ಪ್ರಭಾಸ್ ವೃತ್ತಿ ಜೀವನಕ್ಕಿಂತ ಅವರ ಮದುವೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತದೆ. ಅವರ ಹಾಗೂ ಅನುಷ್ಕಾ ಶೆಟ್ಟಿ ಜೊತೆಗಿನ ಪ್ರೇಮ್ ಕಹಾನಿ ಹೆಚ್ಚು ಸದ್ದು ಮಾಡಿತ್ತು. ಆದರೆ. ಇವರ ಪ್ರೀತಿ ವಿಚಾರ ಮದುವೆವರೆಗೆ ಹೋಗಿಲ್ಲ. ಹೀಗೆಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗಲೇ ಪ್ರಭಾಸ್ ಅವರ ಮದುವೆ ಬಗ್ಗೆ ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಮಾತನಾಡಿದ್ದಾರೆ. ಪ್ರಭಾಸ್ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನುವ ಸೂಚನೆ ನೀಡಿದ್ದಾರೆ.
ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ‘ಬಾಹುಬಲಿ 2’ ಬಳಿಕ ಪ್ರಭಾಸ್ ಇಷ್ಟು ದೊಡ್ಡ ಗೆಲುವು ಕಾಣುತ್ತಿರುವುದು ಇದೇ ಮೊದಲು. ದೊಡ್ಡ ಪಾತ್ರವರ್ಗ, ದೊಡ್ಡ ಬಜೆಟ್ ಕಾರಣಕ್ಕೆ ‘ಕಲ್ಕಿ 2898 ಎಡಿ’ ಸಿನಿಮಾ ಗೆಲುವು ಕಂಡಿದೆ. ಈ ಖುಷಿಯಲ್ಲಿರುವ ಪ್ರಭಾಸ್ ಫ್ಯಾನ್ಸ್ಗೆ ಮತ್ತೊಂದು ಖುಷಿಯ ವಿಚಾರ ಸಿಕ್ಕಿದೆ.
ಸಂದರ್ಶನ ಒಂದರಲ್ಲಿ ಶ್ಯಾಮಲಾ ದೇವಿ ಮಾತನಾಡಿದ್ದಾರೆ. ಅವರು ಪ್ರಭಾಸ್ ಮದುವೆ ಬಗ್ಗೆ ಹರಿದಾಡುತ್ತಿರುವ ವದಂತಿಯ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಈ ವಿಚಾರದಲ್ಲಿ ಸೈಲೆಂಟ್ ಆಗಿದ್ದಾರೆ ನಿಜ. ಆದರೆ, ಅವರ ಕುಟುಂಬದವರ ಕಡೆಯಿಂದ ಈ ಬಗ್ಗೆ ಸ್ಪಷ್ಟನೆ ಸಿಕ್ಕಿರುವುದಕ್ಕೆ ಫ್ಯಾನ್ಸ್ ಖುಷಿಯಾಗಿದ್ದಾರೆ.
‘ಕಲ್ಕಿ’ ಯಶಸ್ಸನ್ನು ಉದ್ದೇಶಿಸಿ ಮಾತನಾಡಿರೋ ಅವರು, ‘ಒಳ್ಳೆಯತನ ಮನುಷ್ಯನನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತದೆ ಎಂಬುದು ಸಾಬೀತಾಗಿದೆ. ‘ಬಾಹುಬಲಿ’ ಬಳಿಕ ಪ್ರಭಾಸ್ ದೊಡ್ಡ ಯಶಸ್ಸು ಕಾಣುವುದಿಲ್ಲ ಎಂದು ಅನೇಕರು ಹೇಳಿದ್ದರು. ಆದರೆ, ಆ ರೀತಿ ಆಗಿಲ್ಲ. ಪ್ರಭಾಸ್ ಮದುವೆ ವಿಚಾರದಲ್ಲೂ ಹೀಗೆಯೇ ಆಗುತ್ತದೆ’ ಎಂದಿದ್ದಾರೆ ಶ್ಯಾಮಲಾ ದೇವಿ. ಈ ಮೂಲಕ ಪ್ರಭಾಸ್ ಮದುವೆ ಆಗಲ್ಲ ಎನ್ನುವವರ ಬಾಯಿಯನ್ನು ಮುಚ್ಚಿಸುತ್ತಾರೆ ಎನ್ನುವ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ಗೆ ಇಲ್ಲ ಹೆಚ್ಚು ಸ್ಕ್ರೀನ್ಸ್ಪೇಸ್; ನಟನಿಗೆ ಬೇಸರ?
ಪ್ರಭಾಸ್ ಅವರಿಗೆ ಈಗ 44 ವರ್ಷ ವಯಸ್ಸು. ಅವರು ಡೇಟಿಂಗ್ ವಿಚಾರದಲ್ಲಿ ಸುದ್ದಿ ಆದರು. ಆದರೆ ಯಾವುದೂ ಮದುವೆವರೆಗೆ ಹೋಗಿಲ್ಲ. ಈಗ ಅವರು ಮದುವೆ ಆಗುತ್ತಾರೆ ಎನ್ನುವ ನಂಬಿಕೆ ಯಾರಲ್ಲೂ ಉಳಿದುಕೊಂಡಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.