AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishab Shetty Birthday: ರಿಷಬ್ ಶೆಟ್ಟಿಗೆ ಈ ವರ್ಷದ ಬರ್ತ್​ಡೇ ಸಖತ್ ವಿಶೇಷ; ಸಿಗುತ್ತಾ ಹೊಸ ಅಪ್​ಡೇಟ್​?

ರಿಷಬ್ ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯಸಿ ಇದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರ ಈ ಸಿನಿಮಾ ಕುರಿತು ಇಂದು ಏನಾದರೂ ಮಾಹಿತಿ ಸಿಗಲಿದೆಯೇ ಎಂಬ ಕುತೂಹಲ ಮೂಡಿದೆ.

Rishab Shetty Birthday: ರಿಷಬ್ ಶೆಟ್ಟಿಗೆ ಈ ವರ್ಷದ ಬರ್ತ್​ಡೇ ಸಖತ್ ವಿಶೇಷ; ಸಿಗುತ್ತಾ ಹೊಸ ಅಪ್​ಡೇಟ್​?
ಅಭಿಮಾನಿಗಳು ಮಾಡಿರುವ ವಿಶೇಷ ಫೋಟೋ ಕೊಲ್ಯಾಜ್
ರಾಜೇಶ್ ದುಗ್ಗುಮನೆ
|

Updated on: Jul 07, 2023 | 6:49 AM

Share

2022ರಲ್ಲಿ ರಿಷಬ್ ಶೆಟ್ಟಿ (Rishab Shetty) ಬರ್ತ್​ಡೇ ಆಚರಿಸಿಕೊಳ್ಳುವಾಗ ‘ಕಾಂತಾರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಈ ಸಿನಿಮಾನ ಕನ್ನಡದಲ್ಲಿ ರಿಲೀಸ್ ಮಾಡಲು ಅವರು ಪ್ಲ್ಯಾನ್ ರೂಪಿಸಿದ್ದರು. ಆದರೆ, ಈ ಸಿನಿಮಾ ಇಷ್ಟು ದೊಡ್ಡ ಯಶಸ್ಸು ಕಾಣುತ್ತದೆ ಎಂದು ಅವರು ಊಹಿಸಿರಲಿಲ್ಲ. ‘ಕಾಂತಾರ’ ಸಿನಿಮಾ (Kantara Movie) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸು ಕಂಡಿತು. ಈ ಕಾರಣಕ್ಕೆ ರಿಷಬ್ ಶೆಟ್ಟಿ ಅವರಿಗೆ ಈ ವರ್ಷದ ಬರ್ತ್​ಡೇ ಸಖತ್ ಸ್ಪೆಷಲ್. ಇಂದು (ಜುಲೈ 7) ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದು, ಎಲ್ಲ ಕಡೆಗಳಿಂದ ವಿಶ್ ಬರುತ್ತಿದೆ.

ರಿಷಬ್ ಶೆಟ್ಟಿ ಅವರು ‘ತುಘ್ಲಕ್’ ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಆಗಿ ನಟಿಸಿದರು. ನಂತರ ‘ಲೂಸಿಯಾ’, ‘ಉಳಿದವರು ಕಂಡಂತೆ’ ಮೊದಲಾದ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಆಗಲೇ ಅವರಿಗೆ ನಿರ್ದೇಶನದ ಕಡೆ ಆಸಕ್ತಿ ಬೆಳೆದಿತ್ತು. 2016ರಲ್ಲಿ ಅವರು ‘ರಿಕ್ಕಿ’ ಸಿನಿಮಾ ನಿರ್ದೇಶನ ಮಾಡಿದರು. ಅದೇ ವರ್ಷ ರಿಲೀಸ್ ಆದ ರಿಷಬ್ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು.

2018ರಲ್ಲಿ ರಿಲೀಸ್ ಆದ ‘ಸಹಿಪ್ರಾ ಶಾಲೆ ಕಾಸರಗೋಡು’ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತು. ಮಕ್ಕಳನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ್ದ ಈ ಸಿನಿಮಾ ಕನ್ನಡ ಶಾಲೆಗಳ ಉಳಿಸುವ ಅಗತ್ಯತೆಯ ಸಂದೇಶವನ್ನೂ ನೀಡಿತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ರಿಷಬ್. ಕಳೆದ ವರ್ಷ ರಿಲೀಸ್ ಆದ ‘ಕಾಂತಾರ’ ಚಿತ್ರ ಅವರ ಬಣ್ಣದ ಬದುಕನ್ನೇ ಬದಲಿಸಿತು.

ಸದ್ಯ, ರಿಷಬ್ ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯಸಿ ಇದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಅವರ ಈ ಸಿನಿಮಾ ಕುರಿತು ಇಂದು (ಜುಲೈ 7) ಏನಾದರೂ ಮಾಹಿತಿ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಚಿತ್ರತಂಡ ಈ ಕುರಿತು ಏನಾದರೂ ಅಪ್​ಡೇಟ್​ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಕೊನೇಪಕ್ಷ ಸಿನಿಮಾ ಸೆಟ್ಟೇರುವ ದಿನಾಂಕವನ್ನಾದರೂ ಕೊಡಲಿ ಅನ್ನೋದು ಫ್ಯಾನ್ಸ್ ಬಯಕೆ.

ಇದನ್ನೂ ಓದಿ: ‘ಕಾಂತಾರ 2’ ಶೂಟ್​ಗೆ ದಿನಾಂಕ ನಿಗದಿ? ಇಲ್ಲಿದೆ ರಿಷಬ್ ಶೆಟ್ಟಿ ಸಿನಿಮಾ ಕುರಿತ ಮಾಹಿತಿ

ಇನ್ನು, ಬರ್ತ್​ಡೇ ಪ್ರಯುಕ್ತ ರಿಷಬ್ ಶೆಟ್ಟಿ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ನಂದಿ ಲಿಂಕ್ ಗ್ರೌಂಡ್​ನಲ್ಲಿ ಅವರು ಫ್ಯಾನ್ಸ್​ನ ಭೇಟಿ ಆಗುತ್ತಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅಭಿಮಾನಿಗಳಿಗೆ ಬರುವಂತೆ ಅವರು ಆಹ್ವಾನ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ