ನಟಿ ಜ್ಯೋತಿಕಾ (Jyothika) ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಖ್ಯಾತಿ ಪಡೆದಿದ್ದಾರೆ. ಅವರು ಸದ್ಯ ಹಿಂದಿಯ ‘ಶ್ರೀಕಾಂತ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತುಶಾರ್ ಹಿರಾನಂದನಿ ಇದನ್ನು ನಿರ್ದೇಶನ ಮಾಡಿದ್ದು, ರಾಜ್ಕುಮಾರ್ ರಾವ್, ಅಲಾಯ ಎಫ್, ಶರದ್ ಕೇಲ್ಕರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮಧ್ಯೆ ಆನ್ಲೈನ್ನಲ್ಲಿ ವೋಟ್ ಮಾಡಿದ್ದೇನೆ ಎಂದು ಹೇಳುವ ಮೂಲಕ ಜ್ಯೋತಿಕಾ ಟ್ರೋಲ್ ಆಗಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ಲೋಕಸಭಾ ಚುನಾವಣೆ ನಡೆದಿದೆ. ಅನೇಕ ಸೆಲೆಬ್ರಿಟಿಗಳು ಬಂದು ವೋಟ್ ಮಾಡಿದ್ದಾರೆ. ಆದರೆ, ಜ್ಯೋತಿಕಾ ವೋಟ್ ಮಾಡಿಲ್ಲ. ಇದನ್ನು ಅನೇಕರು ಟ್ರೋಲ್ ಮಾಡಿದ್ದರು. ಈ ಬಗ್ಗೆ ಅವರು ಉತ್ತರಿಸಿದ್ದಾರೆ. ‘ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ’ ಎಂದಿದ್ದಾರೆ ಜ್ಯೋತಿಕಾ. ನಂತರ ಮತದಾನ ಪ್ರತಿ ವರ್ಷ ನಡೆಯಲ್ಲ ಎಂದು ಸಂದರ್ಶಕರು ಹೇಳಿದರು. ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ.
‘ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದ, ನಮಗೆ ಅನಾರೋಗ್ಯ ಆಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿ ಬಂದಿರುತ್ತೇವೆ, ಆನ್ಲೈನ್ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಶ್ ಆಗಬೇಕೆಂದಿಲ್ಲ. ಜೀವನಕ್ಕೆ ಒಂದು ಖಾಸಗಿ ಭಾಗವಿದೆ ಮತ್ತು ಅದನ್ನು ನಾವು ಗೌರವಿಸಬೇಕು’ ಎಂದಿದ್ದಾರೆ ಜ್ಯೋತಿಕಾ.
ಆನ್‌ಲೈನ್ ವೋಟಿಂಗ್ ವಿಚಾರವನ್ನು ಇಟ್ಟುಕೊಂಡು ಎಲ್ಲರೂ ಟ್ರೋಲ್ ಮಾಡುತ್ತಿದ್ದಾರೆ. ‘ಮೇಡಂ ನೀವು ಸರ್ಕಾರವು ತೆಗೆದುಕೊಂಡ ಹೊಸ ನೀತಿ ನಿರ್ಧಾರದ ಬ್ರಾಂಡ್ ಅಂಬಾಸಿಡರ್ ಆಗಿರುವಂತೆ ತೋರುತ್ತಿದೆ. ಆನ್‌ಲೈನ್ ಮತದಾನ! ನೀವು ದಯವಿಟ್ಟು ಅದರ ಬಗ್ಗೆ ಹೇಳುವಿರೇ? ನನ್ನಂತಹ ಬಡವರಿಗೆ ಸಹಾಯ ಆಗುತ್ತದೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ದಯವಿಟ್ಟು ಸಹಾಯ ಮಾಡಿ, ಜ್ಯೋತಿಕಾ ರೀತಿ ಆನ್‌ಲೈನ್ ವೋಟ್ ಮಾಡೋದು ಹೇಗೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
Respected Jyothika Mam – Can you please educate me on online voting!
Mam, looks like you are the brand ambassador of a new policy decision taken by the government – online voting!
Could you kindly throw more light?
It will help poor people like me who cannot afford to do… pic.twitter.com/65EwEf8AAK
— Dr. Praveen Kumar (@Praveengiddy) May 3, 2024
‘ಸಮಾಜ ಸುಧಾರಕಿ ಜ್ಯೋತಿಕಾ, ಅಶಿಕ್ಷಿತರಿಗೂ ಗೊತ್ತು ಚುನಾವಣೆ ಪ್ರತಿ ವರ್ಷಕ್ಕೆ ಅಲ್ಲ, 5 ವರ್ಷಕ್ಕೊಮ್ಮೆ ಎಂದು. ನಾನು ಭಾರತದಲ್ಲಿ ಈವರೆಗೆ ಆನ್‌ಲೈನ್ ಮತದಾನದ ಬಗ್ಗೆ ಕೇಳಿಲ್ಲ’ ಎಂದಿದ್ದಾರೆ ಅವರು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇದನ್ನೂ ಓದಿ: ಒಂದೇ ಒಂದು ವಿಡಿಯೋದಿಂದ ವಿಚ್ಛೇದನ ವದಂತಿಗೆ ಬ್ರೇಕ್ ಹಾಕಿದ ಜ್ಯೋತಿಕಾ-ಸೂರ್ಯ
ಜ್ಯೋತಿಕಾ ಅವರು ಇತ್ತೀಚೆಗೆ ಮುಂಬೈನಲ್ಲಿ ವಾಸವಾಗಿದ್ದಾರೆ. ಅವರು ಬಾಲಿವುಡ್ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘ಶೈತಾನ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ಆರ್ ಮಾಧವನ್ ಹಾಗೂ ಅಜಯ್ ದೇವಗನ್ ಕೂಡ ನಟಿಸಿದ್ದರು. ಈಗ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.