ ಎಚ್ಚೆತ್ತ ಬಾಹುಬಲಿ, ಟಾಲಿವುಡ್​ನಲ್ಲೀಗ ಜಾನ್-ಜಾನು ಗುದ್ದಾಟ

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೆದರಿದ್ದಾರಂತೆ. ಸಾಹೋ ನಂತ್ರ ಬರ್ತಿರೋ ಸಿನಿಮಾ ಟೈಟಲ್ ಬಗ್ಗೆ ತುಂಬಾನೇ ಯೋಚ್ನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್ ಹೆದರಿಕೆಗೂ ಅವ್ರ ಮುಂದಿನ ಚಿತ್ರಕ್ಕೂ ಏನು ಸಂಬಂಧ ಅನ್ನೋದ್ರ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ. ಟಾಲಿವುಡ್ ರೆಬೆಲ್​ಸ್ಟಾರ್​ ಪ್ರಭಾಸ್​ ಬಾಹುಬಲಿ ಸಿನಿಮಾ ಮೂಲಕ ಇಂಟರ್​ನ್ಯಾಷನಲ್ ಸ್ಟಾರ್​ ಆಗಿ ಶೈನ್ ಆಗಿದ್ದಾರೆ. ಬಾಹುಬಲಿ ಸೀಕ್ವೆಲ್​ ಸೂಪರ್ ಹಿಟ್ ಆದ ಮೇಲಂತೂ ಕಥೆ ಆಯ್ಕೆಯಲ್ಲಿ ಪ್ರಭಾಸ್ ತುಂಬಾ ಚ್ಯೂಸಿಯಾಗಿದ್ದಾರಂತೆ. ಅದ್ರಲ್ಲೂ, ಸಾಕಷ್ಟು ನಿರೀಕ್ಷೆಯೊಂದಿಗೆ ಬಂದ ಸಾಹೋ ಸಿನಿಮಾ ನಿರೀಕ್ಷೆಗೆ […]

ಸಾಹೋ ಸೋಲಿನ ಬಳಿಕ ಎಚ್ಚೆತ್ತ ಬಾಹುಬಲಿ, ಟಾಲಿವುಡ್​ನಲ್ಲೀಗ ಜಾನ್-ಜಾನು ಗುದ್ದಾಟ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 01, 2020 | 2:27 PM

Share

ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಹೆದರಿದ್ದಾರಂತೆ. ಸಾಹೋ ನಂತ್ರ ಬರ್ತಿರೋ ಸಿನಿಮಾ ಟೈಟಲ್ ಬಗ್ಗೆ ತುಂಬಾನೇ ಯೋಚ್ನೆ ಮಾಡ್ತಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್ ಹೆದರಿಕೆಗೂ ಅವ್ರ ಮುಂದಿನ ಚಿತ್ರಕ್ಕೂ ಏನು ಸಂಬಂಧ ಅನ್ನೋದ್ರ ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ.

ಟಾಲಿವುಡ್ ರೆಬೆಲ್​ಸ್ಟಾರ್​ ಪ್ರಭಾಸ್​ ಬಾಹುಬಲಿ ಸಿನಿಮಾ ಮೂಲಕ ಇಂಟರ್​ನ್ಯಾಷನಲ್ ಸ್ಟಾರ್​ ಆಗಿ ಶೈನ್ ಆಗಿದ್ದಾರೆ. ಬಾಹುಬಲಿ ಸೀಕ್ವೆಲ್​ ಸೂಪರ್ ಹಿಟ್ ಆದ ಮೇಲಂತೂ ಕಥೆ ಆಯ್ಕೆಯಲ್ಲಿ ಪ್ರಭಾಸ್ ತುಂಬಾ ಚ್ಯೂಸಿಯಾಗಿದ್ದಾರಂತೆ. ಅದ್ರಲ್ಲೂ, ಸಾಕಷ್ಟು ನಿರೀಕ್ಷೆಯೊಂದಿಗೆ ಬಂದ ಸಾಹೋ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಹಿಟ್ ಆಗದಿದ್ದರೂ, ಬಾಕ್ಸಾಫೀಸ್​ನಲ್ಲಿ ಗೆದ್ದು ಬೀಗಿತ್ತು.

ಸಾಹೋ ಚಿತ್ರದ ಬಳಿಕ ಪ್ರಭಾಸ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲಕ್ಕೆ ಬ್ರೇಕ್ ಹಾಕಿದ್ದೇ ಜಾನ್ ಸಿನಿಮಾ. ಸಾಹೋ ಎಡವಟ್ಟಿನ ನಂತ್ರ ಜಾನ್ ಸಿನಿಮಾವನ್ನ ಪ್ರಭಾಸ್ ಆಯ್ಕೆ ಮಾಡಿಕೊಂಡಿದ್ದು, ಈ ಚಿತ್ರಕ್ಕೆ ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗ್ಲೆ ಸಿನಿಮಾದ ಶೂಟಿಂಗ್​ ಭರ್ಜರಿಯಾಗಿ ಸಾಗಿದ್ದು, ಜಾನ್​ನಲ್ಲಿನ ಪ್ರಭಾಸ್​ ಲುಕ್​ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

ಇದೇ ಜಾನ್​ ಈಗ ಸಂಕಷ್ಟಕ್ಕೆ ಸಿಲುಕಿದ್ದಾನೆ. ಚಿತ್ರದ ಟೈಟಲ್​ ಬದಲಿಸುವ ಯೋಚನೆಯಲ್ಲಿದೆ ಚಿತ್ರತಂಡ. ಹೌದು ಚಿತ್ರದ ಟೈಟಲ್ ವಿಚಾರಕ್ಕೆ ಪ್ರಭಾಸ್​ ಗೊಂದಲದಲ್ಲಿದ್ದಾರಂತೆ. ಅಷ್ಟಕ್ಕೂ ಪ್ರಭಾಸ್​ರನ್ನ ಗೊಂದಕ್ಕೆ ದೂಡಿದ್ದು ನಟಿ ಸಮಂತಾ. ಹೌದು, ಸಮಂತಾ ಅಭಿನಯದ ಜಾನು ಸಿನಿಮಾದಿಂದಾಗಿ ಪ್ರಭಾಸ್​ ಹೆದರಿದ್ದಾರಂತೆ.

ಸಮಂತಾ ಮತ್ತು ಶರ್ವಾನಂದ್​ ಅಭಿನಯದ ಜಾನು ಚಿತ್ರದ ಟ್ರೇಲರ್​ ಈಗಾಗ್ಲೆ, ರಿಲೀಸ್​ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಿನಿಮಾರಂಗದಲ್ಲಿ ದಶಕ ಕಳೆದು ಸಮಂತಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಜೊತೆಗೆ ಸಮಂತಾ ಚಿತ್ರಗಳ ಬಗ್ಗೆ ಒಂದು ಕ್ರೇಜ್ ಇದೆ. ಈಗಾಗ್ಲೆ ಸಮಂತಾಳನ್ನ ಜಾನು ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ.

ಜಾನು ಮತ್ತು ಜಾನ್​ ಎರಡೂ ಟೈಟಲ್​ಗಳು ಒಂದೇ ರೀತಿ ಇವೆ. ಎರಡರ ಮಧ್ಯೆ ಅಷ್ಟೇನು ವ್ಯತ್ಯಾಸವಿಲ್ಲ. ಹಾಗಾಗಿ ಪ್ರಭಾಸ್​ ಜಾನ್​ ಟೈಟಲ್ ಬದಲಿಸುವಂತೆ ಸಿನಿಮಾತಂಡಕ್ಕೆ ಸೂಚಿಸಿದ್ದಾರಂತೆ. ಪ್ರಭಾಸ್​ ಸಿನಿಮಾಗಳು ಅಂದ್ರೆ ಅಲ್ಲಿ ಟೈಟಲ್​ನದ್ದೇ ಒಂದು ಟ್ರೆಂಡ್​ ಇರುತ್ತೆ. ಹಾಗಾಗಿ, ಮತ್ತೊಮ್ಮೆ ಟ್ರೆಂಡ್​ ಹುಟ್ಟುಹಾಕಲು ಪ್ರಭಾಸ್​ ಸಿದ್ಧವಾಗಿದ್ದು, ಹೊಸ ಟೈಟಲ್​ನೊಂದಿಗೆ ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಡಲಿದ್ದಾರೆ.

Published On - 2:08 pm, Sat, 1 February 20

Follow Us
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಕೊಪ್ಪಳದಲ್ಲಿ ಕೋತಿಯ ಚೇಷ್ಟೆಯಿಂದ ಪ್ರಾಣ ಕಳೆದುಕೊಂಡ 91 ವರ್ಷದ ಅಜ್ಜಿ!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
ಗುಜರಾತ್‌ನಲ್ಲಿ ಭಕ್ತರಿಗೆ ಡಿಕ್ಕಿ ಹೊಡೆದ ಕಾರಿಗೆ ಬೆಂಕಿ ಹಚ್ಚಿದ ಜನರು!
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
‘ದಸರಾದಲ್ಲಿ ಕಂಬಳ ಆಯೋಜಿಸುವುದು ಬೇಡ’ ಎಂದ ಪ್ರಮೋದಾದೇವಿ ಒಡೆಯರ್
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಕಬ್ಬನ್ ಪಾರ್ಕ್​ಗೂ ಪ್ರವೇಶ ಶುಲ್ಕ?; ತೋಟಗಾರಿಕೆ ಇಲಾಖೆ ಚಿಂತನೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ