ಸಿಂಬು, ವಿಶಾಲ್ ಸೇರಿ ಐವರು ನಟರಿಗೆ ರೆಡ್ ಕಾರ್ಡ್​; ಇವರು ಮಾಡಿದ ತಪ್ಪೇನು?

|

Updated on: Jun 20, 2023 | 8:32 AM

ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಅವರ ಅಸಹಕಾರದ ಆಧಾರದ ಮೇಲೆ ರೆಡ್ ಕಾರ್ಡ್ ನೀಡಲಾಗಿದೆ ಎಂದು ವರದಿಯಾಗಿದೆ.

ಸಿಂಬು, ವಿಶಾಲ್ ಸೇರಿ ಐವರು ನಟರಿಗೆ ರೆಡ್ ಕಾರ್ಡ್​; ಇವರು ಮಾಡಿದ ತಪ್ಪೇನು?
ಯೋಗಿ ಬಾಬು, ವಿಶಾಲ್, ಸಿಂಬು
Follow us on

ತಮಿಳು ಚಿತ್ರರಂಗದ ಕೆಲ ಹೀರೋ ಹಾಗೂ ಕಾಮಿಡಿಯನ್​​ಗಳಿಗೆ ನಿರ್ಮಾಪಕರ ಮಂಡಳಿ ಶಾಕ್ ನೀಡಿದೆ. ಚಿತ್ರರಂಗದ ಪ್ರಮುಖ ಐವರಿಗೆ ರೆಡ್ ಕಾರ್ಡ್ ನೀಡಲಾಗಿದೆ ಎಂದು ವರದಿ ಆಗಿದೆ. ಬೇರೆ ಬೇರೆ ಚಿತ್ರಗಳಿಗೆ ಅಡ್ವಾನ್ಸ್ ಪಡೆದು ಡೇಟ್ಸ್ ಸರಿಯಾಗಿ ನೀಡುತ್ತಿಲ್ಲ ಎಂದು ನಿರ್ಮಾಪಕರ ಪರಿಷತ್ತಿಗೆ ಕೆಲ ಪ್ರೊಡ್ಯೂಸರ್​​ಗಳು ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ಪರಿಷತ್ತು ಕಾರ್ಯಪ್ರವೃತ್ತವಾಗಿದೆ. ವಿಶಾಲ್, ಸಿಂಬು, ಅಥರ್ವ, ಎಸ್.ಜೆ.ಸೂರ್ಯ ಮತ್ತು ಯೋಗಿ ಬಾಬು (Yogi Babu) ಅವರು ರೆಡ್ ಕಾರ್ಡ್ ಪಡೆದ ಕಲಾವಿದರು ಎಂದು ವರದಿ ಆಗಿದೆ. ಈ ಬೆಳವಣಿಗೆ ಇವರ ವೃತ್ತಿ ಜೀವನಕ್ಕೆ ಸಾಕಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.

ಸಿಂಬು ಅವರು ಹೀರೋ ಆಗಿ ತಮಿಳುನಾಡಿನಲ್ಲಿ ಮಿಂಚುತ್ತಿದ್ದಾರೆ. ‘ಮಾನಾಡು’ ಸೂಪರ್ ಹಿಟ್ ಆದ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಿದೆ. ಎಸ್​.ಜೆ. ಸೂರ್ಯ ಅವರು ‘ಮಾನಾಡು’ ಚಿತ್ರದಲ್ಲಿ ನೆಗೆಟಿವ್ ಶೇಡ್​ನ ಪಾತ್ರ ಮಾಡಿ ಗಮನ ಸೆಳೆದರು. ಯೋಗಿ ಬಾಬು ಅವರು ಕಾಮಿಡಿ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ. ವಿಶಾಲ್ ಅವರು ಮೊದಲಿನಿಂದಲೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಥರ್ವ್​ ಅವರೂ ಕಾಲಿವುಡ್​ನಲ್ಲಿ ಹೆಸರು ಮಾಡಿದ್ದಾರೆ. ಈ ಐವರೂ ನಿರ್ಮಾಪಕರಿಗೆ ಅಸಹಕಾರ ತೋರಿದ್ದಾರೆ ಎನ್ನಲಾಗುತ್ತಿದೆ.

ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಅಥರ್ವ ಹಾಗೂ ಯೋಗಿಬಾಬು ಅವರ ಅಸಹಕಾರದ ಆಧಾರದ ಮೇಲೆ ರೆಡ್ ಕಾರ್ಡ್ ನೀಡಲಾಗಿದೆ ಎಂದು ವರದಿಯಾಗಿದೆ. ಇವರು ಸಿನಿಮಾ ಒಪ್ಪಿಕೊಂಡು ನಿರ್ಮಾಪಕರಿಂದ ಮುಂಗಡ ಹಣ ಪಡೆದಿದ್ದಾರೆ. ಆದರೆ ಶೂಟಿಂಗ್​ ಡೇಟ್ಸ್ ಕೊಡದೇ ಸತಾಯಿಸುತ್ತಿದ್ದಾರೆ. ಈಗ ನಟರು ಇದಕ್ಕೆ ಉತ್ತರಿಸಬೇಕಿದೆ. ಪರಿಷತ್ತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Ram Charan: ಹೆಣ್ಣು ಮಗುವಿಗೆ ತಾಯಿಯಾದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ

ಈ ಐವರು ಕಲಾವಿದರು ತಮ್ಮ ವಿರುದ್ಧದ ದೂರಿನ ಬಗ್ಗೆ ಸೂಕ್ತ ವಿವರಣೆ ನೀಡಿದರೆ, ಸಿನಿಮಾಗಳಿಗೆ ಸಹಕಾರ ನೀಡುವುದಾಗಿ ಹೇಳಿದರೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಒಂದೊಮ್ಮೆ ಅಲ್ಲಿಯೂ ಅಸಹಕಾರ ಮುಂದುವರಿದರೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:47 am, Tue, 20 June 23