Ram Charan: ಹೆಣ್ಣು ಮಗುವಿಗೆ ತಾಯಿಯಾದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ

ಈ ವಿಚಾರ ಮೆಗಾ ಕುಟುಂಬದ ಖುಷಿಯನ್ನು ಹೆಚ್ಚಿಸಿದೆ. ಇವರ ಅಭಿಮಾನಿಗಳು ಖುಷಿಯಲ್ಲಿ ಸಂಭ್ರಮಿಸಿದ್ದಾರೆ.

Ram Charan: ಹೆಣ್ಣು ಮಗುವಿಗೆ ತಾಯಿಯಾದ ಉಪಾಸನಾ; ರಾಮ್ ಚರಣ್ ಕುಟುಂಬದಲ್ಲಿ ಸಂತಸ
ರಾಮ್​ ಚರಣ್​, ಉಪಾಸನಾ, ಚಿರಂಜೀವಿ
Follow us
ರಾಜೇಶ್ ದುಗ್ಗುಮನೆ
|

Updated on:Jun 20, 2023 | 7:07 AM

ರಾಮ್ ಚರಣ್ ಹಾಗೂ ಉಪಾಸನಾ (Upasana) ಇತ್ತೀಚೆಗಷ್ಟೇ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈಗ ಇವರ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನ ಆಗಿದೆ. ರಾಮ್ ಚರಣ್ (Ram Charan) ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ಮೆಗಾ ಕುಟುಂಬದ ಖುಷಿಯನ್ನು ಹೆಚ್ಚಿಸಿದೆ. ಇವರ ಅಭಿಮಾನಿಗಳು ಖುಷಿಯಲ್ಲಿ ಸಂಭ್ರಮಿಸಿದ್ದಾರೆ. ಮಂಗಳವಾರ (ಜೂನ್ 20) ಬೆಳಗ್ಗೆ ಈ ಖುಷಿಯ ಸುದ್ದಿ ಹೊರ ಬಿದ್ದಿದೆ.

ಉಪಾಸನಾ ಅವರನ್ನು ಸೋಮವಾರ (ಜೂನ್ 19) ರಾತ್ರಿ ಹೈದರಾಬಾದ್​ನ ಜುಬ್ಲಿ ಹಿಲ್ಸ್​​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ ಉಪಾಸನಾಗೆ ಮಗು ಜನಿಸಿದ ವಿಚಾರವನ್ನು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ. ಮಗುವಿನ ಮುಖ ನೋಡಲು ಅಭಿಮಾನಿಗಳು ಕಾದಿದ್ದಾರೆ.

ರಾಮ್​ ಚರಣ್​ ಮತ್ತು ಉಪಾಸನಾ ಅವರು 2012ರ ಜೂನ್​ 14ರಂದು ಮದುವೆ ಆದರು. ಮದುವೆ ಆಗಿ ದಶಕಗಳ ಬಳಿಕ ಅವರು ಮೊದಲ ಮಗು ಪಡೆಯಲು ನಿರ್ಧರಿಸಿದ್ದರು. ಈಗ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಇವರಿಗೆ ಶುಭಾಶಯ ಬರುತ್ತಿದೆ.

ಇದನ್ನೂ ಓದಿ: Ram Charan: ರಾಮ್​ ಚರಣ್​-ಉಪಾಸನಾ ದಾಂಪತ್ಯಕ್ಕೆ 11 ವರ್ಷಗಳ ಸಂಭ್ರಮ; ಚಿರಂಜೀವಿ ವಿಶ್​ ಮಾಡಿದ್ದು ಹೇಗೆ?

ರಾಮ್ ಚರಣ್​ಗೆ ಈ ವರ್ಷ ಖುಷಿಯ ಮೇಲೆ ಖುಷಿಯ ಸುದ್ದಿ ಸಿಗುತ್ತಿದೆ. ‘ಆರ್​ಆರ್​ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಸೂಪರ್ ಹಿಟ್ ಆಯಿತು. ಆಸ್ಕರ್ ಅವಾರ್ಡ್ ಕೂಡ ಪಡೆಯಿತು. ಈಗ ಮನೆಗೆ ಮಗಳ ಆಗಮನ ಆಗಿದೆ. ರಾಮ್ ಚರಣ್ ತಂದೆ ಚಿರಂಜೀವಿ ತಾತ ಆಗಿದ್ದಾರೆ. ಅವರಿಗೂ ಈ ವಿಚಾರ ಖುಷಿ ನೀಡಿದೆ.

ರಾಮ್​ ಚರಣ್​ ಅವರು ‘ಆರ್​ಆರ್​ಆರ್​’ ಚಿತ್ರ ಗೆದ್ದ ಬಳಿಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಉಪಾಸನಾ ಕೊನಿಡೆಲಾ ಪ್ರೆಗ್ನೆಂಟ್​ ಎಂಬ ವಿಚಾರವನ್ನು ಕಳೆದ ಡಿಸೆಂಬರ್​ನಲ್ಲಿ ತಿಳಿಸಲಾಗಿತ್ತು. ಈ ನಡುವೆ ಒಂದು ಗಾಸಿಪ್​ ಹಬ್ಬಿತ್ತು. ಉಪಾಸನಾ-ರಾಮ್​ ಚರಣ್​ ದಂಪತಿಯ ಮಗು ಅಮೆರಿಕದಲ್ಲಿ ಜನಿಸಲಿದೆ ಎಂದು ಕೆಲವು ಕಡೆ ವರದಿ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಾಸನಾ ಅವರು ಸ್ಪಷ್ಟನೆ ಕೊಟ್ಟಿದ್ದರು. ಭಾರತದಲ್ಲಿಯೇ ತಾವು ಮಗುವಿಗೆ ಜನ್ಮ ನೀಡುವುದಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:47 am, Tue, 20 June 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ