Sign In

By signing in or creating an account, you agree with Associated Broadcasting Company's Terms & Conditions and Privacy Policy.

Salaar Teaser: ‘ಕೆಜಿಎಫ್ 2’ ದಾಖಲೆಯನ್ನೂ ಉಡೀಸ್ ಮಾಡಿದ ‘ಸಲಾರ್​’; ಟೀಕೆ ಮಧ್ಯೆಯೂ ಕಮಾಲ್

ಸಖತ್ ಆ್ಯಕ್ಷನ್​ನೊಂದಿಗೆ ‘ಸಲಾರ್’ ಟೀಸರ್ ಮೂಡಿ ಬಂದಿದೆ. ಹೀಗಾಗಿ ಹಲವು ದಾಖಲೆಗಳನ್ನು ಈ ಚಿತ್ರದ ಟೀಸರ್ ಬರೆದಿದೆ.

Salaar Teaser: ‘ಕೆಜಿಎಫ್ 2’ ದಾಖಲೆಯನ್ನೂ ಉಡೀಸ್ ಮಾಡಿದ ‘ಸಲಾರ್​’; ಟೀಕೆ ಮಧ್ಯೆಯೂ ಕಮಾಲ್
ಪ್ರಭಾಸ್-ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Jul 07, 2023 | 10:15 AM

‘ಸಲಾರ್’ ಸಿನಿಮಾದ (Salaar Movie) ಟೀಸರ್​ಗೆ ಪ್ರೇಕ್ಷಕರು ಬಹಳ ಸಮಯದಿಂದ ಕಾದಿದ್ದರು. ಅಂತೂ ಟೀಸರ್​ ರಿಲೀಸ್ ಆಗಿದೆ. ಈ ಟೀಸರ್​​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಆದಾಗ್ಯೂ ಯೂಟ್ಯೂಬ್​ನಲ್ಲಿ ಈ ವಿಡಿಯೋ ದಾಖಲೆ ಬರೆದಿದೆ. ರಿಲೀಸ್ ಆದ 24 ಗಂಟೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಭಾರತೀಯ ಸಿನಿಮಾ ಟೀಸರ್ ಎಂಬ ಖ್ಯಾತಿ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಸಲಾರ್’ ಚಿತ್ರದ ಟೀಸರ್​ಗೆ ಸಿಕ್ಕಿದೆ. ಪ್ರಶಾಂತ್ ನೀಲ್ ಮಾಡಿದ ದಾಖಲೆಯನ್ನು ಅವರೇ ಸರಿಗಟ್ಟಿದ್ದಾರೆ ಎಂಬುದು ವಿಶೇಷ.

ಪ್ರಭಾಸ್ ಅವರ ಎಲ್ಲಾ ಸಿನಿಮಾಗಳು ಸೋಲುತ್ತಿವೆ. ‘ಬಾಹುಬಲಿ 2’ ಚಿತ್ರದ ಬಳಿಕ ಅವರಿಗೆ ಗೆಲವೇ ಇಲ್ಲದಂತಾಗಿದೆ. ಇತ್ತೀಚೆಗೆ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ ಕೂಡ ಹೀನಾಯ ಸೋಲು ಕಂಡಿತು. ಈ ಕಾರಣಕ್ಕೆ ಪ್ರಭಾಸ್ ಅಭಿಮಾನಿಗಳ ದೃಷ್ಟಿ ‘ಸಲಾರ್’ ಚಿತ್ರದ ಮೇಲಿದೆ. ಸಖತ್ ಆ್ಯಕ್ಷನ್​ನೊಂದಿಗೆ ‘ಸಲಾರ್’ ಟೀಸರ್ ಮೂಡಿ ಬಂದಿದೆ. ಹೀಗಾಗಿ ಹಲವು ದಾಖಲೆಗಳನ್ನು ಈ ಚಿತ್ರದ ಟೀಸರ್ ಬರೆದಿದೆ. ಈ ಬಗ್ಗೆ ಬಾಕ್ಸ್ ಆಫೀಸ್ ಪಂಡಿತ ಮನೋಬಲ ವಿಜಯ್​ಬಾಲನ್ ಮಾಹಿತಿ ನೀಡಿದ್ದಾರೆ.

‘ಸಲಾರ್’ ಟೀಸರ್ 24 ಗಂಟೆಯಲ್ಲಿ 8.3 ಕೋಟಿ ಬಾರಿ ವೀಕ್ಷಣೆ ಕಂಡಿದೆ. ‘ಆದಿಪುರುಷ್’ ಸಿನಿಮಾ 6.9 ಕೋಟಿ ಬಾರಿ ವೀಕ್ಷಣೆ ಕಂಡಿತ್ತು. ‘ಕೆಜಿಎಫ್ 2’ 6.88 ಕೋಟಿ ವೀಕ್ಷಣೆ ಕಂಡಿತ್ತು. ಈ ಮೂಲಕ ಟಾಪ್ ಸ್ಥಾನದಲ್ಲಿ ‘ಸಲಾರ್’ ಟೀಸರ್ ಸ್ಥಾನ ಪಡೆದುಕೊಂಡಿದೆ. ಪ್ರಶಾಂತ್​ ನೀಲ್​ಗೆ ಪ್ರಶಾಂತ್ ನೀಲ್ ಅವರೇ ಸಾಟಿ ಎಂದು ಅನೇಕರು ಹೇಳುತ್ತಿದ್ದಾರೆ.

ಪ್ರಭಾಸ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ‘ಸಲಾರ್’ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಕೆಜಿಎಫ್ 2’ ಚಿತ್ರದ ಮೂಲಕ ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಪ್ರಶಾಂತ್ ನೀಲ್ ಅವರು ‘ಸಲಾರ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಸಲಾರ್’ ಟೀಸರ್​ನಿಂದ ‘ಕೆಜಿಎಫ್ 2’ ಚಿತ್ರಕ್ಕೆ ಲಿಂಕ್ ಕೊಟ್ಟ ಪ್ರಶಾಂತ್ ನೀಲ್; ಇವುಗಳನ್ನು ಗಮನಿಸಿದ್ರಾ?

‘ಸಲಾರ್’ ಟೀಸರ್ ಅಷ್ಟು ಆಸಕ್ತಿದಾಯಕವಾಗಿಲ್ಲ ಎಂದು ಒಂದಷ್ಟು ಜನರು ಆರೋಪಿಸಿದ್ದರು. ಪ್ರಭಾಸ್ ಅವರು ಟೀಸರ್​​ನಲ್ಲಿ ಸರಿಯಾಗಿ ಕಾಣಿಸಿಲ್ಲ. ಇದು ಒಂದು ವರ್ಗದ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಆದರೂ ಟೀಸರ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ