
ನಟಿ ನಯನತಾರಾ (Nayanthara) ಅವರು ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ಜೊತೆ ಯಾವುದೂ ಸರಿ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ. ನಯನತಾರಾ ಅವರು ಪತಿ ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದೇ ಇದಕ್ಕೆ ಕಾರಣ ಆಗಿತ್ತು. ನಂತರ ಮರಳಿ ಅವರು ವಿಘ್ನೇಶ್ ಅವರನ್ನ ಫಾಲೋ ಮಾಡೋಕೆ ಆರಂಭಿಸಿದರು. ಈ ಮಧ್ಯೆ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ಗೆ ಹಾಕಿದ ಪೋಸ್ಟ್ ಸಾಕಷ್ಟು ಗಮನ ಸೆಳೆಯುತ್ತಿದೆ.
ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರು 2022ರ ಜೂನ್ 9ರಂದು ಮದುವೆ ಆದರು. ಇದಾದ ಬಳಿಕ ಇಬ್ಬರೂ ಹಾಯಾಗಿ ಸಂಸರಾ ನಡೆಸುತ್ತಾ ಬಂದರು. ಆದರೆ, ಇತ್ತೀಚೆಗೆ ಯಾಕೋ ಅವರ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಹೇಳಲಾಗುತ್ತಿದೆ. ಹಿಗಿರುವಾಗಲೇ ನಯನತಾರಾ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ‘ಹೌದು, ಕಳೆದು ಹೋಗಿದ್ದೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ.
ಇದನ್ನೂ ಓದಿ: ವಿಘ್ನೇಶ್ ಶಿವನ್ನಿಂದ ವಿಚ್ಛೇದನ ಪಡೆಯೋ ವಿಚಾರ: ನಯನತಾರಾ ಕಡೆಯಿಂದಲೇ ಸಿಕ್ತು ಸ್ಪಷ್ಟನೆ
ನಯನತಾರಾ ಮಾಡಿದ ನಿಗೂಢ ಪೋಸ್ಟ್ನ ಅರ್ಥವೇನು ಎಂದು ಫ್ಯಾನ್ಸ್ ಚಿಂತೆಗೆ ಒಳಗಾಗಿದ್ದಾರೆ. ‘ನಯನತಾರಾ ಜೊತೆ ಯಾರಾದರೂ ಮಾತನಾಡಿ. ಅವರು ಮೊದಲಿನಂತಾಗಬೇಕು’ ಎಂದು ಕೆಲವರು ಪೋಸ್ಟ್ ಮಾಡಿದ್ದಾರೆ. ಇನ್ನೂ ಕೆಲವರು ‘ಇದು ಸಿನಿಮಾ ಪ್ರಚಾರವೋ ಅಥವಾ ನಿಜಕ್ಕೂ ನಯನತಾರಾಗೆ ತೊಂದರೆ ಆಗಿದೆಯೇ’ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ.
OMG! 😲
Can someone wit t wings talk to her 😭
Think abt t girls who follow U ❤️
Hugs from the moon 🤗🌝#Nayanthara@NayantharaU pic.twitter.com/g27i4Emodr— Amigos (@amigoz_xprs) March 7, 2024
Nayanthara’s recent Instagram story
Promotion??? 😳 Or 🤔#Nayanthara#LadySuperstar #Nayan pic.twitter.com/OIJJlhVp5L— Ragul (@RagulCinema) March 7, 2024
ನಯನತಾರಾ ಅವರು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ನಯನತಾರಾ ಹಾಗೂ ವಿಘ್ನೇಶ್ ಒಟ್ಟಿಗೆ ಇರುವ ವಿಡಿಯೋ ಇದಾಗಿತ್ತು. ಕೊಳಲು ವಾದಕರೊಬ್ಬರು ಹಂಚಿಕೊಂಡಿದ್ದ ವಿಡಿಯೋನ ನಯನತಾರಾ ಶೇರ್ ಮಾಡಿಕೊಂಡಿದ್ದರು. ಈ ಮೂಲಕ ಇಬ್ಬರ ಮಧ್ಯೆ ಎಲ್ಲವೂ ಸರಿ ಇದೆ ಎಂದು ಹೇಳಲಾಗಿತ್ತು. ಹೀಗಿರುವಾಗಲೇ ಅವರ ಹೊಸ ಪೋಸ್ಟ್ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ