Divya Khosla: ‘ಮನಸ್ಸು ಒಡೆದಿದೆ’; ಕಣ್ಣೀರಲ್ಲಿ ಕೈ ತೊಳೆದ ‘ಆದಿಪುರುಷ್’ ನಿರ್ಮಾಪಕನ ಪತ್ನಿ

Bhushan Kumar: ಪ್ರಭಾಸ್ ನಟನೆಯ ‘ಆದಿಪುರುಷ್ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಯಿತು. ಟಿ ಸೀರಿಸ್ ಬ್ಯಾನರ್ ಮೂಲಕ ಭೂಷಣ್ ಕುಮಾರ್ ನಿರ್ಮಿಸಿದ್ದರು. ಈಗ ಅವರ ಕುಟುಂಬಕ್ಕೆ ಆಘಾತ ಆಗಿದೆ.

Divya Khosla: ‘ಮನಸ್ಸು ಒಡೆದಿದೆ’; ಕಣ್ಣೀರಲ್ಲಿ ಕೈ ತೊಳೆದ ‘ಆದಿಪುರುಷ್’ ನಿರ್ಮಾಪಕನ ಪತ್ನಿ
ತಾಯಿ ಜೊತೆ ದಿವಯಾ-ಭೂಷಣ್
Follow us
ರಾಜೇಶ್ ದುಗ್ಗುಮನೆ
|

Updated on: Jul 07, 2023 | 8:15 AM

ಪ್ರಭಾಸ್ ನಟನೆಯ ‘ಆದಿಪುರುಷ್ ಚಿತ್ರ (Adipurush Movie) ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಯಿತು. ಈ ಚಿತ್ರದಿಂದ ಪ್ರಭಾಸ್​ಗೆ ತೀವ್ರ ಹಿನ್ನಡೆ ಆಗಿದೆ. ಈ ಚಿತ್ರವನ್ನು ಟಿ ಸೀರಿಸ್ ಬ್ಯಾನರ್ ಮೂಲಕ ಭೂಷಣ್ ಕುಮಾರ್ (Bhushan Kumar) ನಿರ್ಮಿಸಿದ್ದರು. ಈ ಚಿತ್ರ ಸೋತ ಬೇಸರದಲ್ಲಿ ಅವರಿದ್ದಾರೆ. ಮತ್ತೊಂದು ಕಡೆ ಅವರ ಪತ್ನಿ ದಿವ್ಯಾ ಖೋಸ್ಲಾ ಕುಮಾರ್ ತಾಯಿ ಅನಿತಾ ಮೃತಪಟ್ಟಿದ್ದಾರೆ. ಇದರಿಂದ ಅವರ ಕುಟುಂಬದಲ್ಲಿ ದುಃಖ ಆವರಿಸಿದೆ. ಗುರುವಾರ (ಜುಲೈ 6) ಅನಿತಾ ನಿಧನ ಹೊಂದಿದ ವಿಚಾರವನ್ನು ಕುಟುಂಬದವರು ಖಚಿತಪಡಿಸಿದ್ದಾರೆ.

ತಾಯಿಯನ್ನು ಕಳೆದುಕೊಂಡ ವಿಚಾರವನ್ನು ದಿವ್ಯಾ ಖೋಸ್ಲಾ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮ ತಾಯಿಯೊಂದಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ‘ಅಮ್ಮಾ.. ನನ್ನ ಹೃದಯ ಒಡೆದಿದೆ.. ನನ್ನ ತಾಯಿ ನನ್ನನ್ನು ಬಿಟ್ಟು ಹೋಗಿದ್ದಾರೆ. ಆದರೆ ಅವರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ನೀವು ನನಗೆ ಕಲಿಸಿದ ಮೌಲ್ಯಗಳನ್ನು ನಾನು ಶಾಶ್ವತವಾಗಿ ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ. ನಾನು ನಿಮ್ಮ ಮಗಳು ಎಂದು ಹೆಮ್ಮೆಪಡುತ್ತೇನೆ. ಲವ್ ಯೂ ಅಮ್ಮಾ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: HanuMan Movie: ‘ಆದಿಪುರುಷ್’ ಸೋತ ಬಳಿಕ ‘ಹನುಮಾನ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆ; ನಡೆಯಲಿದೆ ಭರ್ಜರಿ ಕ್ಲ್ಯಾಶ್

ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ದಿವ್ಯಾ ಖೋಸ್ಲಾ ಕುಮಾರ್ ಅವರನ್ನು ಸಂತೈಸುವ ಕೆಲಸ ಮಾಡಿದ್ದಾರೆ. ಅವರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ. ದಿವ್ಯಾ ಖೋಸ್ಲಾ ಕುಮಾರ್ ಈ ಹಿಂದೆ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ಕೆಲ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಫೆಬ್ರವರಿ 13, 2005ರಂದು, ಅವರು ಭೂಷಣ್ ಕುಮಾರ್ ಅವರನ್ನು ವಿವಾಹವಾದರು. 2011ರಲ್ಲಿ ಅವರಿಗೆ ಗಂಡು ಮಗು ಜನಿಸಿತು.

ಹಿಂದಿಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಟಿ ಸೀರಿಸ್​ಗೆ ಇದೆ. ‘ಆದಿಪುರುಷ್’ ಚಿತ್ರದ ಬಗ್ಗೆ ಭೂಷಣ್ ಕುಮಾರ್ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿದೆ. ರಾಮಾಯಣ ಕಥೆ ತಿರುಚಿದ ಆರೋಪ ಸಿನಿಮಾ ಮೇಲಿದೆ. ದೊಡ್ಡ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ