AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಣದ ಜತೆಗೆ ನಟನೆ ಆರಂಭಿಸಿದ ಧೋನಿ? ಹಿಟ್ ನಿರ್ದೇಶಕನ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್

ಚಿತ್ರರಂಗಕ್ಕೂ ಕ್ರಿಕೆಟ್ ಲೋಕಕ್ಕೂ ಉತ್ತಮ ನಂಟಿದೆ. ಟೀಂ ಇಂಡಿಯಾ ಮಾಜಿ ಬೌಲರ್ ಶ್ರೀಶಾಂತ್, ಇರ್ಫಾನ್ ಪಠಾಣ್ ಸೇರಿ ಅನೇಕರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಧೊನಿಯ ಸರದಿ. ‘

ನಿರ್ಮಾಣದ ಜತೆಗೆ ನಟನೆ ಆರಂಭಿಸಿದ ಧೋನಿ? ಹಿಟ್ ನಿರ್ದೇಶಕನ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 11, 2022 | 5:21 PM

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ಚೆನ್ನೈ ಸೂಪರ್ ಕಿಂಗ್ಸ್​​ನ ಹಾಲಿ ಕ್ಯಾಪ್ಟನ್ ಎಂ.ಎಸ್​. ಧೋನಿ (MS Dhoni) ಸದ್ಯ ಸುದ್ದಿಯಲ್ಲಿದ್ದಾರೆ. ಚಿತ್ರರಂಗದ ಜತೆ ಅವರು ನಂಟು ಬೆಳೆಸಿಕೊಳ್ಳುತ್ತಿದ್ದಾರೆ. ‘ಧೋನಿ ಎಂಟರ್​ಟೇನ್​ಮೆಂಟ್​’ ಹೆಸರಿನ ನಿರ್ಮಾಣಸಂಸ್ಥೆ ಆರಂಭಿಸಿ ಸಿನಿಮಾ ನಿರ್ಮಾಣಕ್ಕೆ ಅವರು ಮುಂದಾಗುತ್ತಿದ್ದಾರೆ. ಹೀಗಿರುವಾಗಲೇ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಕೂಲ್ ಕ್ಯಾಪ್ಟನ್ ಈಗ ನಟನೆಯಲ್ಲೂ ತೊಡಗಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಖ್ಯಾತ ನಿರ್ದೇಶಕನ ಜತೆ ಅವರು ಕೈ ಜೋಡಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.

ಚಿತ್ರರಂಗಕ್ಕೂ ಕ್ರಿಕೆಟ್ ಲೋಕಕ್ಕೂ ಉತ್ತಮ ನಂಟಿದೆ. ಟೀಂ ಇಂಡಿಯಾ ಮಾಜಿ ಬೌಲರ್ ಶ್ರೀಶಾಂತ್, ಇರ್ಫಾನ್ ಪಠಾಣ್ ಸೇರಿ ಅನೇಕರು ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಧೊನಿಯ ಸರದಿ. ‘ವಿಕ್ರಮ್​’ ಅಂತಹ ಸೂಪರ್ ಹಿಟ್ ಚಿತ್ರ ನೀಡಿದ ಲೋಕೇಶ್ ಕನಗರಾಜ್ ಮುಂದಿನ ಪ್ರಾಜೆಕ್ಟ್​ನಲ್ಲಿ ಧೋನಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.

ಲೋಕೇಶ್ ಅವರು ತಮ್ಮ ಮುಂದಿನ ಪ್ರಾಜೆಕ್ಟ್​ ಮೇಲೆ ಗಮನ ಹರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧೋನಿಗೆ ಒಂದು ಪ್ರಮುಖ ಪಾತ್ರ ನೀಡಬೇಕು ಎನ್ನುವ ಆಲೋಚನೆಯಲ್ಲಿ ಲೋಕೇಶ್ ಇದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ
Image
ಈ ಇಬ್ಬರಂತೆ ಸಾವಿರ ಆಟಗಾರರು ಸಿಗಬಹುದು, ಆದರೆ ಧೋನಿಯಂಥವರು ಸಿಗುವುದು ಅಸಾಧ್ಯ; ಗಂಭೀರ್
Image
ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ಧೋನಿ; ಮೊದಲ ಸಿನಿಮಾ ಹೀಗಿರಲಿದೆ?
Image
T20 World Cup 2022: ಈ ಬಾರಿ ಉಡೀಸ್ ಆಗಲಿದೆ 10 ವಿಶ್ವ ದಾಖಲೆಗಳು

ಲೋಕೇಶ್ ಕನಗರಾಜ್ ಹಾಗೂ ದಳಪತಿ ವಿಜಯ್ ಅವರು ಒಂದಾಗುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 67’ ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಧೋನಿ ನಟಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಧೋನಿ ಅವರು ಐಪಿಎಲ್​ನಲ್ಲಿ ‘ಚೆನ್ನೈ ಸೂಪರ್ ಕಿಂಗ್ಸ್’ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಕಾರಣಕ್ಕೆ ತಮಿಳುನಾಡಿನಲ್ಲಿ ಅವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹೀಗಾಗಿ, ಅವರು ತಮಿಳು ಚಿತ್ರರಂಗದತ್ತ ಹೆಚ್ಚು ವಾಲುತ್ತಿದ್ದಾರೆ.

ಧೋನಿ ನಿರ್ಮಾಣ ಮಾಡುವ ಮೊದಲ ಸಿನಿಮಾಗೆ ರಮೇಶ್ ತಮಿಳ್​ಮಣಿ ಅವರು ನಿರ್ದೇಶನ ಮಾಡಲಿದ್ದಾರೆ. ಅವರು ಈ ಮೊದಲು ‘ಅಥರ್ವ-ದಿ ಒರ್ಜಿನ್’ ಹೆಸರಿನ ಗ್ರಾಫಿಕ್ ನಾವೆಲ್ ಅನ್ನು ಬರೆದಿದ್ದಾರೆ. ಈ ಚಿತ್ರದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ಧೋನಿ; ಮೊದಲ ಸಿನಿಮಾ ಹೀಗಿರಲಿದೆ?

ಧೋನಿ ಎಂಟರ್​ಟೇನ್​ಮೆಂಟ್ ಎದುರು ನಿಂತು ಧೋನಿ ಪೋಸ್ ನೀಡಿದ್ದ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ತಮಿಳು ಸಿನಿಮಾ ಮಾತ್ರವಲ್ಲದೆ ಇನ್ನೂ ಹಲವು ನಿರ್ದೇಶಕರ ಜತೆ ಧೋನಿ ಮಾತುಕತೆಯಲ್ಲಿ ಇದ್ದಾರೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಬಳಿಕ ಅವರು ಈ ಬಗ್ಗೆ ಗಮನಹರಿಸುತ್ತಿದ್ದಾರೆ. ಮೂಲಗಳ ಪ್ರಕಾರ ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡುವತ್ತವೂ ಧೋನಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ