
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು 8 ತಿಂಗಳು ಕಳೆಯುತ್ತಾ ಬಂದಿದೆ. ಆದರೆ, ಅಪ್ಪು ಇಲ್ಲ ಎಂಬ ಕೊರಗು ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅವರನ್ನು ಪ್ರತಿ ಹೆಜ್ಜೆಯಲ್ಲೂ ನೆನಪಿಸಿಕೊಳ್ಳಲಾಗುತ್ತಿದೆ. ಇನ್ನು ರಾಜ್ ಕುಟುಂಬಕ್ಕಂತೂ ಅಪ್ಪು ಇಲ್ಲ ಎಂಬ ನೋವು ಬಹುವಾಗಿ ಕಾಡುತ್ತಿದೆ. ಶಿವರಾಜ್ಕುಮಾರ್ (Shivarajkumar) ಅವರು ಪ್ರತಿ ವೇದಿಕೆಯ ಮೇಲೂ ತಮ್ಮನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಹಲವು ಸಿನಿಮಾ ಕಾರ್ಯಕ್ರಮಗಳಲ್ಲಿ ಪುನೀತ್ಗೆ ಗೌರವ ಸೂಚಿಸಲಾಗುತ್ತದೆ. ಕಿರುತೆರೆ ಕಾರ್ಯಕ್ರಮಗಳಲ್ಲೂ ಅಪ್ಪು ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ ರಿಯಾಲಿಟಿ ಶೋನಲ್ಲಿ ಅಪ್ಪುಗೆ ಭಿನ್ನ ರೀತಿಯಲ್ಲಿ ಗೌರವ ನೀಡಲಾಗಿದೆ. ಇದನ್ನು ನೋಡಿ ಶಿವಣ್ಣ ಭಾವುಕರಾಗಿದ್ದಾರೆ.
ಶಿವರಾಜ್ಕುಮಾರ್ ಅವರು ಶೀಘ್ರದಲ್ಲೇ 60ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಈ ವಯಸ್ಸಿನಲ್ಲೂ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಜತೆಗೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ ಶೋನ ಜಡ್ಜ್ ಕೂಡ ಆಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಂಡು ಈ ರಿಯಾಲಿಟಿ ಶೋನ ಶೂಟಿಂಗ್ಗೆ ಬಂದು ತಮ್ಮ ಕರ್ತವ್ಯ ಮುಗಿಸಿ ಹೋಗುತ್ತಿದ್ದಾರೆ. ಈಗ ವೇದಿಕೆ ಮೇಲೆ ಶಿವಣ್ಣ ಭಾವುಕರಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರು. ಅವರು ಸ್ಟೆಪ್ ಹಾಕುತ್ತಿದ್ದ ರೀತಿ ಅನೇಕರಿಗೆ ಇಷ್ಟವಾಗಿತ್ತು. ಈ ಕಾರಣಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ರ ವಿಜೇತರಿಗೆ ಅಪ್ಪು ಇರುವ ಟ್ರೋಫಿ ಸಿಗಲಿದೆ. ಶಿವರಾಜ್ಕುಮಾರ್ ಅವರು ಈ ಟ್ರೋಫಿಯನ್ನು ಅನಾವರಣ ಮಾಡಿದ್ದಾರೆ.
ಇದನ್ನೂ ಓದಿ: ರಜಿನಿಕಾಂತ್- ನಾನು ಒಳ್ಳೆಯ ಫ್ರೆಂಡ್ಸ್, ಆದರೆ ಒಂದು ವಿಚಾರದ ಹೊರತಾಗಿ; ಎಂದ ಕಮಲ್ ಹಾಸನ್; ಏನದು?
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ನಿಂದ’ ಸಾಕಷ್ಟು ಡ್ಯಾನ್ಸರ್ಗಳಿಗೆ ತಮ್ಮ ಕಲೆಯನ್ನು ಅಭಿವ್ಯಕ್ತಿಪಡಿಸಲು ಅವಕಾಶ ಸಿಕ್ಕಿದೆ. ಈ ವೇದಿಕೆ ಮೇಲೆ ಸಾಕಷ್ಟು ಮಂದಿ ತಮ್ಮ ಕಲೆಯನ್ನು ತೋರಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ಈ ರಿಯಾಲಿಟಿ ಶೋಗೆ ಜಡ್ಜ್ ಆಗಿರುವುದು ಹೊಸ ಹುರುಪು ಸಿಕ್ಕಂತೆ ಆಗಿದೆ. ಶಿವರಾಜ್ಕುಮಾರ್ ನಟನೆಯ ‘ಬೈರಾಗಿ’ ಸಿನಿಮಾ ಜುಲೈ 3ರಂದು ತೆರೆಗೆ ಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Mon, 20 June 22