
ನಾನು ದಪ್ಪಗಿದ್ದನೇ, ನಾನು ಸುಂದರವಾಗಿಲ್ಲ ಎಂಬ ಕೊರಗು ಅನೇಕರಲ್ಲಿ ಇರುತ್ತದೆ. ಆದರೆ, ಡೆಡಿಕೇಷನ್ ಎಂಬುದು ಒಂದಿದ್ದರೆ ಏನು ಬೇಕಿದ್ದರೂ ಸಾಧಿಸಬಹುದು ಎಂಬುದಕ್ಕೆ ನಟಿ ಕಲ್ಯಾಣಿ ಪ್ರಿಯದರ್ಶನ್ (Kalyani Priyadarshan) ಅವರು ಉತ್ತಮ ಉದಾಹರಣೆ. ಅವರ ಈ ಮೊದಲಿನ ಫೋಟೋಗಳು ಹಾಗೂ ಈಗಿನ ಫೋಟೋಗಳನ್ನು ಹೋಲಿಕೆ ಮಾಡಿ ನೋಡಿದರೆ ಅಜಗಜಾಂತರ ವ್ಯತ್ಯಾಸ ಇದೆ. ಅವರ ಟ್ರಾನ್ಸ್ಫಾರ್ಮೇಷನ್ನ ಅನೇಕರು ಹೊಗಳಿದ್ದಾರೆ.
ಕಲ್ಯಾಣಿ ಪ್ರಿಯದರ್ಶನ್ ಅವರು ‘ಲೋಕಃ: ಚಾಪ್ಟರ್ 1- ಚಂದ್ರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ರಾಜ್ ಬಿ. ಶೆಟ್ಟಿ ಅವರು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ದುಲ್ಕರ್ ಸಲ್ಮಾನ್ ಅವರು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ದಂತದ ಗೊಂಬೆ ರೀತಿ ಕಾಣಿಸುತ್ತಾರೆ.
ಕಲ್ಯಾಣಿ ಪ್ರಿಯದರ್ಶನ್ ಅವರು ಆರಂಭದ ದಿನಗಳಲ್ಲಿ ದಪ್ಪ ಇದ್ದರು. ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾ ಇರಲಿಲ್ಲ. ಆದರೆ, ದಿನ ಕಳೆದಂತೆ ಅವರಿಗೆ ಆರೋಗ್ಯದ ಕಡೆ ಗಮನ ಬಂತು. ಈ ಕಾರಣದಿಂದಲೇ ಅವರು ಆಹಾರದ ಬಗ್ಗೆ ಗಮನ ಹರಿಸಿದರು. ನಿತ್ಯ ಜಿಮ್ನಲ್ಲಿ ವರ್ಕೌಟ್ ಕೂಡ ಮಾಡಿದರು. ಈ ಎಲ್ಲಾ ಕಾರಣದಿಂದ ಈಗ ಅವರು ಫಿಟ್ ಆಗಿದ್ದಾರೆ.
ಇದನ್ನೂ ಓದಿ: ‘ಹೃದಯಂ’ ಮೂಲಕ ಎಲ್ಲರ ಮನಗೆದ್ದ ಕಲ್ಯಾಣಿ ಪ್ರಿಯದರ್ಶನ್; ಇಲ್ಲಿವೆ ನಟಿಯ ಕ್ಯೂಟ್ ಫೋಟೋಗಳು
ಲೆಜೆಂಡರಿ ಸಿನಿಮಾ ನಿರ್ದೇಶಕ ಪ್ರಿಯದರ್ಶನ್ ಹಾಗೂ ಖ್ಯಾತ ಮಲಯಾಳಂ ನಟಿ ಲಿಸ್ಸಿ ಅವರ ಪುತ್ರಿ ಕಲ್ಯಾಣಿ. ‘ಹೃದಯಂ’ ಸಿನಿಮಾದಲ್ಲಿ ನಟಿಸಿ ಕಲ್ಯಾಣಿ ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಆ ಬಳಿಕ ಹಲವು ಸಿನಿಮಾಗಳಲ್ಲಿ ಕಲ್ಯಾಣಿ ನಟಿಸಿದ್ದಾರೆ. ಅವರ ಜನಪ್ರಿಯತೆ ಈಗ ಸಾಕಷ್ಟು ಹೆಚ್ಚಾಗಿದೆ. ಲೋಕಃ ಸಿನಿಮಾದಲ್ಲಿ ಅವರು ಸೂಪರ್ ವುಮನ್ ಪಾತ್ರ ಮಾಡಿದ್ದಾರೆ. ಅವರ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.