ವಿಘ್ನೇಶ್ ಶಿವನ್ನಿಂದ ವಿಚ್ಛೇದನ ಪಡೆಯೋ ವಿಚಾರ: ನಯನತಾರಾ ಕಡೆಯಿಂದಲೇ ಸಿಕ್ತು ಸ್ಪಷ್ಟನೆ
ಸೆಲೆಬ್ರಿಟಿ ದಂಪತಿಗಳ ಮೇಲೆ ಫ್ಯಾನ್ಸ್ ಕಣ್ಣಿಟ್ಟಿರುತ್ತಾರೆ. ಅವರು ಮಾಡುವ ಸಣ್ಣ ಪುಟ್ಟ ವಿಚಾರಗಳ ಮೇಲೆ ಎಲ್ಲರೂ ಗಮನ ಹರಿಸುತ್ತಾರೆ. ಇತ್ತೀಚೆಗೆ ನಯನತಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಘ್ನೇಶ್ ಅವರನ್ನು ಅನ್ಪಾಲೋ ಮಾಡಿದ್ದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ ಚರ್ಚೆ ಆಯಿತು.

ವಿಘ್ನೇಶ್ ಶಿವನ್ ಹಾಗೂ ನಯನತಾರಾ (Nayanthara) ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದಕ್ಕೆ ಕಾರಣ ಆಗಿದ್ದು ನಯನತಾರಾ ಅವರ ನಡೆ. ನಯನತಾರಾ ಅವರು ವಿಘ್ನೇಶ್ ಶಿವನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದರು. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಹುಟ್ಟಿತ್ತು. ಕೆಲವು ಮಾಧ್ಯಮಗಳು ವಿಚ್ಛೇದನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈಗ ನಯನತಾರಾ ಕಡೆಯಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ಸೆಲೆಬ್ರಿಟಿ ದಂಪತಿಗಳ ಮೇಲೆ ಫ್ಯಾನ್ಸ್ ಕಣ್ಣಿಟ್ಟಿರುತ್ತಾರೆ. ಅವರು ಮಾಡುವ ಸಣ್ಣ ಪುಟ್ಟ ವಿಚಾರಗಳ ಮೇಲೆ ಎಲ್ಲರೂ ಗಮನ ಹರಿಸುತ್ತಾರೆ. ಇತ್ತೀಚೆಗೆ ನಯನತಾರಾ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಘ್ನೇಶ್ ಅವರನ್ನು ಅನ್ಪಾಲೋ ಮಾಡಿದ್ದು ಅಭಿಮಾನಿಗಳ ಗಮನಕ್ಕೆ ಬಂದಿತ್ತು. ಈ ಬಗ್ಗೆ ಚರ್ಚೆ ಆಯಿತು. ಕೆಲವೇ ಸಮಯದಲ್ಲಿ ಅವರು ಮತ್ತೆ ಫಾಲೋ ಮಾಡೋಕೆ ಆರಂಭಿಸಿದ್ದರು.
ಕೊಳಲು ವಾದಕ ನವೀನ್ ಅವರು ಹಳೆಯ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅವರು ಕೊಳಲು ನುಡಿಸುತ್ತಿರುವಾಗ ನಯನತಾರಾ ಹಾಗೂ ವಿಘ್ನೇಶ್ ಅವರು ಪ್ರೀತಿಯಿಂದ ಇದನ್ನು ಕೇಳಿದ್ದಾರೆ. ಈ ಘಟನೆ ನಡೆದಿದ್ದು 2023ರ ಜೂನ್ ತಿಂಗಳಲ್ಲಿ. ಈ ವಿಡಿಯೋನ ನವೀನ್ ಈಗ ಹಂಚಿಕೊಂಡಿದ್ದಾರೆ. ಇದನ್ನು ನಯನತಾರಾ ಅವರು ಸ್ಟೇಟಸ್ಗೆ ಹಂಚಿಕೊಂಡು ಹಾರ್ಟ್ ಮಾರ್ಕ್ ಹಾಕಿದ್ದಾರೆ. ಈ ಮೂಲಕ ಎಲ್ಲವೂ ಸರಿ ಇದೆ ಎಂಬದನ್ನು ಸ್ಪಷ್ಟಪಡಿಸಿದ್ದಾರೆ.
ನಯನತಾರಾ ಅವರಿಗೆ ನಟಿಯಾಗಿ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ‘ಜವಾನ್’ ಚಿತ್ರದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಸಿನಿಮಾದಲ್ಲೇ ಅವರಿಗೆ ಬಾಲಿವುಡ್ನಲ್ಲಿ ಗೆಲುವು ಸಿಕ್ಕಂತೆ ಆಗಿದೆ. ಇದರ ಜೊತೆಗೆ ಅವರು ಹೊಸಬರ ಸಿನಿಮಾಗಳನ್ನು ಕೂಡ ಒಪ್ಪಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ನಯನತಾರಾ ಹಾಗೂ ವಿಘ್ನೇಶ್ ಸಂಸಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು
2022ರ ಜೂನ್ 9ರಂದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸಿಂಪಲ್ ಆಗಿ ಮದುವೆ ಆದರು. ನಾಲ್ಕೇ ತಿಂಗಳಲ್ಲಿ ಅವರಿಗೆ ಮಗು ಜನಿಸಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಾಡಿಗೆ ತಾಯ್ತನದ ಮೂಲಕ ಈ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ