ನಟ ಯಶ್ (Yash) ಮತ್ತು ನಟಿ ರಾಧಿಕಾ ಪಂಡಿತ್ (Radhika Pandit) ಇಬ್ಬರೂ ಒಟ್ಟಿಗೆ ಸಿನಿಮಾ ಜರ್ನಿ ಆರಂಭಿಸಿದವರು. ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿದ ಇವರಿಬ್ಬರೂ ಮುಂದೆ ಸಿನಿಮಾಗಳಲ್ಲಿಯೂ ಒಟ್ಟಿಗೆ ಅಭಿನಯಿಸಿದರು. ನಂತರ ಸ್ಯಾಂಡಲ್ವುಡ್ನಲ್ಲಿ ಕ್ಯೂಟ್ ಪೇರ್ ಎಂದೇ ಪ್ರಸಿದ್ಧರಾದರು. ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಅದ್ದೂರಿ ಮದುವೆ ಮಾಡಿಕೊಂಡರು. ಸ್ಯಾಂಡಲ್ವುಡ್ನ ಸ್ಟಾರ್ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಕೂಡ ಒಂದು. ಸದ್ಯ ಈ ನಟ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ತಮ್ಮ 6ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಸದ್ಯ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳ ಕೂಡ ವೈರಲ್ ಆಗಿವೆ.
ಇದನ್ನೂ ಓದಿ: Yash Radhika Pandit: ಯಶ್, ರಾಧಿಕಾ ದಂಪತಿಗೆ ಇಂದು ಮದುವೆಯ 6ನೇ ವಾರ್ಷಿಕೋತ್ಸವದ ಸಂಭ್ರಮ
ಚಿಕ್ಕಬಳ್ಳಾಪುರ ತಾಲ್ಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸ್ಯಾಂಡಲ್ವುಡ್ ಕ್ಯೂಟ್ ಜೋಡಿ ಭೇಟಿ ನೀಡಿ ಕಾಲ ಕಳೆದಿದ್ದಾರೆ. ನಿನ್ನೆ (ಡಿ. 10) ಬೆಳಂಬೆಳಿಗ್ಗೆ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಗಿರಿಧಾಮದ ವಿವ್ ಪಾಯಿಂಟ್ನಲ್ಲಿ ಕೆಲ ಕಾಲ ಕಳೆದಿದ್ದಾರೆ. ಮಳೆ ಹಾಗೂ ಮಂಜು ಇದ್ದ ಕಾರಣ ಗಿರಿಧಾಮದ ಕೆ.ಎಸ್.ಟಿ.ಡಿ.ಸಿಯ ಮಯೂರ ಪೈನ್ ಟಾಪ್ ಹೋಟಲ್ನಲ್ಲಿ ಇಡ್ಲಿ ವಡಾ, ಮ್ಯಾಗಿ, ಮಸಾಲೆ ದೋಸೆ ತಿಂಡಿ ಸೇವಿಸಿದ್ದಾರೆ. ಹೋಟಲ್ ಸಿಬ್ಬಂದಿಯ ಸವಿರುಚಿಗೆ ದಂಪತಿ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ಯಶ್, ರಾಧಿಕಾ ದಂಪತಿ ಜೊತೆ ಹೋಟಲ್ ಸಿಬ್ಬಂದಿಗಳು ಪೋಟೊ ತೆಗೆಸಿಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ ತಮ್ಮ 6ನೇ ವರ್ಷದ ಮದುವೆ ವಾರ್ಷಿಕೋತ್ಸಕ್ಕೆ ಕೆಲ ಫೋಟೋಗಳನ್ನು ಸಹ ಹಂಚಿಕೊಂಡಿದ್ದರು. ‘ಇದು ನಾವೇ, ಅನೇಕ ಸಿನಿಮಾಗಳು, ಲವಲವಿಕೆ ಜೀವನ, ಧಾರ್ಮಿಕ, ಗಂಭೀರ ಎಲ್ಲವೂ ಈ ಜೀವನದ ಮ್ಯಾಜಿಕಲ್ ವರ್ಷಗಳಾಗಿವೆ. ಈ ಆರು ವರ್ಷಗಳ ವೈವಾಹಿಕ ಜೀವನವನ್ನು ನಿಮ್ಮೊಂದಿಗೆ ನೈಜವಾಗಿಸಿದ್ದಕ್ಕಾಗಿ ಧನ್ಯವಾದಗಳು, ಮದುವೆ ವಾರ್ಷಿಕೋತ್ಸವದ ಶುಭಾಶಯಗಳು’ ಎಂದು ರಾಧಿಕಾ ಪಂಡಿತ್ ತಮ್ಮ ಪತಿ ಯಶ್ಗೆ ಶುಭಕೋರಿದ್ದರು.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:01 pm, Sat, 10 December 22