Mrunal Thakur: ‘ಪ್ರೀತಿಯೋ, ಕಾಮವೋ?’; ಜಾಣತನದ ಉತ್ತರ ಕೊಟ್ಟ ನಟಿ ಮೃಣಾಲ್ ಠಾಕೂರ್

ಮೃಣಾಲ್ ಒಂದೇ ರೀತಿಯ ಪಾತ್ರಕ್ಕೆ ಕಟ್ಟುಬಿದ್ದವರಲ್ಲ. ‘ಸೀತಾ ರಾಮಂ’ ಚಿತ್ರದಲ್ಲಿ ಮಾಡಿದ ಪಾತ್ರಕ್ಕೆ ವಿರುದ್ಧವಾದ ಪಾತ್ರವನ್ನು ಅವರು ‘ಲಸ್ಟ್​ ಸ್ಟೋರಿಸ್ 2’ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

Mrunal Thakur: ‘ಪ್ರೀತಿಯೋ, ಕಾಮವೋ?’; ಜಾಣತನದ ಉತ್ತರ ಕೊಟ್ಟ ನಟಿ ಮೃಣಾಲ್ ಠಾಕೂರ್
ಮೃಣಾಲ್
Follow us
ರಾಜೇಶ್ ದುಗ್ಗುಮನೆ
|

Updated on:Jul 07, 2023 | 8:17 AM

ನಟಿ ಮೃಣಾಲ್ ಠಾಕೂರ್ (Mrunal Thakur) ಅವರು ಬೋಲ್ಡ್ ಪಾತ್ರಗಳನ್ನು ಮಾಡಲು ಎಂದಿಗೂ ಹಿಂದೇಟು ಹಾಕಿದವರಲ್ಲ. ಅವರು ಇತ್ತೀಚೆಗೆ ‘ಲಸ್ಟ್ ಸ್ಟೋರಿಸ್ 2’ (Lust Stories 2 Movie) ಚಿತ್ರದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ‘ಸೀತಾ ರಾಮಂ’ ಚಿತ್ರದಲ್ಲಿ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದ ಅವರು, ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಅವರು ಸಂದರ್ಶನ ಒಂದರಲ್ಲಿ ನೀಡಿದ ವಿಡಿಯೋ ಈಗ ವೈರಲ್ ಆಗಿದೆ. ‘ಪ್ರೀತಿಯೋ, ಕಾಮವೋ’ ಎಂದು ಸಂದರ್ಶಕ ಕೇಳಿದ ಪ್ರಶ್ನೆಗೆ ಅವರು ಜಾಣತನದ ಉತ್ತರ ನೀಡಿದ್ದಾರೆ.

ಮೃಣಾಲ್ ಠಾಕೂರ್ ಅಭಿಮಾನಿ ಬಳಗ ದೊಡ್ಡದಿದೆ. ‘ಸೀತಾ ರಾಮಂ’ ಚಿತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಆದರೆ,  ಮೃಣಾಲ್ ಒಂದೇ ರೀತಿಯ ಪಾತ್ರಕ್ಕೆ ಕಟ್ಟುಬಿದ್ದವರಲ್ಲ. ‘ಸೀತಾ ರಾಮಂ’ ಚಿತ್ರದಲ್ಲಿ ಮಾಡಿದ ಪಾತ್ರಕ್ಕೆ ವಿರುದ್ಧವಾದ ಪಾತ್ರವನ್ನು ಅವರು ‘ಲಸ್ಟ್​ ಸ್ಟೋರಿಸ್ 2’ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಈ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಈಗ ಅವರ ವಿಡಿಯೋ ಒಂದು ವೈರಲ್ ಆಗಿದೆ.

‘ಪ್ರೀತಿಯೋ ಅಥವಾ ಕಾಮವೋ’ ಎನ್ನುವ ಪ್ರಶ್ನೆ ಮೃಣಾಲ್​ಗೆ ಎದುರಾಗಿದೆ. ಆಗ ಮೃಣಾಲ್ ‘ಪ್ರೀತಿಯ ಜೊತೆ ಕಾಮ’ ಎನ್ನುವ ಉತ್ತರ ನೀಡಿದ್ದಾರೆ. ‘ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೆಜ್’ ಎಂದು ಕೇಳಲಾಗಿದೆ. ಇದಕ್ಕೆ ಅವರು, ‘ನಾನು ಆಗೋದು ಲವ್​ ಮ್ಯಾರೇಜ್​. ಆದರೆ, ಅರೇಂಜ್ ಮ್ಯಾರೇಜ್​ ತರಹ ಅದು ಕಾಣುವಂತೆ ಮಾಡುತ್ತೇನೆ’ ಎಂದು ಹೇಳಿದ್ದಾರೆ. ಮೃಣಾಲ್ ನೀಡಿದ ಉತ್ತರ ಅನೇಕರಿಗೆ ಇಷ್ಟವಾಗಿದೆ.

ಮೃಣಾಲ್ ಠಾಕೂರ್ ಆಗಾಗ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ‘ಸೀತಾ ರಾಮಂ’ ಚಿತ್ರದಲ್ಲಿ ನೋಡಿದ ಮೃಣಾಲ್ ಇವರೇನಾ ಎಂದು ಅನುಮಾನ ಬರುವ ಮಟ್ಟಕ್ಕೆ ಅವರು ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗೆ ಒಳಗಾದ ಉದಾಹರಣೆಯೂ ಇದೆ.

ಇದನ್ನೂ ಓದಿ: Mrunal Thakur: ‘ಲಸ್ಟ್ ಸ್ಟೋರಿಸ್ 2’ ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಮಿಂಚಿದ ಮೃಣಾಲ್ ಠಾಕೂರ್

‘ಲಸ್ಟ್​ ಸ್ಟೋರಿಸ್ 2’ ಚಿತ್ರದಲ್ಲಿ ವೇದಾ ಹೆಸರಿನ ಪಾತ್ರದಲ್ಲಿ ಮೃಣಾಲ್ ಕಾಣಿಸಿಕೊಂಡಿದ್ದಾರೆ. ವೇದಾಳ ಅಜ್ಜಿ ಈಕೆಗೆ ಮದುವೆಗೂ ಮೊದಲೇ ಗಂಡನಾಗುವನ ಜೊತೆ ಸೆಕ್ಸ್ ಮಾಡುವಂತೆ ಒತ್ತಾಯಿಸುತ್ತಾಳೆ. ಇದಕ್ಕೆ ಕಾರಣ ಏನು ಎಂಬುದನ್ನು ಅಜ್ಜಿ ತಿಳಿಸುತ್ತಾಳೆ. ಈ ರೀತಿಯಲ್ಲಿ ‘ಮೇಡ್ ಫಾರ್ ಈಚ್ ಅದರ್’ ಎಪಿಸೋಡ್ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 am, Fri, 7 July 23