ನಟ ಪ್ರಭಾಸ್ ಅವರು ‘ಆದಿಪುರುಷ್’ (Adipurush Movie) ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಜೂನ್ 16ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಪ್ರಭಾಸ್ ಅಭಿಮಾನಿಗಳು ಈ ಚಿತ್ರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾದಿದ್ದಾರೆ. ಪ್ರಭಾಸ್ (Prabhas) ಪಾಲಿಗೆ ಈ ಚಿತ್ರ ಬಹಳ ಮಹತ್ವದ ಪ್ರಾಜೆಕ್ಟ್ ಆಗಿದೆ. ‘ಆದಿಪುರುಷ್’ ಮೂಲಕ ಗೆಲ್ಲಲೇ ಬೇಕಾದ ಅನಿವಾರ್ಯತೆ ಅವರಿಗೆ ಇದೆ. ಹಾಗಾದರೆ ‘ಆದಿಪುರುಷ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್ (Adipurush Box Office Collection) ಮಾಡಬಹುದು ಎಂಬ ಕೌತುಕ ಎಲ್ಲರಲ್ಲೂ ಇದೆ. ಬಾಕ್ಸ್ ಆಫೀಸ್ ತಜ್ಞರ ಪ್ರಕಾರ ಈ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 100 ಕೋಟಿ ರೂಪಾಯಿ ಬಾಚಿಕೊಳ್ಳುವ ಸಾಧ್ಯತೆ ಇದೆ. ಈ ಊಹೆ ನಿಜವಾಗುತ್ತಾ ಎಂಬುದನ್ನು ತಿಳಿಯಲು ಇನ್ನು ಕೆಲವೇ ದಿನಗಳು ಬಾಕಿ. ಈ ಸಿನಿಮಾದಲ್ಲಿ ಪ್ರಭಾಸ್ಗೆ ಜೋಡಿಯಾಗಿ ಕೃತಿ ಸನೋನ್ ನಟಿಸಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿಬಂದಿದೆ. ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.
‘ಆದಿಪುರುಷ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಎಲ್ಲ ರಾಜ್ಯಗಳಲ್ಲೂ ಉತ್ತಮ ಓಪನಿಂಗ್ ಪಡೆದುಕೊಳ್ಳುವ ನಿರೀಕ್ಷೆ ಇದೆ. ಹಿಂದಿ ಪ್ರೇಕ್ಷಕರಲ್ಲೂ ಈ ಸಿನಿಮಾ ಬಗ್ಗೆ ಹೈಪ್ ಕ್ರಿಯೇಟ್ ಆಗಿದೆ. ಬಾಲಿವುಡ್ ಕಲಾವಿದರು ಈ ಚಿತ್ರದಲ್ಲಿ ನಟಿಸಿರುವುದೇ ಅದಕ್ಕೆ ಕಾರಣ. ಅಲ್ಲದೇ ಪ್ರಭಾಸ್ ಅವರಿಗೆ ಉತ್ತರ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಎಲ್ಲ ಕಾರಣದಿಂದ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೊದಲ ದಿನ ಉತ್ತಮ ಕಲೆಕ್ಷನ್ ಆಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಪ್ರಭಾಸ್ ಮೇಲೆ ರೇಪ್ ಕೇಸ್ ಇದೆ, ಜೂ ಎನ್ಟಿಆರ್ ಪೋರ್ನ್ ಸಿನಿಮಾದಲ್ಲಿ ನಟಿಸಿದ್ದಾನೆ: ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್
ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಚಿತ್ರ ಸಾಕಷ್ಟು ಸದ್ದು ಮಾಡುತ್ತಲೇ ಇತ್ತು. ಈಗ ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಮೇ 9ರಂದು ‘ಆದಿಪುರುಷ್’ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಕೌತುಕ ಹೆಚ್ಚಿಸಲಾಯಿತು. ‘ತಾನಾಜಿ’ ಖ್ಯಾತಿಯ ಓಂ ರಾವತ್ ಅವರು ನಿರ್ದೇಶನ ಮಾಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಟ್ರೇಲರ್ನಲ್ಲಿ ಅದ್ದೂರಿತನ ಕಾಣಿಸಿದೆ. ದೊಡ್ಡ ಪರದೆಯಲ್ಲಿ ‘ಆದಿಪುರುಷ್’ ಚಿತ್ರವನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿದೆ.
ಇದನ್ನೂ ಓದಿ: Prabhas: ಹೇಗಿರಲಿದೆ ‘ಸಲಾರ್’ ಸಿನಿಮಾ ಇಂಟರ್ವಲ್ ದೃಶ್ಯ? ಪ್ರಭಾಸ್ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಟ್ರೀಟ್
ರಾಮಾಯಣ ಆಧರಿಸಿ ಈಗಾಗಲೇ ಹಲವು ಧಾರಾವಾಹಿ ಹಾಗೂ ಸಿನಿಮಾಗಳು ಬಂದು ಹೋಗಿವೆ. ಆದಾಗ್ಯೂ ಓಂ ರಾವತ್ ಇದೇ ಕಥೆ ಆಧರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದಾರೆ. ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ‘ಬಾಹುಬಲಿ 2’ ಬಳಿಕ ಪ್ರಭಾಸ್ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ‘ಸಲಾರ್’, ‘ಪ್ರಾಜೆಕ್ಟ್ ಕೆ’ ಸಿನಿಮಾದ ಕೆಲಸದಲ್ಲೂ ಪ್ರಭಾಸ್ ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:13 pm, Wed, 31 May 23