AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kantara 2 Movie: ರಿಷಬ್ ಶೆಟ್ಟಿಗೆ ‘ಹೊಂಬಾಳೆ’ ಕಡೆಯಿಂದ ಬರ್ತ್​ಡೇ ವಿಶ್​; ಅಭಿಮಾನಿಗಳಿಗೆ ನಿರಾಸೆ

Rishab Shetty Birthday: ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬರ್ತ್​ಡೇ ದಿನ ಅವರ ಮುಂದಿನ ಸಿನಿಮಾ ಕುರಿತು ಅಪ್​ಡೇಟ್ ಸಿಗುತ್ತದೆ. ಇದೇ ಆಸೆಯಲ್ಲಿ ರಿಷಬ್ ಅಭಿಮಾನಿಗಳು ಇದ್ದರು. ಆದರೆ, ಅದು ಸುಳ್ಳಾಗಿದೆ.

Kantara 2 Movie: ರಿಷಬ್ ಶೆಟ್ಟಿಗೆ ‘ಹೊಂಬಾಳೆ’ ಕಡೆಯಿಂದ ಬರ್ತ್​ಡೇ ವಿಶ್​; ಅಭಿಮಾನಿಗಳಿಗೆ ನಿರಾಸೆ
ರಿಷಬ್
ರಾಜೇಶ್ ದುಗ್ಗುಮನೆ
|

Updated on: Jul 07, 2023 | 1:12 PM

Share

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಸಿನಿಮಾದಿಂದ ಸಾಕಷ್ಟು ಜನಪ್ರಿಯತೆ ಪಡೆದರು. ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್​. ಸದ್ಯ ರಿಷಬ್ ಶೆಟ್ಟಿ ಅವರು ‘ಕಾಂತಾರ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇಂದು (ಜುಲೈ 7) ರಿಷಬ್ ಶೆಟ್ಟಿ ಬರ್ತ್​ಡೇ. ಈ ದಿನ ಅವರ ಹೊಸ ಸಿನಿಮಾ ಬಗ್ಗೆ ಘೋಷಣೆ ಆಗಹುದು ಅಥವಾ ಹೊಸ ಸಿನಿಮಾ ಕುರಿತು ಏನಾದರೂ ಒಂದು ಮಾಹಿತಿ ಸಿಗಬಹುದು ಎಂದು ಫ್ಯಾನ್ಸ್ ಕಾದಿದ್ದರು. ಆದರೆ, ಅದು ಸುಳ್ಳಾಗಿದೆ. ಹೊಂಬಾಳೆ ಫಿಲ್ಮ್ಸ್​ ಕಡೆಯಿಂದ ರಿಷಬ್ ಬರ್ತ್​ಡೇಗೆ ವಿಶ್ ಏನೋ ಬಂದಿದೆ. ಆದರೆ, ಅದರಲ್ಲಿ ‘ಕಾಂತಾರ 2’ (Kantara 2) ಬಗ್ಗೆ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ.

ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಬರ್ತ್​ಡೇ ದಿನ ಅವರ ಮುಂದಿನ ಸಿನಿಮಾ ಕುರಿತು ಅಪ್​ಡೇಟ್ ಸಿಗುತ್ತದೆ. ಇದೇ ಆಸೆಯಲ್ಲಿ ರಿಷಬ್ ಅಭಿಮಾನಿಗಳು ಇದ್ದರು. ಆದರೆ, ಅದು ಸುಳ್ಳಾಗಿದೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಈ ಕುರಿತು ಯಾವುದೇ ಮಾಹಿತಿ ಕೊಟ್ಟಿಲ್ಲ. ಕೇವಲ ವಿಶ್ ಮಾತ್ರ ಬಂದಿದೆ.

‘ಅಗಾಧ ಪ್ರತಿಭೆ ಇರುವ ಮತ್ತು ವಿನಮ್ರ ವ್ಯಕ್ತಿ ರಿಷಬ್​ ಶೆಟ್ಟಿಗೆ ಜನ್ಮದಿನದ ಶುಭಾಶಯ. ನಟನಾಗಿ ಮತ್ತು ನಿರ್ದೇಶಕರಾಗಿ ನಿಮ್ಮಲ್ಲಿರುವ ಕೌಶಲ್ಯ ನಿಜವಾಗಿಯೂ ಸ್ಫೂರ್ತಿದಾಯಕ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕಲಾತ್ಮಕ ಯಾತ್ರೆಯು ಸದಾ ಎಲ್ಲರನ್ನೂ ಬೆರಗುಗೊಳಿಸಲಿ. ನಿಮಗೆ ನಿರಂತರ ಯಶಸ್ಸು ಸಿಗಲಿ ಎಂದು ಬಯಸುತ್ತೇವೆ’ ಎಂಬುದಾಗಿ ಹೊಂಬಾಳೆ ಟ್ವೀಟ್ ಮಾಡಿದೆ. ಈ ಟ್ವೀಟ್​ಗೆ ‘ಕಾಂತಾರ’ ಸಿನಿಮಾ ಪೋಸ್ಟರ್ ಬಳಸಲಾಗಿದೆ.

ಇದನ್ನೂ ಓದಿ: Rishab Shetty: ಪಂಚೆ ಧರಿಸಿ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

‘ಕಾಂತಾರ 2’ ಚಿತ್ರದ ಶೂಟಿಂಗ್ ಆಗಸ್ಟ್​ನಿಂದ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕಥೆ ಮಳೆಗಾಲದ ಪರಿಸರ ಬೇಡುವುದರಿಂದ ಆಗಸ್ಟ್​ನಲ್ಲಿ ಶೂಟಿಂಗ್ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ ಎಂದು ವಿಜಯ್ ಕಿರಗಂದೂರು ಈ ಮೊದಲು ಹೇಳಿದ್ದರು. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More