Updated on: Jul 07, 2023 | 12:29 PM
ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರು ‘ಕಾಂತಾರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಇದು ಈಗಲೂ ಮುಂದುವರಿದಿದೆ.
ಇಂದು (ಜುಲೈ 7) ರಿಷಬ್ ಶೆಟ್ಟಿ ಜನ್ಮದಿನ. ಅನೇಕ ಸೆಲೆಬ್ರಿಟಿಗಳು ರಿಷಬ್ಗೆ ವಿಶ್ ಮಾಡಿದ್ದಾರೆ. ನಟಿ ಸಪ್ತಮಿ ಕೂಡ ರಿಷಬ್ಗೆ ಬರ್ತ್ಡೇ ವಿಶ್ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಾತ್ರಿ 12 ಗಂಟೆಗೆ ಸಪ್ತಮಿ ಗೌಡ ಹೊಸ ಪೋಸ್ಟ್ ಹಾಕಿದ್ದಾರೆ. ರಿಷಬ್ ಜೊತೆ ಇರುವ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡು ಬರ್ತ್ಡೇ ವಿಶ್ ತಿಳಿಸಿದ್ದಾರೆ.
‘ನೀವು ಇನ್ನೂ ಮೇಲಕ್ಕೆ ಏರಿ. ಸಿನಿಮಾ ಬಗ್ಗೆ ನಿಮಗೆ ಇರುವ ಉತ್ಸಾಹ, ಪ್ಯಾಷನ್ನಿಂದ ಎಲ್ಲಾ ದಾಖಲೆಗಳನ್ನು ಮುರಿಯಿರಿ. ಸಂತೋಷ, ಪ್ರೀತಿ ಮತ್ತು ಶಾಂತಿ ಸಿಕ್ಕು ನಿಮ್ಮ ಜೀವನ ಸುಖಕರವಾಗಿರಲಿ’ ಎಂದು ರಿಷಬ್ಗೆ ಅವರು ವಿಶ್ ಮಾಡಿದ್ದಾರೆ.
‘ನಿಮ್ಮೊಂದಿಗೆ ಕೆಲಸ ಮಾಡಲು ಮತ್ತು ನಿಮ್ಮ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ’ ಎಂದು ಸಪ್ತಮಿ ಗೌಡ ಹೇಳಿದ್ದಾರೆ.
‘ಕಾಂತಾರ’ ಚಿತ್ರ ಸಪ್ತಮಿ ಗೌಡ ನಟಿಸಿದ ಎರಡನೇ ಸಿನಿಮಾ. ಈ ಚಿತ್ರದಿಂದ ಅವರ ಖ್ಯಾತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಬ್ಬಿದೆ.
ಸದ್ಯ ಸಪ್ತಮಿ ಗೌಡ ಅವರು ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನ ಮಾಡುತ್ತಿದ್ದಾರೆ.