Keerthy Suresh: ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಪಡೆಯುವ ಕೀರ್ತಿ ಸುರೇಶ್ ಅವರ ಮೊದಲ ಸಂಭಾವನೆ ಎಷ್ಟು?

ಕೀರ್ತಿ ಸುರೇಶ್ ತಂದೆ-ತಾಯಿ ಇಬ್ಬರೂ ಚಿತ್ರರಂಗದ ಹಿನ್ನೆಲೆಯವರೇ ಆಗಿರುವುದರಿಂದ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸುಲಭವಾಯಿತು. ಅವರ ಮೊದಲ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ.

Keerthy Suresh: ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಪಡೆಯುವ ಕೀರ್ತಿ ಸುರೇಶ್ ಅವರ ಮೊದಲ ಸಂಭಾವನೆ ಎಷ್ಟು?
ಕೀರ್ತಿ ಸುರೇಶ್

Updated on: Jul 07, 2023 | 9:09 AM

ನಟಿ ಕೀರ್ತಿ ಸುರೇಶ್ (Keerthy Suresh) ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ತೆಲುಗು ಮಾತ್ರವಲ್ಲದೆ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿಯೂ ಅವರು ಜನಪ್ರಿಯತೆ ಪಡೆದಿದ್ದಾರೆ. ಸದ್ಯ ಹಲವು ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ಅವರಿಗೆ ಮೊದಲು ಇಷ್ಟು ದೊಡ್ಡ ಮೊತ್ತದ ಹಣ ಸಿಗುತ್ತಿರಲಿಲ್ಲ. ಆರಂಭದಲ್ಲಿ ಅವರು ತುಂಬಾನೇ ಶ್ರಮವಹಿಸಿದ್ದರು. ಈ ವಿಚಾರ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಕೀರ್ತಿ ಸುರೇಶ್ ಅವರು ಬಳಿಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ‘ನೇನು ಶೈಲಜಾ’ ಚಿತ್ರದ ಮೂಲಕ ಅವರು ಫೇಮಸ್ ಆದರು. ‘ಮಹಾನಟಿ’ ಚಿತ್ರ ಅವರ ವೃತ್ತಿಜೀವನ ಬದಲಿಸಿತು. ಆ ಬಳಿಕ ಸ್ಟಾರ್ ಹೀರೋಗಳ ಎದುರು ಅವರು ತೆರೆ ಹಂಚಿಕೊಂಡರು. ಕೀರ್ತಿ ಸುರೇಶ್ ತಂದೆ-ತಾಯಿ ಇಬ್ಬರೂ ಚಿತ್ರರಂಗದ ಹಿನ್ನೆಲೆಯವರೇ ಆಗಿರುವುದರಿಂದ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಸುಲಭವಾಯಿತು.

ಕೀರ್ತಿ ಸುರೇಶ್ ಈಗಿನ ಸಂಭಾವನೆ ಎಷ್ಟು?

ಫ್ಯಾಶನ್ ಡಿಸೈನಿಂಗ್ ಕೋರ್ಸ್​ ಮುಗಿಸಿದ ಬಳಿಕ ಕೀರ್ತಿ ಸಿನಿಮಾಗೆ ಎಂಟ್ರಿ ಕೊಟ್ಟರು. ಸದ್ಯ ಕೀರ್ತಿ ಸುರೇಶ್ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಒಂದು ಚಿತ್ರಕ್ಕೆ ಅವರು ಚಾರ್ಜ್​ ಮಾಡೋದು 1-3 ಕೋಟಿ ರೂಪಾಯಿ ಎನ್ನಲಾಗಿದೆ. ಇತ್ತೀಚಿಗೆ ರಿಲೀಸ್ ಆದ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ‘ದಸರಾ’ಕ್ಕಾಗಿ ಅವರು 2 ಕೋಟಿ ರೂಪಾಯಿ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಉದ್ಯಮಿ ಜೊತೆ ಕೀರ್ತಿ ಸುರೇಶ್ ಸುತ್ತಾಟ​; ಮದುವೆ ಬಗ್ಗೆ ಮಾಹಿತಿ ನೀಡಿದ ನಟಿಯ ತಂದೆ

ಮೊದಲ ಸಂಭಾವನೆ ಎಷ್ಟು?

ಕೀರ್ತಿ ಸುರೇಶ್ ಬಾಲ ನಟಿಯಾಗಿ ಗುರುತಿಸಿಕೊಂಡಿದ್ದರು. ಅವರ ಮೊದಲ ಸಂಭಾವನೆ 500 ರೂಪಾಯಿ ಆಗಿತ್ತು. ಈ ಬಗ್ಗೆ ಅವರ ತಂದೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ‘ಭೋಲಾ ಶಂಕರ್’ ಚಿತ್ರದಲ್ಲಿ ಚಿರಂಜೀವಿ ಅವರ ತಂಗಿಯಾಗಿ ಕೀರ್ತಿ ಸುರೇಶ್ ಬಣ್ಣ ಹಚ್ಚಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ