HanuMan Movie: ‘ಆದಿಪುರುಷ್’ ಸೋತ ಬಳಿಕ ‘ಹನುಮಾನ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆ; ನಡೆಯಲಿದೆ ಭರ್ಜರಿ ಕ್ಲ್ಯಾಶ್

ಜನವರಿ 12ರಂದು ’ಹನುಮಾನ್’ ಸಿನಿಮಾ ತೆರೆಗೆ ತರುವುದಾಗಿ ತಂಡ ತಿಳಿಸಿದೆ. ಇದು ಸಂಪೂರ್ಣವಾಗಿ ಪೌರಾಣಿಕ ಕಥೆಯನ್ನು ಹೊಂದಿರುವ ಚಿತ್ರ ಅಲ್ಲ.

HanuMan Movie: ‘ಆದಿಪುರುಷ್’ ಸೋತ ಬಳಿಕ ‘ಹನುಮಾನ್’ ಚಿತ್ರದ ರಿಲೀಸ್ ದಿನಾಂಕ ಘೋಷಣೆ; ನಡೆಯಲಿದೆ ಭರ್ಜರಿ ಕ್ಲ್ಯಾಶ್
ಹನುಮಾನ್
Follow us
ರಾಜೇಶ್ ದುಗ್ಗುಮನೆ
|

Updated on: Jul 01, 2023 | 2:11 PM

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಇತ್ತೀಚೆಗೆ ರಿಲೀಸ್ ಆಗಿ ಫ್ಲಾಪ್ ಆಯಿತು. ಸಿನಿಮಾ ಬಗ್ಗೆ ಅನೇಕರು ನೆಗೆಟಿವ್ ವಿಮರ್ಶೆ ಕೊಟ್ಟರು. ಮಹಾಕಾವ್ಯವನ್ನು ಹಾಳು ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು. ಈ ಸಿನಿಮಾ ವಿರುದ್ಧ ಕೋರ್ಟ್​ನಲ್ಲಿ ಕೇಸ್ ಕೂಡ ದಾಖಲಾಯಿತು. ಸದ್ಯ ಈ ಸಿನಿಮಾ ಬಗ್ಗೆ ಹುಟ್ಟಿಕೊಂಡಿರುವ ಚರ್ಚೆ ನಿಂತಿಲ್ಲ. ಹೀಗಿರುವಾಗಲೇ ‘ಹನುಮಾನ್’ (HanuMan Movie) ಚಿತ್ರದ ರಿಲೀಸ್ ದಿನಾಂಕ ಅನೌನ್ಸ್ ಮಾಡಲಾಗಿದೆ. ಈ ಚಿತ್ರ 2024ರ ಜನವರಿ 12ರಂದು ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಇವುಗಳ ಜೊತೆ ‘ಹನುಮಾನ್’ ಸಿನಿಮಾ ಸ್ಪರ್ಧೆ ಮಾಡಬೇಕಿದೆ.

‘ಹನುಮಾನ್’ ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರ ಈ ವರ್ಷ ಮೇ ತಿಂಗಳಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ವಿಎಫ್​ಎಕ್ಸ್ ಕೆಲಸಗಳು ಬಾಕಿ ಇದ್ದಿದ್ದರಿಂದ ಸಿನಿಮಾದ ರಿಲೀಸ್ ವಿಳಂಬ ಆಯಿತು. ಈಗ ಸಿನಿಮಾ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಜನವರಿ 12ರಂದು ಸಿನಿಮಾ ತೆರೆಗೆ ತರುವುದಾಗಿ ತಂಡ ತಿಳಿಸಿದೆ. ಇದು ಸಂಪೂರ್ಣವಾಗಿ ಪೌರಾಣಿಕ ಕಥೆಯನ್ನು ಹೊಂದಿರುವ ಚಿತ್ರ ಅಲ್ಲ. ಹನುಮಂತನ ಪಾತ್ರವನ್ನು ಕೇಂದ್ರವಾಗಿ ಇಟ್ಟುಕೊಂಡು ಬೇರೆಯದೇ ಕಥೆ ಹೇಳಲಾಗುತ್ತಿದೆ.

ಪ್ರಶಾಂತ್​ ವರ್ಮಾ ಅವರ ನಿರ್ದೇಶನ ಇರುವ ‘ಹನುಮಾನ್​’ ಚಿತ್ರಕ್ಕೆ, ತೇಜ ಸಜ್ಜಾ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮಿ ಶರತ್​ಕುಮಾರ್​, ವಿನಯ್ ರೈ, ಅಮೃತಾ ಅಯ್ಯರ್​, ವೆನ್ನೆಲಾ ಕಿಶೋರ್​, ರಾಜ್​ ದೀಪಕ್​ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: Hanuman: ‘ಆದಿಪುರುಷ್​’ ಬಳಿಕ ‘ಹನುಮಾನ್​’ ಸಿನಿಮಾ ಮೇಲೆ ಮೂಡಿದೆ ನಿರೀಕ್ಷೆ: ಇದೂ ಸಹ ಪ್ಯಾನ್​ ಇಂಡಿಯಾ ಚಿತ್ರ

2024 ಸಂಕ್ರಾಂತಿಗೆ ಬಿಗ್ ಕ್ಲ್ಯಾಶ್ ಏರ್ಪಡುತ್ತಿದೆ. ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಮೊದಲಾದ ಸಿನಿಮಾಗಳು ಇದೇ ಸಂದರ್ಭದಲ್ಲಿ ರಿಲೀಸ್ ಆಗುತ್ತಿವೆ. ಇದರ ಜೊತೆ ‘ಹನುಮಾನ್​’ ಚಿತ್ರ ಕೂಡ ಸ್ಪರ್ಧೆಗೆ ಮುಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ