ಕಂಗನಾ ರಣಾವತ್(kangana ranaut) ಅವರ ಟ್ವಿಟರ್ ಖಾತೆ ಬ್ಲಾಕ್ ಆಗಿದೆ. ಈ ಕಾರಣಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಅವರು ಸಕ್ರಿಯರಾಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಸ್ಟೇಟಸ್ಗಳು ನಾಳೆಗೆ ಮಾಯವಾಗುತ್ತದೆ. ಆ ಬಗ್ಗೆ ಅವರು ಅಪಸ್ವರ ತೆಗೆದಿದ್ದಾರೆ. ಟ್ವಿಟರ್ ಅನ್ನು ಅತ್ಯುತ್ತಮ ಸಾಮಾಜಿಕ ವೇದಿಕೆ ಎಂದು ಕರೆದ ಕೆಲವು ದಿನಗಳ ನಂತರ, ಇದೀಗ ಇನ್ಸ್ಟಾಗ್ರಾಮ್ ಕುರಿತು ತಮ್ಮ ಅಭಿಪ್ರಾಯವನ್ನು ಅವರು ಹಂಚಿಕೊಂಡಿದ್ದಾರೆ.
‘ಇನ್ಸ್ಟಾಗ್ರಾಮ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಿಡುವುದಿಲ್ಲ, ಪೋಸ್ಟ್ಗಳ ಬಗ್ಗೆ ಬರೆದ ಕಮೆಂಟ್ಗಳು ಮಾರನೇ ದಿನ ಮಾಯವಾಗುತ್ತದೆ. ನನ್ನಂತಹ ಜನರು ತಮ್ಮ ಆಲೋಚನೆಗಳನ್ನು ಸರಿಯಾಗಿ ದಾಖಲಿಸಲು ಬಯಸುತ್ತಾರೆ. ಆದರೆ ಅದಕ್ಕೆ ಇನ್ಸ್ಟಾಗ್ರಾಮ್ ಸೂಕ್ತವಲ್ಲ’ ಎಂದಿದ್ದಾರೆ ಅವರು.
ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯನ್ನ 2021ರಲ್ಲಿ ಅಮಾನತುಗೊಳಿಸಲಾಗಿದೆ. ‘ಟ್ವಿಟರ್ ಖಾತೆಯನ್ನ ನಿರ್ವಹಿಸಲು ನಿರ್ದಿಷ್ಟ ಮೊತ್ತವನ್ನು ನೀಡಬೇಕು. ಇದರಿಂದ ನಮ್ಮ ಖಾತೆಯು ಸೇಫ್ ಆಗಿರುತ್ತದೆ. ಜಗತ್ತಿನಲ್ಲಿ ಎಲ್ಲಿಯು ಉಚಿತ ಊಟಗಳಿಲ್ಲ. ನೀವು ಮುಕ್ತವಾಗಿ ಬಳಸುವ ಎಲ್ಲಾ ಪ್ಲಾಟ್ಫಾರ್ಮ್ಗಳು ನಿಮ್ಮ ಡಾಟಾವನ್ನು ಕದಿಯುತ್ತವೆ’ ಎಂದಿರುವ ಅವರು ಟ್ವಿಟರ್ ಕೈಗೊಂಡಿರುವ ಬದಲಾವಣೆಗಳನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:ಕಂಗನಾ ರಣಾವತ್: ‘ಮಾಜಿ ಟ್ವಿಟ್ಟರ್ ಮುಖ್ಯಸ್ಥನ ವಿನಾಶವನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ’
ಕಂಗನಾ ರಣಾವತ್ ‘ಎಮರ್ಜೆನ್ಸಿ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನ ಮಾಡುತ್ತಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ