AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Charan: ರಾಮ್​ ಚರಣ್​-ಉಪಾಸನಾ ದಾಂಪತ್ಯಕ್ಕೆ 11 ವರ್ಷಗಳ ಸಂಭ್ರಮ; ಚಿರಂಜೀವಿ ವಿಶ್​ ಮಾಡಿದ್ದು ಹೇಗೆ?

Ram Charan Wedding Anniversary: ರಾಮ್​ ಚರಣ್​ ಮತ್ತು ಉಪಾಸನಾ ಕೊನಿಡೆಲಾ ಅವರು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಈ ದಂಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 

Ram Charan: ರಾಮ್​ ಚರಣ್​-ಉಪಾಸನಾ ದಾಂಪತ್ಯಕ್ಕೆ 11 ವರ್ಷಗಳ ಸಂಭ್ರಮ; ಚಿರಂಜೀವಿ ವಿಶ್​ ಮಾಡಿದ್ದು ಹೇಗೆ?
ರಾಮ್​ ಚರಣ್​, ಉಪಾಸನಾ, ಚಿರಂಜೀವಿ
ಮದನ್​ ಕುಮಾರ್​
| Edited By: |

Updated on:Jun 15, 2023 | 6:33 AM

Share

ಟಾಲಿವುಡ್​ನ ಕ್ಯೂಟ್​ ಕಪಲ್​ ಆದಂತಹ ರಾಮ್​ ಚರಣ್ (Ram Charan)​ ಮತ್ತು ಉಪಾಸನಾ ಕೊನಿಡೆಲಾ ಅವರು ದಾಂಪತ್ಯ ಜೀವನದಲ್ಲಿ 11 ವರ್ಷಗಳನ್ನು ಪೂರೈಸಿದ್ದಾರೆ. ಇಂದು (ಜೂನ್​ 14) ಹನ್ನೊಂದನೇ ವಿವಾಹ ವಾರ್ಷಿಕೋತ್ಸವವನ್ನು ಅವರು ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳಿಂದ, ಆಪ್ತರಿಂದ, ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ರಾಮ್​ ಚರಣ್​ ಅವರ ತಂದೆ ‘ಮೆಗಾ ಸ್ಟಾರ್​’ ಚಿರಂಜೀವಿ (Mega Star Chiranjeevi) ಕೂಡ ವಿಶೇಷವಾಗಿ ವಿಶ್​ ಮಾಡಿದ್ದಾರೆ. ಮಗ ಮತ್ತು ಸೊಸೆ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ಅವರ ಮಾಡಿರುವ ಟ್ವೀಟ್​ ವೈರಲ್​ ಆಗಿದೆ. ಈ ದಂಪತಿ ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ವೆಡ್ಡಿಂಗ್​ ಆ್ಯನಿವರ್ಸರಿ ಸಲುವಾಗಿ ರಾಮ್​ ಚರಣ್​ ಮತ್ತು ಉಪಾಸನಾ ಕೊನಿಡೆಲಾ (Upasana) ಅವರು ಮುದ್ದಾದ ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಅವರಿಬ್ಬರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ರಾಮ್​ ಚರಣ್​ ಮತ್ತು ಉಪಾಸನಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಅಭಿನಂದನೆ ತಿಳಿಸಲು ಚಿರಂಜೀವಿ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದಾರೆ. ‘ಹಾಯ್​ ಚರಣ್​ ಮತ್ತು ಉಪಾಸನಾ. ಈ ವಿಶೇಷ ದಿನದಂದು ನಿಮಗೆ ನಾನು ಶುಭಕೋರುತ್ತೇನೆ. ಅಳೆಯಲು ಸಾಧ್ಯವಾಗದಷ್ಟು ಹೆಮ್ಮೆ ಮತ್ತು ಖುಷಿಯನ್ನು ನೀವಿಬ್ಬರು ನಮಗೆ ನೀಡಿದ್ದೀರಿ. ತಂದೆ-ತಾಯಿ ಆಗುತ್ತಿರುವ ನಿಮಗೆ ನಾವು ಆಲ್ ದಿ ಬೆಸ್ಟ್​ ತಿಳಿಸುತ್ತೇವೆ’ ಎಂದು ಚಿರಂಜೀವಿ ಟ್ವೀಟ್​ ಮಾಡಿದ್ದಾರೆ.

ರಾಮ್​ ಚರಣ್​ ಅವರು ‘ಆರ್​ಆರ್​ಆರ್​’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಉಪಾಸನಾ ಕೊನಿಡೆಲಾ ಪ್ರೆಗ್ನೆಂಟ್​ ಎಂಬ ವಿಚಾರವನ್ನು ಕಳೆದ ಡಿಸೆಂಬರ್​ನಲ್ಲಿ ತಿಳಿಸಲಾಗಿತ್ತು. ಸದ್ಯದಲ್ಲೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ನಡುವೆ ಒಂದು ಗಾಸಿಪ್​ ಹಬ್ಬಿತ್ತು. ಉಪಾಸನಾ-ರಾಮ್​ ಚರಣ್​ ದಂಪತಿಯ ಮಗು ಅಮೆರಿಕದಲ್ಲಿ ಜನಿಸಲಿದೆ ಎಂದು ಕೆಲವರು ಊಹಿಸಿದ್ದುಂಟು. ಈ ವಿಚಾರಕ್ಕೆ ಸಂಬಂಧಿಸಿದಂತೆ ಉಪಾಸನಾ ಅವರು ಸ್ಪಷ್ಟನೆ ನೀಡಿದ್ದರು. ಭಾರತದಲ್ಲಿಯೇ ತಾವು ಮಗುವಿಗೆ ಜನ್ಮ ನೀಡುವುದಾಗಿ ತಿಳಿಸಿದ್ದರು.

ಆಸ್ಕರ್​ ಪ್ರಶಸ್ತಿಗೆ ‘ನಾಟು ನಾಟು..’ ಹಾಡು ನಾಮಿನೇಟ್​ ಆಗಿತ್ತು. ಆ ಕಾರಣದಿಂದ ರಾಮ್​ ಚರಣ್​ ಅವರು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ನಡೆದ ಟಿವಿ ಕಾರ್ಯಕ್ರಮವೊಂದರಲ್ಲಿ ಅವರು ಲೇಡಿ ಡಾಕ್ಟರ್​ ಒಬ್ಬರ ಅಪಾಯಿಂಟ್ಮೆಂಟ್​​ ಪಡೆದುಕೊಂಡಿದ್ದರು. ಅದರಿಂದಾಗಿ ಅನುಮಾನ ಶುರುವಾಗಿತ್ತು. ‘ಶೀಘ್ರದಲ್ಲೇ ಉಪಾಸನಾ ಕೂಡ ಅಮೆರಿಕಕ್ಕೆ ಬರುತ್ತಾರೆ. ನಿಮ್ಮ ನಂಬರ್​ ನಾನು ಪಡೆದುಕೊಳ್ಳುತ್ತೇನೆ’ ಎಂದು ಡಾ. ಜೆನ್​ ಆಸ್ಟನ್​ ಎಂಬ ಲೇಡಿ ಡಾಕ್ಟರ್​ಗೆ ರಾಮ್​ ಚರಣ್​ ಹೇಳಿರುವ ವಿಡಿಯೋ ಕ್ಲಿಪ್​ ವೈರಲ್​ ಆಗಿತ್ತು. ಹಾಗಾಗಿ ಉಪಾಸನಾ ಅವರು ಅಮೆರಿಕದಲ್ಲೇ ಮೊದಲ ಮಗುವಿಗೆ ಜನ್ಮ ನೀಡಬಹುದು ಎಂದು ಅನೇಕರು ಊಹಿಸಿದ್ದರು.

ಇದನ್ನೂ ಓದಿ: Ram Charan: ರಾಮ್​ ಚರಣ್​ ಜೊತೆ ಕೈ ಜೋಡಿಸಿದ ‘ದಿ ಕಾಶ್ಮೀರ್​ ಫೈಲ್ಸ್​’ ನಿರ್ಮಾಪಕ; ಇಲ್ಲಿದೆ ಹೊಸ ಸಮಾಚಾರ

ಈ ವಿಚಾರಕ್ಕೆ ಸಂಬಂಧಿಸಿದ ಗಾಸಿಪ್​ ಜೋರಾಗುತ್ತಿದ್ದಂತೆಯೇ ಉಪಾಸನಾ ಕೊನಿಡೆಲಾ ಅವರು ಟ್ವೀಟ್​ ಮಾಡಿದರು. ಅಲ್ಲದೇ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಭಾರತದಲ್ಲೇ ಮೊದಲ ಮಗುವಿಗೆ ಜನ್ಮ ನೀಡಲಿದ್ದೇನೆ’ ಎಂದು ಹೇಳಿದರು. ಭಾರತದಲ್ಲಿನ ವಿಶ್ವದರ್ಜೆಯ ವೈದ್ಯರ ಜೊತೆಗೆ ಅಮೆರಿಕದ ಡಾ. ಜೆನ್​ ಆಸ್ಟನ್​ ಕೂಡ ಈ ಸಂದರ್ಭದಲ್ಲಿ ಉಪಾಸನಾ ಅವರ ಜೊತೆ ಇರಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:11 pm, Wed, 14 June 23

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ