ಆದಿಪುರುಷ್: ಖಾಲಿ ಸೀಟಿನ ಪಕ್ಕದ ಸೀಟಿಗೆ ಭಾರಿ ಬೆಲೆಯಂತೆ ಹೌದೆ? ಎಲ್ಲ ಹನುಮಂತನ ಮಹಿಮೆ

|

Updated on: Jun 11, 2023 | 7:36 PM

Adipurush: ಆದಿಪುರುಷ್ ಸಿನಿಮಾ ಪ್ರದರ್ಶನವಾಗುವ ಎಲ್ಲ ಚಿತ್ರಮಂದಿರಗಳಲ್ಲಿ ಒಂದು ಸೀಟನ್ನು ಖಾಲಿ ಬಿಡಲಾಗಿತ್ತು. ಆ ಸೀಟಿನ ಅಕ್ಕ-ಪಕ್ಕದ ಸೀಟಿಗೆ ಭಾರಿ ಬೆಲೆ ನಿಗದಿಪಡಿಸಲಾಗಿದೆ ಎನ್ನಲಾಗುತ್ತಿದೆ.

ಆದಿಪುರುಷ್: ಖಾಲಿ ಸೀಟಿನ ಪಕ್ಕದ ಸೀಟಿಗೆ ಭಾರಿ ಬೆಲೆಯಂತೆ ಹೌದೆ? ಎಲ್ಲ ಹನುಮಂತನ ಮಹಿಮೆ
ಆದಿಪುರುಷ್
Follow us on

ಪ್ರಭಾಸ್ (Prabhas) ನಟನೆಯ ಭಾರಿ ಬಜೆಟ್​ನ ಪ್ಯಾನ್ ಇಂಡಿಯಾ (Pan India) ಸಿನಿಮಾ ಆದಿಪುರುಷ್ (Adipurush) ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟಿಕೆಟ್ ಬುಕಿಂಗ್ ಈಗಾಗಲೇ ಓಪನ್ ಆಗಿದ್ದು ಅಡ್ವಾನ್ಸ್ ಬುಕಿಂಗ್ (Advance Booking) ಭರದಿಂದ ಸಾಗಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಬುಕಿಂಗ್ ಜೋರಾಗಿ ನಡೆಯುತ್ತಿದ್ದು, ಸಿನಿಮಾದ ಟಿಕೆಟ್ ದುಬಾರಿ ಎಂಬ ಮಾತುಗಳು ಕೇಳಿ ಬರುತ್ತಿವೆ ಅದರ ನಡುವೆ ಸಿನಿಮಾದ ನಿರ್ದೇಶಕ ಓಂ ರಾವತ್ ಮನವಿಯಂತೆ ಪ್ರತಿ ಚಿತ್ರಮಂದಿರದಲ್ಲಿ ಒಂದು ಸೀಟನ್ನು ಖಾಲಿ ಬಿಡಲಾಗುತ್ತಿದೆ. ಆದರೆ ಈ ಸೀಟಿನ ಅಕ್ಕ-ಪಕ್ಕದ ಸೀಟಿಗೆ ಭಾರಿ ಬೆಲೆ ವಿಧಿಸಲಾಗಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಇತ್ತೀಚೆಗೆ ನಡೆದ ಆದಿಪುರುಷ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ದೇಶಕ ಓಂ ರಾವತ್, ಎಲ್ಲೇ ರಾಮಾಯಣ ನಾಟಕ ನಡೆದರೂ ಆ ನಾಟಕ ನೋಡಲು ಹನುಮಂತ ಬರುತ್ತಾನೆಂಬ ಪ್ರತೀತಿ ಇದೆ. ನಮ್ಮ ಆದಿಪುರುಷ್ ಸಿನಿಮಾ ರಾಮಾಯಣದ ಕತೆ ಆಧರಿಸಿದ್ದಾಗಿದ್ದು ಅದನ್ನು ನೋಡಲು ಹನುಮಂತ ಬರುತ್ತಾನೆ ಹಾಗಾಗಿ ಸಿನಿಮಾ ಎಲ್ಲೇ ಪ್ರದರ್ಶನಗೊಂಡರು ಒಂದು ಸೀಟನ್ನು ಕಾಯ್ದಿರಿಸಿ ಎಂದು ವಿತರಕರ ಬಳಿ ಮನವಿ ಮಾಡಿದ್ದರು. ಅಂತೆಯೇ ಎಲ್ಲ ಚಿತ್ರಮಂದಿರಗಳಲ್ಲಿಯೂ ದೇವರು ಆಂಜನೇಯನಿಗಾಗಿ ಒಂದು ಸೀಟನ್ನು ಖಾಲಿ ಬಿಡಲಾಗಿದೆ.

ಆದರೆ ಹೀಗೆ ಖಾಲಿ ಬಿಟ್ಟ ಸೀಟಿನ ಅಕ್ಕ ಪಕ್ಕದ ಸೀಟಿಗೆ ಭಾರಿ ಮೊತ್ತವನ್ನು ಚಿತ್ರಮಂದಿರಗಳು ಕಲೆಕ್ಷನ್ ಮಾಡುತ್ತಿವೆ ಎಂಬ ಮಾತುಗಳು ಹರಿದಾಡುತ್ತಿವೆ. ಕೆಲವರು ಖಾಲಿ ಸೀಟಿನ ಅಕ್ಕ-ಪಕ್ಕದ ಸೀಟಿನ ಟಿಕೆಟ್ ಖರೀದಿಸಿ ಅದನ್ನು ಭಾರಿ ಮೊತ್ತಕ್ಕೆ ಬ್ಲಾಕ್​ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಸುದ್ದಿಗಳಿಗೂ ಸಹ ಹರಿದಾಡುತ್ತಿವೆ. ಈ ಕುರಿತಂತೆ ಇದೀಗ, ಆದಿಪುರುಷ್ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಟಿ-ಸೀರೀಸ್ ಟ್ವೀಟ್ ಮಾಡಿದ್ದು, ”ಆದಿಪುರುಷ್ ಟಿಕೆಟ್ ದರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ತಪ್ಪುದಾರಿಗೆಳೆಯುವ ವರದಿಗಳು ಹರಿದಾಡುತ್ತಿವೆ. ಆಂಜನೇಯನಿಗಾಗಿ ಕಾಯ್ದಿರಿಸಿರುವ ಸೀಟುಗಳ ಅಕ್ಕ-ಪಕ್ಕದ ಸೀಟುಗಳ ದರಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಇತರೆ ಸೀಟುಗಳಷ್ಟೆ ಅವಕ್ಕೂ ಬೆಲೆ ಇರುತ್ತದೆ ಎಂದು ನಾವು ಸ್ಪಷ್ಟಪಡಿಸುತ್ತಿದ್ದೇವೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ:Saif Ali Khan: ‘ಆದಿಪುರುಷ್​’ ಚಿತ್ರದ ಪ್ರಚಾರದಿಂದ ದೂರ ಉಳಿದುಕೊಂಡ ಸೈಫ್​ ಅಲಿ ಖಾನ್​; ಈ ನಿರ್ಧಾರಕ್ಕೆ ಕಾರಣ ಏನು?

ಹೀಗೆ ಹನುಮಂತನಿಗಾಗಿ ಒಂದು ಸೀಟು ಬಿಡುವ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ. ಚಿತ್ರಮಂದಿರಗಳನ್ನು ದೇವಸ್ಥಾನಗಳನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಸಿನಿಮಾ ಪ್ರದರ್ಶನದ ವೇಳೆ ತೆಂಗಿನಕಾಯಿ ಒಡೆದು, ಊದುಬತ್ತಿ ಬೆಳಗಲು ಅನುಮತಿ ನೀಡುತ್ತೀರಾ? ಎಂದು ಸಹ ಕೆಲವರು ವ್ಯಂಗ್ಯ ಮಾಡಿದ್ದಾರೆ.

ಆದಿಪುರುಷ್ ಸಿನಿಮಾವು ರಾಮಾಯಣ ಕತೆ ಆಧರಿಸಿದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದು ಸಿನಿಮಾದಲ್ಲಿ ಕೃತಿ ಸೆನನ್ ಸೀತೆಯ ಮಾತ್ರದಲ್ಲಿ ದೇವದತ್ ನಾಗರೆ ಹನುಮಂತನ ಪಾತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾವು ಜೂನ್ 16ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ