ರಾಂಗ್ ಸೈಡ್​ನಲ್ಲಿ ಬಂದು ಟ್ರಾಫಿಕ್ ಪೊಲೀಸರಿಗೆ ಕೆಟ್ಟ ಪದಗಳಲ್ಲಿ ಬೈದ ನಟಿ; ಕೇಸ್ ದಾಖಲು

| Updated By: ರಾಜೇಶ್ ದುಗ್ಗುಮನೆ

Updated on: Feb 28, 2024 | 11:54 AM

ಸೌಮ್ಯಾ ಜಾನು ತಮ್ಮ ಜಾಗ್ವಾರ್ ಕಾರನ್ನು ರಾಂಗ್ ಸೈಡ್​ನಲ್ಲಿ ಓಡಿಸಿಕೊಂಡು ಬರುತ್ತಿದ್ದರು. ಈ ವೇಳೆ ನಟಿ ಟ್ರಾಫಿಕ್ ಹೋಮ್ ಗಾರ್ಡ್​​ಗಳ ಕೈಗೆ ಅವರು ಸಿಕ್ಕಿಬಿದ್ದಿದ್ದಾರೆ. ಆಗ ಅವರೊಂದಿಗೆ ಸೌಮ್ಯಾ ಜಗಳ ಆರಂಭಿಸಿದ್ದಾರೆ. ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ವಾಗ್ವಾದದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಂಗ್ ಸೈಡ್​ನಲ್ಲಿ ಬಂದು ಟ್ರಾಫಿಕ್ ಪೊಲೀಸರಿಗೆ ಕೆಟ್ಟ ಪದಗಳಲ್ಲಿ ಬೈದ ನಟಿ; ಕೇಸ್ ದಾಖಲು
ಸೌಮ್ಯಾ
Follow us on

ಸೆಲೆಬ್ರಿಟಿಗಳು ಏನೇ ಮಾಡಿದರೂ ಆ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಟ್ರೋಲ್ ಆಗೋದು ಪಕ್ಕಾ. ಈಗ ಟಾಲಿವುಡ್​ನ ಯುವ ನಟಿಯೊಬ್ಬರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರು ಬೇರಾರು ಅಲ್ಲ ಟಾಲಿವುಡ್ ನಟಿ ನಟಿ ಸೌಮ್ಯಾ ಜಾನು (Soumya Janu). ವೈರಲ್ ವಿಡಿಯೋದಲ್ಲಿ ಈ ನಟಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಹೋಮ್ ಗಾರ್ಡ್‌ಗೆ ಬಾಯಿಗೆ ಬಂದಂತೆ ಬೈದಿದ್ದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ.

ಸೌಮ್ಯಾ ಜಾನು ತಮ್ಮ ಜಾಗ್ವಾರ್ ಕಾರನ್ನು ರಾಂಗ್ ಸೈಡ್ನಲ್ಲಿ ಓಡಿಸುತ್ತಿದ್ದರು. ಈ ವೇಳೆ ನಟಿ ಟ್ರಾಫಿಕ್ ಹೋಮ್ ಗಾರ್ಡ್​​ಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆಗ ಸೌಮ್ಯಾ ಅವರೊಂದಿಗೆ ಜಗಳ ಆರಂಭಿಸಿದ್ದಾರೆ. ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ಈ ಘಟನೆ ನಡೆದಿದೆ. ಸೌಮ್ಯ ಹಾಗೂ ಟ್ರಾಫಿಕ್ ಹೋಮ್ ಗಾರ್ಡ್​​ಗಳ ನಡುವಣ ವಾಗ್ವಾದದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ಪ್ರಕಾರ ಶನಿವಾರ (ಫೆಬ್ರವರಿ 24) ರಾತ್ರಿ 8.24ಕ್ಕೆ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ನಟಿಯ ಸುತ್ತಲೂ ಟ್ರಾಫಿಕ್ ಪೊಲೀಸರು ಮತ್ತು ಸಾಮಾನ್ಯ ಜನರು ಇದ್ದಾರೆ. ಆದರೆ ಅವರ ನಡುವಿನ ವಿವಾದವನ್ನು ಬಗೆಹರಿಸಲು ಯಾರೂ ಪ್ರಯತ್ನಿಸಲಿಲ್ಲ. ಜೋರಾಗಿ ವಾಗ್ವಾದ ನಡೆದಾಗ, ನಟಿ ಟ್ರಾಫಿಕ್ ಹೋಮ್ ಗಾರ್ಡ್​​ಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಅವರು ಟ್ರಾಫಿಕ್ ಗಾರ್ಡ್​ಗಳ ಮೊಬೈಲ್ ಕಸಿದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಟ್ಟೆಯಿಂದ ಸಾರ್ವಜನಿಕವಾಗಿ ಮುಜುಗರ ಅನುಭವಿಸಿದ ನಟಿಯರಿವರು

ಘಟನೆಯ ನಂತರ ಟ್ರಾಫಿಕ್ ಹೋಮ್ ಗಾರ್ಡ್ ಬಂಜಾರಾಹಿಲ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈರಲ್ ವೀಡಿಯೋ ಬಳಸಿ, ಘಟನೆಯನ್ನು ವರದಿ ಮಾಡಲಾಗಿದೆ ಮತ್ತು ಸಾಕ್ಷ್ಯವನ್ನು ಪ್ರಸ್ತುತಪಡಿಸಲಾಗಿದೆ. ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ಸೌಮ್ಯಾ ಜಾನು ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

ಘಟನೆಯ ವಿಡಿಯೋ ವೈರಲ್ ಆದ ನಂತರ, ನಟಿ ಸ್ಥಳೀಯ ಚಾನೆಲ್ ಅನ್ನು ಸಂಪರ್ಕಿಸಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಸೌಮ್ಯಾ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಟಿಯನ್ನು ಪೊಲೀಸರು ಇನ್ನೂ ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ. ಈಗ ಸೌಮ್ಯಾ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.  ಸೌಮ್ಯಾ ಜಾನು ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ಘಟನೆ ಅವರ ವೃತ್ತಿ ಜೀವನಕ್ಕೆ ಕಪ್ಪು ಚುಕ್ಕೆ ಆಗಲಿದೆ. ಅವರು ಕ್ಷಮೆ ಕೇಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ